ಕುರೋಸವಾನ ದೆರ್ಸುಉಝಲ: ಕೆಲವು ಯೋಚನೆಗಳು
ಅಕಿರಾ ಕುರೋಸವಾ, ಸಿನಿಮಾ ದಿಗ್ಗಜರಾದ ಅಮೇರಿಕಾದ ಕಿಂಗ್ ವೀಡರ್ ಮತ್ತು ಹ್ಯಾರಿ ಬೆಲಾಫಾಂಟ್
ಜತೆ ಅತ್ಯಂತ ಆತ್ಮೀಯ ಸಂಬಂಧವನ್ನು ಹೊಂದಿದ್ದ. ಆದರೆ 1976ರಲ್ಲಿ ಅಮೇರಿಕಾದ ನಿರ್ದೇಶಕ ಕಿಂಗ್ವಿಡರ್
ಜತೆಗೆ ಭೇಟಿಯನ್ನು ನಿರಾಕರಿಸಿದ್ದ. ಇವರಿಬ್ಬರ ಜತೆ ಕುರೋಸವಾ ಸಿನಿಮಾ ಕುರಿತು ಗಂಟೆಗಟ್ಟಲೆ ಅತ್ಯಂತ
ತೀವ್ರವಾಗಿ ಟೋಕಿಯೋದ ‘ನ್ಯೂಒತಾನಿ’ ಹೋಟೆಲ್‍ನಲ್ಲಿ ಚರ್ಚಿಸುತ್ತಿದ್ದ. ತಾಂತ್ರಿಕೆಯ ಉತ್ಕರ್ಷವೂ ಮಾನವರಲ್ಲಿ
ಪರಕೀಯತೆಯನ್ನು ಸಾಧಿಸುತ್ತದೆ ಎಂದು ಗಾಢವಾಗಿ ಈ ತ್ರಿವಳಿಗಳು ಚರ್ಚಿಸುತ್ತಿದ್ದರು. ದೆರ್ಸುಉಝಲ ಕುರೋಸವಾನ
ಬದುಕಿನ ಮತ್ತು ಚಿತ್ರಜೀವನದ ಎರಡನೇ ಪರ್ವ. ಮುಖ್ಯವಾಗಿ ಆತನ ಆತ್ಮಹತ್ಯೆಯ ಪ್ರಯತ್ನದ ನಂತರದ್ದು. ಜಪಾನ್‍ನಲ್ಲಿ ಸಾವು
ಸಂಸ್ಕøತಿಯ ಪ್ರತಿನಿಧಿ. ಸಾವಿನ ಸಂಸ್ಕøತಿಯ ಪ್ರತಿನಿಧಿಯಾಗಿ ಕುರೋಸವಾ ಡಿಸೆಂಬರ್ 22.1977ರಲ್ಲಿ
ಆತ್ಮಹತ್ಯೆ ಮಾಡಿಕೊಂಡರು. ಇದು ಸಾವನ್ನು ಮೌಲ್ಯವೆಂದು ಸ್ವೀಕರಿಸುವ ಬೌದ್ಧ ತಾತ್ವಿಕತೆಗೆ ಸಹಜವಾದುದು.
ಜಪಾನೀ ಬದುಕಿಗೆಕೂಡಾ ಇದೊಂದು ತಾರ್ಕಿಕ ಸ್ಪಂದನೆ. ಖಾಲಿತನ, ಮಾನಸಿಕ ತುಮುಲ ಮತ್ತು ಮಾನಸಿಕ ಕುಸಿತದಿಂದ
ಸಾಯಲು ಪ್ರಯತ್ನಿಸಿದರೂ ಸಾಯದೇ ಕುರೋಸವಾ ಪುನಃ ಬದುಕಿ ‘ಹೊಸ ವ್ಯಕ್ತಿತ್ವ’ (Peಡಿsoಟಿಚಿ)ದೊಂದಿಗೆ ಹುಟ್ಟಿ ಸಿನಿಮಾ ಮಂಚಕ್ಕೆ ಬಂದರು. ಜಪಾನೀ ಸಿನಿಮಾದ ಚತು:ರ್ಮುಖಗಳಾದ
ಕುರೋಸವಾ, ಮಸಾಕೀ ಕೊಬಾಯಾಕೀ, ಕೀಸುಕಿ ಕಿನೋಶೀಟಾ ಮತ್ತು ಕೋನ್ ಇಚಿಕಾವರೆಗೆ ಸಮಕಾಲೀನ ಜಪಾನೀ ಸಿನಿಮಾ
ಜಗತ್ತಿನ ಬಗ್ಗೆ ಸಾಕಷ್ಟು ಕಳಕಳಿಯಿತ್ತು. ಜಪಾನಿ ಸಿನಿಮಾವು, ನೀಲಿ ಚಿತ್ರ, ಯಾಕುಝಾ ಚಿತ್ರ ಅಥವಾ
ಗ್ಯಾಂಗ್‍ಸ್ಟರ್ ಅಥವಾ ಪುಂಡುಪೋಕರಿ ಚಿತ್ರ, ದುರಂತ ಚಿತ್ರ ಮತ್ತು ತಿಳಿಹಾಸ್ಯದ ಹೆದ್ದಾರಿಯಲ್ಲಿ
ಸಾಗುತ್ತಿದ್ದಾಗ, ಅದನ್ನು ತಪ್ಪಿಸಿ ಹೊಸ ರೀತಿಯಲ್ಲಿ ಜಪಾನೀ ಸಿನಿಮಾವನ್ನು ಪುನರುಜ್ಜೀವನಗೊಳಿಸುವಂತಹ
ತಾಹತಹ್ಯವಿತ್ತು. ಈ ನೆಲೆಯಲ್ಲಿ ಕುರೋಸವಾ, “ಡೊಡೆಸುಕೆಡೆನ್” ಮೂಲಕ ಈ ಪ್ರಯತ್ನವನ್ನು
ಮಾಡಿದರಾದರೂ ಬಾಕ್ಸ್ ಆಫೀಸ್‍ನಲ್ಲಿ ಸೋತದ್ದರಿಂದ ಕುರೋಸವಾ ಎದೆಗುಂದಿದರು. ಅತ್ಯಂತ ದೊಡ್ಡ ಚಿತ್ರಕಾವ್ಯವನ್ನು
ಸೃಷ್ಠಿಸಿದರೆ ಮಾತ್ರ ಈ ಸೋಲಿನಿಂದ ಹೊರಬರಬಹುದೆಂಬುದೂ ಅವರ ಗ್ರಹಿಕೆಯಾಗಿತ್ತು. ಈ ಪ್ರಯತ್ನ ಅಷ್ಟು
ಸುಲಭವಲ್ಲವೆಂಬ ಸಂಗತಿ, ವಾಸ್ತವ ಕೂಡಾ ಆತನಿಗರಿವಿತ್ತು. ವಯಸ್ಸೂ ದಾಟುತ್ತಿದ್ದ ಆ ಸಂದರ್ಭದಲ್ಲಿ,
ಜಪಾನಿನ ಸಾವಿನ ಸಂಸ್ಕøತಿ, ಬೌದ್ದ ತಾತ್ವಿಕತೆಗೆ ಶರಣಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ. ಈ ನೆಲೆಯಲ್ಲಿ
ಆತ ಬದುಕಿ ಬಂದು, ಹಳೆಯ ವಿಚಾರಗಳನ್ನೂ ಕೂಡಾ ಸಾಯಿಸಿ ಹೊಸ ತಾತ್ವಿಕತೆ ದೃಷ್ಠಿಯಿಂದ ಮಾಡಿದ ಸಿನಿಮಾವೇ,
“ದೆರ್ಸುಉಝಲ”. ಅಮೇರಿಕಾದ ತವಕ, ಅಲ್ಲಿನ ಗುಣಮಟ್ಟದ ತೆವÀಲು ಕುರೋಸವಾನನ್ನೂ ಬಿಡಲಿಲ್ಲ. ಭಾಗಶ: ಈ ರೀತಿ ಡೊಡೆಸುಕೆಡನ್ ಸೋಲು, ಹಾಲಿವುಡ್ ತೆವಲು, ನಿರಾಸೆ,
ಪರಕೀಯತೆ, ಸಾವಿನ ಬಗೆಗೆ ಬೌದ್ದ ಧರ್ಮೀಯ ದೃಷ್ಠಿ, ಈಗಾಗಲೇ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ
ಆತ್ಮಹತ್ಯೆಗೆ ಪ್ರಯತ್ನಿಸಿದ ನೊಬೆಲ್ ವಿಜೇತ ಸಾಹಿತಿ ಯಸುನಾರೀ ಕವಾಬಾಟರಂತವರ ನಿದರ್ಶನಗಳು, ಬದುಕಿನ
ಬಗ್ಗೆ ‘’ಮನಸ್ಸಿಲ್ಲದ ಮನಸ್ಸು’’ ಹೀಗೆ ಹಲವು ಸಂಗತಿಗಳು ಆತನನ್ನು ಆತ್ಮಹತ್ಯೆಗೆ ಪ್ರಚೋದಿಸಿತಾದರೂ
ಕೂಡಾ, ಫಲವಾಗಿ ಸಾಯದೇ, ಬದುಕಿದ ಕುರೋಸವಾ ಒಂದು “ ಹೊಸಪರ್ವ”ವನ್ನೇ ಸೃಷ್ಠಿಸಿದ.
ಪ್ರಸಿದ್ಧ ಜಪಾನೀ ಸಿನಿಮಾಗಳ ವಿಮರ್ಶಕ ಡೊನಾಲ್ಡ್ ರಿಚೀ ಹೇಳುವ ಹಾಗೆ, “ದೆರ್ಸುಉಝಲÀ” ಕುರೋಸವಾ ಸಿನಿಮಾಗಳ ಒಂದು ಅವಸ್ಥಾಂತರ, ಒಂದು ರೀತಿ ಹೊಸದಾಗಿ ಹುಟ್ಟಿದ, ವಿಚಾರ ಯೋಚನೆಗಳ
ಪುನರ್ಜನ್ಮ” ಕೂಡಾ ಹೌದು.
1972 ರಲ್ಲಿ ಕುರೋಸವಾ ಸಂಪೂರ್ಣ ಜಪಾನೀ ಸಂಸ್ಥೆಯಾದ ಟೋಹೋವನ್ನು ಬಿಟ್ಟು, ರಷ್ಯಾದ ಪ್ರಭುತ್ವ
ಮತ್ತು ಒosಜಿiಟm ಜತೆಗೂಡಿ ಸಿನಿಮಾ ಮಾಡುವ ಯೋಚನೆಯಲ್ಲಿದ್ದರು. ರಷ್ಯಾ ಪ್ರಭುತ್ವ ಸೈಬೀರಿಯಾ ಪ್ರದೇಶವನ್ನು,
ಅಲ್ಲಿನ ಪ್ರಾಕೃತಿಕ ಸಹಜ ಶ್ರೀಮಂತಿಕೆಯನ್ನು ಪ್ರದರ್ಶಿಸಿ ಅಲ್ಲಿನ ಆರ್ಥಿಕ ಅಭಿವೃದ್ಧಿಯನ್ನು ಪ್ರಸ್ತುತಪಡಿಸುವ,
ತನ್ಮೂಲಕ ಆರ್ಥಿಕ ಸಮೀಕರಣ ಮತ್ತು ಜಾಹೀರಾತುರೂಪೀ ಪ್ರಯತ್ನಕ್ಕಾಗಿ ಅಕ್ಷರಶ: ಮಾಕ್ರ್ಸ್ ಹೇಳುವ,
“ಜ್ಞಾನ, ವಿಜ್ಞಾನ, ಅಂತ:ಪ್ರಜ್ಞೆ, ಸೌಂದರ್ಯ, ಕಲೆ, ಎಲ್ಲಾ ಕೂಡಾ ಭೌತ ಸಂಸ್ಕøತಿಯ ಫಲ”ವೆನ್ನುವ ವಿಚಾರದ ಅನ್ವಯದ ಪ್ರಯತ್ನವೋ ಎಂಬಂತೆ ಮೂಡಿದ್ದು ಚೋದ್ಯವೇ ಸರಿ.
ದೆರ್ಸುಉರhiಲದ’ಕತೆ, ರಷ್ಯಾದ ಯೋಧ ಮತ್ತು ಅನ್ವೇಷಕ ವ್ಲಾದಿಮಿರ್ ಅರ್ಸೆನೀವ್ ರಷ್ಯಾ-ಮಂಚೂರಿಯಾ
ಗಡಿಭಾಗದಲ್ಲಿ, ನಡೆಸಿದ ನಕ್ಷೀಕರಣದ ಸುತ್ತ ಇರುವ ಅನುಭವಗಳದ್ದು, ಇದನ್ನು ಕುರೋಸವಾ, 1975 ರಲ್ಲಿ
ಓದಿದ್ದ ಮತ್ತು ರಷ್ಯನ್ ಟೆಲಿವಿಷನ್ ವಿಭಾಗ ಇದರ ಕುರಿತು 1965ರ ಹೊತ್ತಲ್ಲಿಯೇ ಕಿರುಚಿತ್ರಗಳನ್ನು
ನಿರ್ಮಿಸಿತ್ತಾದರೂ ಕೂಡಾ, ಅರ್ಸೆನಿವ್‍ಗೆ ಸಹಾಯ ಮಾಡಿದ, ಡೆರ್ಸುಉಝಲ ಸಿನಿಮಾದ ಮುಖ್ಯ ಕೇಂದ್ರವಾದ
“ದೆÉರ್ಸು” ಆ ಕಿರುಚಿತ್ರಗಳಲ್ಲಿ ಸಾಹಸದ ಸಂಕೇತವಾದನೇ ಹೊರತು, ನೈತಿಕತೆಯನ್ನು ಪ್ರತಿನಿಧಿಸುವ ಪ್ರತಿನಿಧಿತ್ವವನ್ನು
ಆತ ಕಾಣಲಿಲ್ಲ. ಈ ನೆಲೆಯಲ್ಲಿ ದೆÉರ್ಸುವಿನ ಸಮಗ್ರ, “ನೈತಿಕತೆ ಪ್ರತಿಧ್ವನನ ಪ್ರತಿನಿದಿತ್ವ್ವ”ಕ್ಕೆ ಒತ್ತು ಕೊಡಲು 70ಎಂ.ಎಂ ವಿಶಾಲತೆಯ ಬೃಹತ್ ಪರದೆಯನ್ನು ವ್ಯಾಪಿಸುವ, ಲುಪ್ತತೆಗೆ ಅವಕಾಶವಾಗದ
ಹಾಗೆ, ಧ್ವನಿಯನ್ನು ಹಿಡಿಯಲು ಅನುಕೂಲವಾಗುವ ಹಾಗೆ, ಅನುಭವಜನ್ಯತೆಯನ್ನೇ ಅಣಕಿಸುವ ಹಾಗೆ ಸೃಷ್ಠಿಸಿದ
6 ಸ್ಟೀರಿಯೊಫೋನಿಕ್ ಧ್ವನಿ ವ್ಯವಸ್ಥೆಯನ್ನು, ಅಷ್ಟದಿಕ್ಕುಗಳಿಂದಲೂ ಕೂಡಾ ಚಿತ್ರೀಕರಣ ಯೋಗ್ಯವಾಗುವ
ಹಾಗೆ ಕ್ಯಾಮರಾಗಳನ್ನಿಟ್ಟು ದೆÉರ್ಸುವನ್ನು ಸೃಷ್ಟಿಸಿದ ತಪಸ್ಸೇ ‘ದೆÉರ್ಸುಉಝಲ’.
ದೈನಂದಿನ ಬದುಕಿನ ಸಾವಯವತೆ, ದೈನ್ಯ, ದುಮ್ಮಾನ, ಕ್ಲೇಶ, ಸಂಕಟ, ಪ್ರೀತಿ, ಅಚ್ಚರಿ, ಹತಾಶೆ,
ಖುಷಿ, ಸಂದಿಗ್ಧತೆಗಳನ್ನು ಮತ್ತು ಸದ್ಯದ ಸ್ಥಿತಿಗೆ ಅಗತ್ಯವೆಂದು ಪ್ರತಿಪಾದಿಸ ಹೊರಟು ಮನುಷ್ಯಸಂಬಂಧಗಳನ್ನೇ
ಸಿಂಹಾವಲೋಕನ ಕ್ರಮದ ಮೂಲಕ ಮಿಶ್ರೀಕರಿಸಿ, ಎಲ್ಲಾ ಗುಣಪ್ರವೃತ್ತಿಗಳನ್ನು ಆಯ್ದು, ಕುರೋಸವಾ ಸಮಯದ
ಜಾಗತೀಕೃತ, ಉಪಭೋಗೀಯವಾದದ, ಜಗತ್ತಿಗೆ ಒಂದು ಸರಳ ಸಜ್ಜನಿಕೆಯ “ಆದರ್ಶಿಕೃತ ಮಾನವ ವಿಧ”ವನ್ನು ಸೃಷ್ಟಿಸಿದ್ದರ ರೂಪಕವೇ ದೆÉರ್ಸು”. ಆಧುನಿಕ ನಾಗರೀಕತೆ ಸಂಸ್ಕøತಿ ಪುರೋಗಾಮಿಯಾಗಿ ಓಡುತ್ತಿರುವಾಗ, ಸಭ್ಯತೆ,ಸರಳತೆ, ಸಹಜತೆ
ಪೂರಿತ ಮಾನವಗುಣಗಳು ಹಿಮ್ಮುಖವಾಗಿ ಓಡುತ್ತಿದ್ದನ್ನು ಮನಗಂಡು ಅದಕ್ಕಾಗಿ ನೆನೆದು, ದೆರ್ಸು ಜನತೆಜತೆಗೆ
ಕುರೋಸವಾ ಖುಷಿ ಪ್ರೀತಿಯಿಂದ ಓಡುತ್ತಿದ್ದಾನೆ ಎಂಬ ಚಿತ್ರವನ್ನು ಈ ಚಿತ್ರ ನಮಗೆ ಕಟ್ಟಿಕೊಡುತ್ತದೆ.
ಬರೀ ಅರ್ಸೆನೀವ್ ದಾಖಲೆಗಳು ಮತ್ತು ಸಮಕಾಲೀನ ಆಧುನಿಕ ಜಗತ್ತು ಆಧುನಿಕತೆ, ಜಾಗತೀಕರಣ, ಕೊಳ್ಳುಬಾಕತನ,
ಮುಂತಾದ ಸಂಗತಿಗಳೊಂದಿಗೆ ಸಾಮಾಜಿಕ, ರಾಜಕೀಯ ಮತ್ತು ನೈತಿಕನೆಲೆಯಲ್ಲಿ ಅನುಸಂಧಾನ ಮತ್ತು ಮುಖಾಮುಖಿಯಾಗಿದ್ದ,
ಮತ್ತು ಸಂಘರ್ಷಕ್ಕೊಳಗಾಗಿದ್ದ ಸಂದರ್ಭದಲ್ಲಿ, ಈ ಎಲ್ಲಾ ಮೇಲಿನ ಅಂಶಗಳ ಜತೆ ಯೌವನದಲ್ಲಿಯೂ ಕುರೋಸವಾನನ್ನು
ಪ್ರಭಾವಿಸಿದ್ದ ಮತ್ತು ವೃದ್ಧಾಪ್ಯ ಅಥವಾ 65,70 ರ ವಯಸ್ಸಿನ ಆ ಹೊತ್ತಿಗೆ ಆತನನ್ನು ವಿಭಿನ್ನ ಮನೋಪಾತಳಿಯಲ್ಲಿ
ಕಾಡುತ್ತಿದ್ದ “ದಾಸ್ತೋವಸ್ಕಿತನ” ಕೂಡಾ ದೆÉರ್ಸುಉಝಲದ ಹುಟ್ಟಿಗೆ ಕಾರಣವಾಯ್ತು. ದಾಸ್ತೋವಸ್ಕಿಯ, “ಮಾನವ ನರಳಾಟ, ಹತಾಶೆಯ
ಸಂದರ್ಭದಲ್ಲಿಯೂ ಕೂಡಾ ಆತ ತನ್ನ ಸ್ಥಿತಿಯ ಬಗ್ಗೆ ಕರುಣಾಪೂರಿತ ಮತ್ತು ವಿಶ್ವಾಸವನ್ನು ತೋರ್ಪಡಿಸುವ,
“ನಿಹಿಲಿಸಮ್” ಗಿಂತ ಭಿನ್ನವಾಗಿ ಸ್ಲಾವೋಪಿಲಿಸಂ, ದೆÉರ್ಸು ಉಝಲದ ತಾತ್ವಿಕತೆಯನ್ನು ಸೃಷ್ಠಿಸಿತು. ಈ ರೀತಿಯ
ಚಿಂತನೆ ಕುರೋಸವಾಗೆ ಸೈದ್ಧಾಂತಿಕ ಹಿನ್ನಲೆಯನ್ನು ಒದಗಿಸಿತು.ಆ ನೆಲೆಯಲ್ಲಿಯೇ, ‘ದೆರ್ಸು’ ಮೇಲೆ ಕುರೋಸವಾಗೆ ಸರಳ ಪ್ರೀತಿಯ ಅಧಿಕಾರ ಮತ್ತು ಘನತೆ ವ್ಯಕ್ತವಾಯಿತು.
ಕುರಸೋವಾ ‘ದೆರ್ಸು’ ರೀತಿಯ ವ್ಯಕ್ತಿಗಳ ಮೂಲಕ ಜಾಗತೀಕೃತ, ಕೈಗಾರಿಕೀಕೃತ ವಿಶ್ವದಲ್ಲಿ
ಒಬ್ಬ ವ್ಯಕ್ತಿ ನಿಸರ್ಗದೊಂದಿಗೆ ಹೊಂದಿರುವ ಸಮತೋಲನವನ್ನು ಪುನರ್ ಸ್ಥಾಪಿಸುವುದು ಕಷ್ಟ ಎಂಬ ಆಶಯವನ್ನು
ವ್ಯಕ್ತಪಡಿಸುತ್ತಾನೆ. ನಿಸರ್ಗವನ್ನು ಪಳಗಿಸುವ ಶಕ್ತಿ ಪಡೆದರೂ, ಜ್ಞಾನವನ್ನು ಹೊಂದಿದರೂ ಕೂಡಾ ಇದು
ಸಾಧ್ಯವಾಗುವುದಿಲ್ಲ ಎನ್ನುವುದನ್ನು ಪ್ರಸ್ತುತಪಡಿಸುತ್ತಾನೆ. ಇಡೀ ಸಿನಿಮಾದ ಮೂಲಕ ದೆರ್ಸುವಿನ ಮುಗ್ದತೆ,
ಸರಳತೆ, ಸಾವಯವತೆ ಮುಂತಾದವುಗಳಿಗೆ ಆಧುನಿಕ ನಾಗರೀಕತೆ ಮತ್ತು ಅಭಿವೃದ್ಧಿಯು ಮಾರಕ ಮತ್ತು ಶತ್ರುರೂಪಿ
ಎಂಬುದೇ ಇಡೀ ಸಿನಿಮಾದ ತಿರುಳು.
ಈ ವಿಚಾರವನ್ನು ಪ್ರಸ್ತುತಪಡಿಸುವ ಸಲುವಾಗಿಯೇ ಅತ್ಯಂತ ವಿಸ್ತಾರದ ಸ್ಕ್ರೀನ್, ಇಡೀ ಪ್ರದೇಶ
ಕಾಡು, ನಿಸರ್ಗದ ಶಬ್ದವನ್ನು ಗ್ರಹಿಸುವ ಸ್ಟೀರಿಯೋ, ಅಷ್ಟ ದಿಕ್ಕುಗಳಿಂದ ಕ್ಯಾಮೆರಾ ಮುಂತಾದವುಗಳಿಂದ
ಒಂದು ಭವ್ಯತೆಯನ್ನು, ಮಹಾಕಾವ್ಯವನ್ನು ಸೃಷ್ಠಿಸಿದ.ಇದರಲ್ಲಿ ಭೂಮಿಯ ಸಾಮಾನ್ಯ ಮನುಷ್ಯನಿಗಿಂತ ಭಿನ್ನನಾದ,
ಶುದ್ಧ, ಒಳ್ಳೆಯವನಾದ ಗೋಲ್ಡ್ ಆದಿವಾಸಿ ಜನಾಂಗದ ದೆÉರ್ಸುವನ್ನು ಪ್ರತಿಮೆಯಾಗಿ ಬಳಸಿದ. ಚಿತ್ರದ ಕಥೆಯ
ಆರಂಭ ಮತ್ತು ಕೊನೆ ಎರಡೂ ಕೂಡಾ ಸಿನಿಮಾದ ಕೇಂದ್ರ ಪಾತ್ರ ದೆರ್ಸುವಿನ ಸಾವಿನೊಂದಿಗೆ ನಂತರ ಸಿಂಹಾವಲೊಕನ
ಕ್ರಮ, ತಂತ್ರದ ಮೂಲಕ ಕ್ಯಾಪ್ಟನ್ ಅರ್ಸೆನೀವ್‍ನು ರಷ್ಯನ್ ಮಂಚೂರಿಯನ್ ಗಡಿಭಾಗದ ಉಸ್ಸುರಿ ಪ್ರದೇಶವನ್ನು
ಆವಿಷ್ಕರಿಸಿದ್ದನ್ನು ತಿಳಿಸುತ್ತದೆ. ಆರಂಭದ ದೃಷ್ಯ 1910ರಲ್ಲಿನ ಸೈಬಿರಿಯಾದ ಹೊಸ ನಿವೇಶನದ್ದು.
ಅದು ಹಿಂದೊಮ್ಮೆ ಹಚ್ಚ ಹಸಿರಾಗಿದ್ದು, ದಟ್ಟವಾಗಿದ್ದು ಈಗ ರಸ್ತೆಗಳು, ಟಿಂಬರ್‍ಮಿಲ್‍ಗಳು, ಮತ್ತು
ಒತ್ತೊತ್ತಿಗಿದ್ದ ಮನೆಗಳ ದೃಶ್ಯದ ಜೆ.ಸಿ.ಬಿ ಅಥವಾ ಪೋಕ್‍ಲೈನ್‍ನ ಅತಿಯಾದ ಶಬ್ದ ಮತ್ತು ಅದು ದಿಮ್ಮಿಗಳನ್ನು
ಎತ್ತಿ ಬಿಸಾಕುವ ಸಂಗತಿಗಳು, ಸಹಜ ಸೌಂದರ್ಯ ಮತ್ತು ಆ ಪರಿಸರದ ಪ್ರಕ್ರಮವನ್ನೇ ನಾಶಮಾಡಿರುವುದನ್ನು
ನಮಗೆ ಮನಗಾಣಿಸುತ್ತದೆ. ಇಂತಹ ದೃಶ್ಯಗಳ ನಡುವೆ ದೆರ್ಸುವಿನ ಗೋರಿ ಕಳೆದುಹೋಗಿರುವುದನ್ನು ಕಂಡು ಅರ್ಸೆನೀವ್
ಮರುಕಪಡುತ್ತಾನೆ. ಇದು ಬರೀ ಅರ್ಸೆನೀವ್ ಮರುಕವಾಗಿರದೇ, ಅತ್ಯಂತ ತೀವ್ರವಾದ ಕೈಗಾರಿಕೀಕರಣದ ನಡುವೆ,
ಮಾನವನ ಕೃತಜ್ಞತೆಯ ಸಂಕೇತಗಳು ಮುಖ್ಯವಾಗದೇ, ನೈತಿಕತೆ ಪ್ರಮುಖವಾಗದೇ ಭೌತಿಕತೆ ರಾರಾಜಿಸುವುದರ, ವಿಜೃಂಭಿಸುವುದರ
ಸಂಕೇತವೂ ಕೂಡಾ ಆಗಿದೆ. ಡೋನಾಲ್ಡ್ ರಿಚೀ ಹೇಳುವ ಹಾಗೆ, “ಇದು ಮಾಕ್ರ್ಸ್‍ನ ವಿಜಯವೂ ಅಲ್ಲ, ಬದಲಿಗೆ
ಗಾಂಧಿಯ ಸೋಲೂ ಅಲ್ಲ: ಬದಲಿಗೆ ಆಧುನಿಕತೆಯ ಮೇಲಿನ ಒಂದು ಸಭ್ಯತೆ, ಸಂಸ್ಕøತಿ, ನಾಗರೀಕತೆಯ ಸೋಲು.”
ಗಾಂಧಿಯ ಹಿಂದ್ ಸ್ವರಾಜ್, ಈ ಸಂದರ್ಭದಲ್ಲಿ ನಮ್ಮನ್ನು ಎಚ್ಚರಿಸಿದ ನೆಲೆಯಲ್ಲಿಯೇ ಈ ದೃಶ್ಯವೂ ನಮ್ಮನ್ನು
ಎಚ್ಚರಿಸಿ ಕಾಡುತ್ತದೆ. ಈ “ಆಧುನಿಕತೆ”, ಆಧುನಿಕ ಸಂದರ್ಭವು, ಅತ್ಯಂತ ನೈಸರ್ಗಿಕ, ಸಹಜ, ಸಾಮರಸ್ಯಪೂರ್ಣ
ಸಂಗತಿಗಳ ಬಗೆಗೆ ಎಷ್ಟು ನಿರ್ಭಾವುಕವಾಗಿ ವರ್ತಿಸುತ್ತದೆ ಎನ್ನುವುದನ್ನು ಈ ಸಂದರ್ಭದ ದೃಶ್ಯವೂ ಒಂದು
ದಿಕ್ಸೂಚಿ ದೃಶ್ಯವಾಗಿ ನಮ್ಮನ್ನು ಹಿಡಿದಿಡುತ್ತಾ, ಸಿನಿಮಾದ ಬಗ್ಗೆ ಒಂದು ಪ್ರಸ್ತಾವನೆಯನ್ನು ಹರಡುತ್ತದೆ.
ಸಿನಿಮಾದ ಮೊದಲ ಅವಧಿ 1902ರ ಸುಮಾರಿಗೆ ನಮ್ಮನ್ನು ಕರೆದೊಯ್ಯತ್ತದೆ. ಅರ್ಸೆನೀವ್ ಟೈಗಾ ವಲಯದ
ಉಸ್ಸುರಿ ಪ್ರದೇಶದ ಆವಿಷ್ಕಾರಕ್ಕೆ ಬರುತ್ತಾನೆ. ಅಲ್ಲಿ ದೆರ್ಸು (ಮಾಕ್ಸಿಂ ಮುಂಝಕ್) ಪರಿಚಯವಾಗಿ,
ದಟ್ಟ ನಿಗೂಢ ಕಾಡಿನಲ್ಲಿ ಅರ್ಸೆನೀವ್ ಮತ್ತು ಅವನ ರಷ್ಯನ್ ಯೋಧರ ಬಳಗವನ್ನು ಮುನ್ನೆಡೆಸುತ್ತಾನೆ.
ಕಾಡಿನ ಒಂದೊಂದೇ ನಿಗೂಢಗಳನ್ನು ಬಿಚ್ಚುತ್ತಾ, ಅಲ್ಲಿ ನಡೆಯಲಿರುವ ಒಂದೊಂದೇ ಘಟನೆಗಳನ್ನು ಮೊದಲೇ ಗ್ರಹಿಸಿ
ಅಚ್ಚರಿಗೊಳಿಸುತ್ತಾನೆ. ಅತ್ಯಂತ ನಿರ್ಣಾಯಕ ಸಂದರ್ಭದಲ್ಲಿ
ಗುಂಪಿನಿಂದ ಬೇರೆ ಇದ್ದ ದೆರ್ಸು ಮತ್ತು ಅರ್ಸೆನೀವ್, ಒಂದು ಹಂತದಲ್ಲಿ ಅತ್ಯಂತ ಪ್ರಖರವಾಗಿ
ಬೀಸಿದ ಹಿಮಪಾತ ಮತ್ತು ಗಾಳಿಯಿಂದ ಸತ್ತೇ ಹೋದರು ಎನ್ನುವಾಗ ದೆÉರ್ಸುವಿನ ಸಮಯಪ್ರಜ್ಞೆ, ಚುರುಕುತನದಿಂದ
ಜತೆಗೂಡಿ ಬದುಕಿದರು. ದೆರ್ಸುವಿನ ಜ್ಞಾನ, ಆ ಕಾಡಿನ ಜಗತ್ತಿನೊಂದಿಗೆ ಆತನನ್ನು ಬೆಸೆದುಕೊಂಡ ಪರಿಸರದÀ
ಕಾರಣದಿಂದ ಇದು ಸಾಧ್ಯವಾಯಿತು. ನಿಸರ್ಗದ ಶಕ್ತಿ ಮತ್ತು ಭವ್ಯತೆಯ ನಡುವೆ, ವ್ಯಕ್ತಿ ತುಂಬಾ ಅಮಹತ್ವಿಕೆಯವ
ಎನ್ನುವ ಮನೋಭಾವ ಆತನನ್ನು ಅರ್ಸೆನೀವ್ ಜೊತೆಗೂಡಿ ಬದುಕಿಸಿತು. ದೆರ್ಸುವನ್ನು ಭೇಟಿ ಮಾಡುವುದಕ್ಕಿಂತ
ಮುಂಚೆ, ಅಂತಹ ಸಹಜ ಕಾಡಿನ ಜಗತ್ತಿನಲ್ಲಿ ಬದುಕುವ ಬಗ್ಗೆ ಆರ್ಸನೀವ್ ತಂಡ ಅನಿಶ್ಚಿತ್ತತೆಯಲ್ಲಿ, ಭಯದ
ನೆರಳಲ್ಲಿ ಇದ್ದರು. ಈ ಸುಶಿಕ್ಷಿತ, ನಾಗರೀಕತೆಗೆ ಸೇರಿದ ಜನರು ದೆÉರ್ಸುವಿನ ಸಹಾಯವಿಲ್ಲದೇ ಇದ್ದಿದ್ದರೆ
ಸಂಪೂರ್ಣ ಕಳೆದೇ ಹೋಗುತ್ತಿದ್ದರು.
ಸಿನಿಮಾದ ದ್ವಿತೀಯಾರ್ಧ 1907ರಲ್ಲಿ ಆರಂಭವಾಗಿ ಪುನಃ ಮತ್ತೊಮ್ಮೆ ಅರ್ಸೆನೀವ್ ಮತ್ತವನ ತಂಡ
ಉಸ್ಸುರಿ ಪ್ರದೇಶದ ಶೋಧಕ್ಕೆ ಬಂದು ಪುನಃ ದೆರ್ಸುವನ್ನು
ಮುಖಾಮುಖಿಯಾಗಿ ಕಂಡು ಸೇರುತ್ತಾರೆ. ಅರ್ಸೆನೀವ್ ಪುನಃ ತನ್ನ ಸ್ನೇಹಿತನನ್ನು ಕಂಡಾಗ, ಆತ್ಯಂತಿಕ ಸಂತೋಷವನ್ನು
ಅನುಭವಿಸುತ್ತಾನೆ. ಎರಡನೆ ಅವಧಿಯಲ್ಲಿ ಅತ್ಯಂತ ಕ್ಷಿಪ್ರವಾಗಿ ದೆರ್ಸುವಿನ ಕಳಾಹೀನತೆ, ಕುಂದುತ್ತಿರುವ
ಅವನ ಶಕ್ತಿಯನ್ನು ಚಿತ್ರಿಸಲಾಗಿದೆ. ದೆರ್ಸುವಿನ ಮನೋವೇದನೆಯನ್ನು ಕೂಡಾ ದರ್ಶಿಸಲಾಗಿದೆ. ದೆರ್ಸು
ಮನೋವೇದನೆಯನ್ನು ಅನುಭವಿಸಿದ್ದು ಆತ ಜಗತ್ತಿನ ಅನುಭಾವಿತನದ ಕೇಂದ್ರವೆನಿಸಿದ ಆ ಭಾಗದ ದೆರ್ಸು ಒಳಗೊಂಡಿರುವ
ಗೋಲ್ಡ್ ಆದಿವಾಸಿ ಜನಾಂಗವು ಕಾಡಿನ ಚೈತನ್ಯವೆನಿಸಿದ
ಹುಲಿಯನ್ನು ಹೊಡೆದ ಕಾರಣ. ದೆರ್ಸುಗೆ ಹುಲಿ ತುಂಬಾ ಪವಿತ್ರ. ಅದು ಅವರ ಲಾಂಛನವಾದೀಯ (ಖಿoಣemisಣiಛಿ)
ನಂಬಿಕೆಯನ್ನು, ಬುಡಕಟ್ಟು ಆರಾಧನಾ ವ್ಯವಸ್ಥೆಯನ್ನು ಸಂಕೇತಿಸುವ ಕಾರಣ, ತೀವ್ರವಾದ ಆತಂಕವನ್ನು ದೆರ್ಸು
ಅನುಭವಿಸುತ್ತಾನೆ. ಹುಲಿಯನ್ನು ಹೊಡೆದ ಕಾರಣ ಅರಣ್ಯ ದೇವತೆ ಆತನನ್ನು ಶಪಿಸುತ್ತಾಳೆ ಎಂಬ ತಳಮಳ, ಅದಕ್ಕಿಂತಲೂ
ಹೆಚ್ಚಾಗಿ ಅರ್ಸೆನೀವ್ ಮತ್ತು ಮತ್ತವನ ಮಂದಿ ಜತೆ ಸೇರಿ ಆಧುನಿಕತೆ, ನಾಗರೀಕತೆಗಳ ಕಾರಣ ನೈತಿಕ ಭೃಷ್ಠನಾಗಿ
ತನಗೆ ಅತ್ಯಂತ ಸಹಜವಾಗಿ ಅಂಟಿದ್ದ ನಿಸರ್ಗದ ಮಿಡಿತದ ನಂಟು ಕಳೆಯಿತಲ್ಲಾ ಎಂಬ ಪ್ರಬಲ ಕಾರಣದಿಂದಾಗಿ.
ಅಂತಿಮವಾಗಿ ದೆರ್ಸು ತನ್ನ ಕಣ್ಣಿನ ದೃಷ್ಠಿಯನ್ನು ತುಸು ಕಳೆದುಕೊಳ್ಳುತ್ತಾನೆ. ಅರ್ಸೆನೀವ್ ದೆರ್ಸುವನ್ನು
ಖವರೋವಸ್ಕ್ ಪಟ್ಟಣಕ್ಕೆ ಕರೆದುಕೊಂಡು ಹೋದರೂ ಕೂಡಾ, 20ನೇ ಶತಕದಲ್ಲಿ ಕನ್ನಡಕಗಳು ಬಂದಿದ್ದರೂ ಕೂಡಾ
ಅರ್ಸೆನೀವ್, ದೆರ್ಸುಗೆ ಸಹಾಯ ಮಾಡಬೇಕೆಂಬ ಉತ್ಕಟ ಆಸೆಯಿದ್ದರೂ ಕೂಡಾ ನೇತ್ರ ವೈದ್ಯನಲ್ಲಿಗೆ ಕರೆದುಕೊಂಡು
ಹೋಗುವುದಿಲ್ಲ. ಇಲ್ಲಿ ಕುರಸೋವಾ ವಿಜ್ಞಾನ ಮತ್ತು ಆಧುನಿಕ ಸಂಘಟಿತ ಜ್ಞಾನಕ್ಕೆ ಅವಮಾನ ಮಾಡೋ ಹಾಗೆ
ತನ್ನ ಸೈದ್ಧಾಂತಿಕ ಬದ್ಧತೆಯನ್ನು ದರ್ಶಿಸಿರುವುದು ಕಂಡುಬರುತ್ತದೆ. ಆಧುನಿಕ ಸಂದರ್ಭದಲ್ಲಿ ಗಾಂಧಿ
ಇದೇ ನಡೆಯನ್ನು ಅನುಸರಿಸಿರುವುದನ್ನು ನಾವು ನೋಡಬಹುದು. ಕುರೋಸವಾ, ತನ್ನ ತಾತ್ವಿಕತೆಯಲ್ಲಿನ ವಿಕಾಸದಲ್ಲಿ
ಹಲವು ಸಂಕ್ರಮಣ, ಹಂತಗಳನ್ನು ನೋಡಿದ ಅನುಭವಿಸಿದ ರೀತಿಯಲ್ಲಿಯೇ, ಗಾಂಧಿ ಕೂಡಾ ಸಾಗಿದ್ದನ್ನು ನಾವು
ಮನಗಾಣಬಹುದು. ಧರ್ಮ, ದೇವರು, ಅಹಿಂಸೆ ಮತ್ತು ವಿಶೇಷವಾಗಿ ಆಧುನಿಕತೆಯಂತಹ ಅನೇಕ ಸಂಗತಿಗಳ ಕುರಿತು
ಯೋಚಿಸುವಾಗ, ಕುರೋಸವಾ ಮತ್ತು ಗಾಂಧಿ ಸಮಾನಾಂತರವಾಗಿ ಸಾಗುತ್ತಾರೆ. ಗಾಂಧಿ ಆಧುನಿಕತೆಯ ಕುರಿತ ತೀವ್ರ
ಟೀಕೆಯನ್ನು ಅತ್ಯಂತ ಮನೋಜ್ಞವಾಗಿ 1930ರ ಸುಮಾರಿಗೆ ಕಂಡುಕೊಂಡಿದ್ದರು ಎನ್ನುವುದು ಕೂಡಾ ಅಚ್ಚರಿಯೇ
ಹೌದು. ಗಾಂಧೀಯ “ಹಿಂದ್ ಸ್ವರಾಜ್” ಈ ರೀತಿಯಲ್ಲಿ ಗಾಂಧಿ ಪರಿಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಂಡರೆ,
ಗಾಂಧಿ ನಂತರದ ತಲೆಮಾರಿನ ಕುರೋಸವಾ ಈ ದರ್ಶನ, ದೃಷ್ಠಿಯನ್ನು 1975ರವರೆಗೆ ಕಾದು ಪಡೆಯಬೇಕಾಯಿತು.
ಹಿಂದ್ ಸ್ವರಾಜ್ ಗಾಂಧೀಯ ಹೋರಾಟದ ತಾತ್ವಿಕತೆಯ ಕೊನೆಯ ಧ್ರುವ ಎಂಬಂತೆ ಮೂಡಿಬಂದರೆ ಕುರೋಸವಾ ದೃಷ್ಟಿಯ
ಮೊನÀಚು ಬರೀ ದೆರ್ಸುಉಝಲಕ್ಕೆ ಮಾತ್ರ ಸೀಮಿತವಾಗದೇ, 1990ರಲ್ಲಿ ಆತ ನಿರ್ಮಿಸಿದ ‘ಡ್ರೀಮ್ಸ್’ ಸಿನಿಮಾದಲ್ಲಿ ಇನ್ನೂ ಕೂಡಾ ಸ್ಪಷ್ಟವಾಗಿ ಅತ್ಯಂತ ನೈಸರ್ಗಿಕ, ಸಾವಯವೀ ಮತ್ತು ನಿರಚನವಾದೀ
ನಲೆಯಲ್ಲಿ ಮೂಡಿತು. ‘ಡ್ರೀಮ್ಸ್’ನಲ್ಲಿನ ವಾಟರ್‍ಮಿಲ್ ಮತ್ತು ಸ್ವಾವಲಂಬೀ ಗ್ರಾಮದ ಆಧುನಿಕ ಅಭಿವೃದ್ಧಿಯನ್ನು
ವಿರೋಧಿಸುವ ಸರಳ ಸಹಜತೆಯ ಚಿಂತನೆಗಳು, ಗಾಂಧಿಯ ಹಿಂದ್ ಸ್ವರಾಜ್‍ನಲ್ಲಿನ ಗ್ರಾಮಸ್ವರಾಜ್, ಹಿಂದ್
ಸ್ವರಾಜ್ ಪರಿಕಲ್ಪನೆಗಳ ಜತೆಗೆ ತಾತ್ವಿಕವಾಗಿ ಒಂದೇ ನೆಲೆಯಲ್ಲಿ ಸಮಾನಾಂತರವಾಗಿ ಸಂವಾಧಿಸುತ್ತಾ ಒಂದೇ
ಅರ್ಥವನ್ನು ಧ್ವನಿಸುತ್ತವೆ ಎಂದು ನನ್ನ ಅಭಿಪ್ರಾಯ.
ಗಾಂಧಿ ಅತ್ಯಂತ ಹೆಚ್ಚು ಆಧುನಿಕ ಯಂತ್ರ ವ್ಯವಸ್ಥೆಯನ್ನು ಬಳಸುತ್ತಾ, ಯಂತ್ರವನ್ನು, ಯಂತ್ರ ನಾಗರೀಕತೆಯನ್ನು, ಆಧುನಿಕತೆಯನ್ನು ಮತ್ತು ಆಧುನಿಕ ವಿಜ್ಞಾನ
ಮತ್ತು ಅದರ ಸಹವರ್ತಿ ವೃತ್ತಿಗಳಾದ, ಡಾಕ್ಟರಿಕೆ, ವಕೀಲಿ ಮತ್ತು ಗುಮಾಸ್ತಿಕೆಯನ್ನು ವಿರೋಧಿಸಿದರು.
ಇತ್ತ ಅತ್ಯಾಧುನಿಕ ಕ್ಯಾಮೆರಾ ಶಬ್ದ ಗ್ರಹಣೆಯ ಸಲಕರಣೆಗಳು, ಹೊಸ ಹೊಸ ತಾಂತ್ರಿಕತೆಯ ಮೂಲಕ ದೆರ್ಸು
ಉಝಲದಂತಹ ಭವ್ಯತೆ(Subಟimಟಿess)ಯನ್ನು ಸೃಷ್ಠಿಸಿದ ಕುರೋಸವಾ, ಆಧುನಿಕ ವಿಜ್ಞಾನದ ಮೇಲೆ ಅವಲಂಬಿತವಾಗಿರುವ
ನೇತ್ರ ವೈದ್ಯನನ್ನು ದೆರ್ಸುವಿಗೆ ನಿರಾಕರಿಸಿದರು. ಅದು ಬರಿಯ ಅರ್ಸೆನೀವ್ ನಿರಾಕರಣೆಯಲ್ಲ, ಬದಲಿಗೆ
ಆತ ನಿಮಿತ್ತ ಮಾತ್ರ. ಆತ ದೆರ್ಸುವಿನಂತಹ ಪಾತ್ರದ ಪ್ರಭೆಯಲ್ಲಿ ಕಾಣುವ, ಕಾಣದಂತಿರುವ, ಚಿಕ್ಕ ಬೆಳಕಿನ
ಚುಕ್ಕೆ. ಕುರೋಸವಾಗೆ ಈ ರೀತಿಯ “ತಾತ್ವಿಕ ನವೋದಯೀಕರಣ”ವು (Phiಟosoಠಿhiಛಿಚಿಟ
ಖomಚಿಟಿಣiಛಿism) ತಾನು ಸೃಜನಶೀಲವಾಗಿ ಸೃಷ್ಠಿಸಿದ, ತಾತ್ವಿಕ ವಕ್ತಾರನ ಹಾಗಿರುವ ದೆರ್ಸುವಿನ ಮೂಲಕ
ಸಾಧ್ಯವಾಯಿತಾದರೆ, ಗಾಂಧೀಜಿಗೆ ತನ್ನ ವಿಚಾರಪೂರ್ಣ, ಸ್ಪಷ್ಟ, ತಾರ್ಕಿಕ ಬರಹವಾದ, ‘ಹಿಂದ್ ಸ್ವರಾಜ್’ನ ಮೂಲಕ ಸಾಧ್ಯವಾಯಿತೆಂಬುದೇ ವೈದೃಶ್ಯ.
ಕಾಡನ್ನು ಬಿಟ್ಟು ನಾಡನ್ನು, ನಾಗರೀಕತೆಯನ್ನು ಪ್ರವೇಶಿಸಿದ ದೆರ್ಸು, ಬೋನಿನಲ್ಲಿ ಬಂಧಿತ ಪ್ರಾಣಿಯ
ಹಾಗೆ ಕಾಲ ಕಳೆಯಬೇಕಾಯಿತು. ನಗರದ ವೇಷಭೂಷಣ ತೊಟ್ಟು ಪ್ರಾಣಿ ಚರ್ಮವನ್ನು ಬಿಟ್ಟ ದೆರ್ಸು, ಒಲೆಯ ಬಾಗಿಲಲ್ಲಿ
ಕೂತು ಚಳಿ ಕಾಯುತ್ತಾ, ಕಾಡಿನಲ್ಲಿ ಬೆಂಕಿ ಕಾಯಿಸುತ್ತಾ ಕುಳಿತಿದ್ದನ್ನು ಮರೆಯುತ್ತಾ ನಿಜವಾದ ರೀತಿಯಲ್ಲಿ
ದಯನೀಯತೆಯನ್ನು ಅನುಭವಿಸಿದ.ಒಂದು ರೀತಿಯ ಸೋಮಾರಿತನದ ಅನುಭವವಾಗಿ, ಕಾಡಿನಲ್ಲಿನ ಆತನ ಚಲನೆಯನ್ನು
ನೆನಪಿಸುವ ಕುರಿತು ಅರ್ಸೆನೀವ್‍ನ ಮಗನಿಗೆ ಕತೆ ಹೇಳುತ್ತಾ ಕುಳಿತ.ಈ ದೆರ್ಸು ಕಾಡಿನಲ್ಲಿ ಸುಮ್ಮನೆ
ಕುಳಿತವನೇ ಅಲ್ಲ. ನಗರತೆ, ನಾಗರೀಕತೆ ಆತನನ್ನು ಸುಮ್ಮನಾಗಿರಿಸಿತು. ಸುಮ್ಮನೇ ಕೂರಿಸಿತು.ನಗರ ಬದುಕಿನ
ನಿರ್ಬಂಧಗಳು ದೆರ್ಸುವನ್ನು ಬಂಧಿಸಿದಾಗ ಆತ ಸಂಕಟಪಟ್ಟ.ನಗರದ ಸಮಾಜೋ-ರಾಜಕೀಯ -ಸಾಂಸ್ಕøತಿಕ ವಿನ್ಯಾಸಗಳನ್ನು
ಆತ ಅಚ್ಚರಿ, ಅನುಮಾನದಿಂದ ನೋಡಿದ.ನಗರದ ರೂಪು-ರೇಷೆಗಳು, ಸಂರಚನೆಗಳು ಆತನಿಗೆ ಅರ್ಥವಾಗದೇ ಹೋದವು.
ಈ ನೆಲೆಯಲ್ಲಿಯೇ ಆತ, “ಅರ್ಸೆನೀವ್‍ನ ಪತ್ನಿ ನೀರು ಮಾರುವವನಿಂದ ನೀರನ್ನು ಪಡೆದಾಗ, ನೀರು ಮಾರಿದವನನ್ನು
‘ಬ್ಯಾಡ್‍ಮ್ಯಾನ್’ ಅಥವಾ ಕೆಟ್ಟ ಮನುಷ್ಯ (ಃಚಿಜmಚಿಟಿ) ಎಂದು ಸಂಭೋದಿಸುವುದು. ದೆರ್ಸು
ಎಂಬ ಯೋಗಿ, ಸಹಜತೆ, ಪರಿಶುದ್ಧತೆಯ ಪ್ರತೀಕ. ಆತ ಅರ್ಸೆನೀವ್‍ನ ಸುಸಜ್ಜಿತ ಮನೆಯಲ್ಲಿಯೇ ಮಲಗುವುದಿಲ್ಲ.
ದೆರ್ಸು ಸರೀ ಕೈ ಕಾಲು ನೀಡಿಕೊಂಡು ಪಾರ್ಕ್‍ನ ಹುಲ್ಲುಹಾಸಿನ ಮೇಲೆ ಬಿದ್ದುಕೊಳ್ಳುತ್ತಾನೆ. ಇದು ಕುರೋಸವಾನ
ಆಸೆಯಂತೆ ಕಂಗೊಳಿಸುತ್ತದೆ. ಆತನ ನಂತರದ ಸಿನಿಮಾವಾದ ‘ಡ್ರೀಮ್ಸ್’ನಲ್ಲಿಯಂತೂ ಅದನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾನೆ. ಆದರೆ ವಿಶೇಷವಾಗಿ ಡ್ರೀಮ್ಸ್‍ನ ವಾಟರ್‍ಮಿಲ್‍ನ
ಅಧ್ಯಾಯದಲ್ಲಿ ಇದು ಸುಸ್ಪಷ್ಟವಾಗಿ ಕಾಣಿಸುತ್ತದೆ. ವಿಲಿಯಮ್ ಬ್ಲೇಕ್ ಹೇಳುವ ಹಾಗಿನ “ಮನೋಭಾವ, ಯೋಚನೆಗಳು
ಗಿಡ ಮತ್ತು ಅದು ಬಿಡುವ ಕಾಯಿಯ ಹಾಗೆ. ಇವೆಲ್ಲವೂ ಕೂಡಾ ಮಾಗುವುದು ಕಾಲದ ಮೇಲೆ”. ದೆರ್ಸುಉಝಲದ ಈ ಆತುರ ಮಾಗಿದ್ದು ಡ್ರೀಮ್ಸ್‍ನಲ್ಲಿ. ಗಾಂಧಿ ಕೂಡಾ ಇದೇ ರೀತಿಯಲ್ಲಿ ಚಿಂತನೆಗಳನ್ನು,
ಬದುಕಿನ ಆರಂಭದಲ್ಲಿ ನೀಡಿದರಾದರೂ ಕೂಡಾ, ಹಿಂದ್ ಸ್ವರಾಜ್‍ನಲ್ಲಿ ಯೋಚಿಸಿದ ವಿಚಾರಗಳು ಮಾಗಿದ ಮಾವಿನ
ಹಣ್ಣಿನ ಹಾಗೆ ಮೂಡಿದವು. ಕುರೋಸವಾ ಒಂದು ಪರ್ಯಾಯ ನೀಡುತ್ತಾ, ಸಮಕಾಲೀನ ಸಮಾಜೋ-ರಾಜಕೀಯ ಸ್ಥಿತ್ಯಂತರಗಳನ್ನು
ವಿಶೇಷವಾಗಿ ಜಾಗತೀಕೃತ ವಿಶ್ವ ಸೃಷ್ಠಿಸಿರುವ ಸಂದಿಗ್ಧಗಳಿಗೆ ಉತ್ತರಿಸುತ್ತಾ, ಅದೇ ಧಾಟಿಯಲ್ಲಿಯೇ
ಗಾಂಧಿ ಕೂಡಾ ಸಾಗಿದ್ದು ವಿಶೇಷ. ಇನ್ನೂ ಕೂಡಾ ಆಧುನಿಕತೆ ಮತ್ತು ನಾಗರೀಕತೆ ಅಂಬೆಗಾಲಿಡುತ್ತಿದ್ದ
ಸಂದರ್ಭದಲ್ಲಿ ಅದನ್ನು ತಿಳಿದು, ಸಂವೇದನಾಶೀಲತೆಯೊಂದಿಗೆ ಅದರ ಅಪಾಯಗಳನ್ನು 1930ರÀದಶಕದಲ್ಲೂ ಊಹಿಸಿದ
ಮತ್ತು ಸರಳತೆ, ನೈತಿಕತೆ, ಗ್ರಾಮ ಸ್ವರಾಜ್, ಧರ್ಮದರ್ಶಿತ್ವ ಮುಂತಾದ ಲಕ್ಷಣಗಳೊಂದಿಗಿನ ಹಿಂದ್ ಸ್ವರಾಜ್‍ಅನ್ನು
ಪರ್ಯಾಯವಾಗಿ ನೀಡಿದ ಗಾಂಧೀಜಿ ತುಂಬಾ ವಿಸ್ಮಯವಾಗಿ ಕಂಡುಬರುತ್ತಾರೆ. ಗಾಂಧೀಜಿ ಅನುಭವಜನ್ಯತೆ ಇಂತಹ
ಒಂದು ಅನುಭವವನ್ನು ನಿರ್ಮಿಸಿಕೊಟ್ಟಿತು. ಕುರೋಸವಾನ ಸಿನಿಮಾಯಾನ ಅಮೇರಿಕಾದಂತಹ ರಾಷ್ಟ್ರಗಳು ಸೃಷ್ಠಿಸಿದ
ನವವಸಾಹತುಷಾಹಿತ್ವ, ಜಪಾನ್‍ನ ಟೋಕಿಯೋದಂತಹ ನಗರಗಳು ಅತಿಯಾಗಿ ಒಪ್ಪಿ ಅಪ್ಪಿಕೊಂಡ ಆಧುನಿಕತೆ, ನಾಗರೀಕತೆ
ಮತ್ತು ಅದೇ ಹೊತ್ತಿನಲ್ಲಿ ಮಾನವೀಯ ಮುಖಗಳನ್ನು ತಿರಸ್ಕರಿಸಿದ್ದು, ನಗರಗಳು ಒಡೆದು ಹೋಗುವಷ್ಟು ಹಿಗ್ಗಿದ್ದು,
ಉಪಭೋಗತೆಯನ್ನೇ ಆದರ್ಶವಾಗಿರಿಸಿದ್ದು ಮುಂತಾದ ಈ ರೀತಿಯ ಸಂಗತಿಗಳು, ಆತ ದೆರ್ಸುಉಝಲ ದಂತಹ ಉಟೋಪಿಯಾ
(ಭ್ರಾಮಕ-ಆದರ್ಶ)ಎಂದೆನಿಸಬಹುದಾದಂತಹ ಮತ್ತು ಶತಃಶಹ ಭವಿಷ್ಯಕ್ಕೆ ಅನಿವಾರ್ಯ ಎನ್ನುವಂತಹ ಮಾದರಿಗಳನ್ನು
ನಿರ್ಮಿಸಲು ಕಾರಣವಾಯಿತು. ಈ ಹಿನ್ನಲೆಯಲ್ಲಿ ನಾನು ಕ್ರಿಸ್ ಮಾರ್ಕರ್ ಹೇಳುವ “ರಶೋಮನ್‍ಗಿಂತಲೂ ಕುಡಾ
ಹೆಚ್ಚು ಪ್ರೌಢÀವಾದ ಕುರೋಸವಾನ ದರ್ಶನ ದೆರ್ಸುಉಝಲ ಮತ್ತು ಡ್ರೀಮ್ಸ್‍ಗಳಲ್ಲಿ ಕಂಡುಬಂದಿತು”. ಎನ್ನುವುದನ್ನು ಅನುಮೋದಿಸುತ್ತೇನೆ. ದೆರ್ಸು ಕೊನೆಕೊನೆಗೆ ತೀವ್ರಸಂಕಟವನ್ನು ಅನುಭವಿಸಿ,
ಸ್ನೇಹಿತನಲ್ಲಿ ಕ್ಷಮೆ ಕೇಳಿ ಪುನಃ ತನ್ನ ಗೂಡಿಗೆ ಚಾಲ್ಸ್ ಡಿಕನ್ಸ್ ಹೇಳುವ ಹಾಗೆ ‘ರಿಟರ್ನ್ ಟು ದಿ
ನೇಟಿವ್’ ಎನ್ನುವ ಹಾಗೆ ಪ್ರಕೃತಿಯ ಮಡಿಲಿಗೆ, ಕಾಡಿಗೆ ಬರುತ್ತಾನೆ. ಕೊನೆಗೂ ಕೂಡಾ ಈ ಕ್ರೂರ ನಾಗರಿಕ
ಸಮಾಜ ದೆರ್ಸುವನ್ನು ಕೊಂದಿದೆ ಎನ್ನುವ ಟೆಲಿಗ್ರಾಂ ಸಂದೇಶದೊಂದಿಗೆ ಸಿನಿಮಾ ಮುಗಿಯುತ್ತದೆ. ಅರ್ಸೆನೀವ್
ಕೊನೆಗೆ ದೆರ್ಸುವಿನ ದೇಹವನ್ನು ಗುರುತಿಸುತ್ತಾನೆ. ಅರ್ಸೆನೀವ್ ಸ್ವಗತದಲ್ಲಿ ಹೇಳುವ, “ನನ್ನ ಬೂದು
ಬಣ್ಣದ ಗರುಡನೇ ಎಲ್ಲಿರುವೇ?” ಎನ್ನುವುದಕ್ಕೆ ಹಿನ್ನೆಲೆಯಲ್ಲಿ “ನಾನು ದೂರದ ಪರ್ವತಗಳೆಡೆಯಲ್ಲಿ ಹಾರುತ್ತಿರುವೆನು” ಎನ್ನುವ ಉತ್ತರ ಮತ್ತು ಹಿನ್ನೆಲೆ ಸಂಗೀತದ ವಿಲಾಪನೆ ಮೂಲಕ ಸಿನಿಮಾದ ಎರಡನೇ ಭಾಗ ಮುಕ್ತಾಯವನ್ನು
ಕಾಣುತ್ತದೆ.
ಇಡೀ ಸಿನಿಮಾವನ್ನು ಆವರಿಸಿ ವ್ಯಾಪಿಸಿರುವುದು ನಿಸರ್ಗ, ಪಾತ್ರ ಮತ್ತು ವ್ಯಕ್ತಿತ್ವಗಳು ಈ
ಸಿನಿಮಾಕ್ಕಿಂತ ಮುಂಚೆ ಕುರೋಸವಾ “ಕಿನಿಮಾಜಂಪೋ” ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ “ಉಸ್ಸುರಿ ಪ್ರದೇಶದ ವೈಭವದ
ಬೃಹತ್ ಪರಿಸರವನ್ನು ದರ್ಶಿಸುವ ಉದ್ದೇಶದಿಂದ ದೆರ್ಸುಉಝಲವನ್ನು ನಿರ್ಮಿಸಿದ್ದು”. ಎಂದಿದ್ದ. ನೈತಿಕ ಪ್ರಗತಿಯನ್ನು ಸಾಧಿಸದ, ಬದಲಿಗೆ ಅಸಮಾತೆಯ ಭೌತಿಕ ಪ್ರಗತಿಯನ್ನು ಮಾತ್ರ
ಕಂಡುಕೊಂಡಿದ್ದ ಮಾನವ, ಆತನ ಸಮಾಜವನ್ನೇ ನಿರಾಕರಿಸುವ ಕ್ರಮ ಇಲ್ಲಿದೆ. ಮನುಷ್ಯನ ಪ್ರಯತ್ನ, ಸಾಮಥ್ರ್ಯ,
ಕ್ರಮ-ವಿಕ್ರಮಗಳನ್ನೇ ಪ್ರಶ್ನಿಸುವ ಧಾಟಿಗಳು ಈ ಸಿನಿಮಾದಲ್ಲಿದೆ. ಇಡೀ ಸಿನಿಮಾದಲ್ಲಿ ದೆರ್ಸು ಮುಖ್ಯವಾದರೂ ಕೂಡಾ, ದೆರ್ಸು ಮತ್ತು
ಅರ್ಸೆನೀವ್‍ನ ಸ್ನೇಹ ಮುನ್ನೆಲೆಗೆ ಬಂದು ನಿಂತರೂ ಕೂಡಾ, ಅವರಿಬ್ಬರೂ ನಿಂತಿರುವ ಲ್ಯಾಂಡ್‍ಸ್ಕೇಪ್
ಪರಿಸರ, ಅಲ್ಲಿಯ ಚಿತ್ರ ಎಲ್ಲವನ್ನೂ ಒಳಗೊಂಡು ಇಡೀ ದೃಷ್ಠಿಕಕ್ಷೆಯನ್ನು ವ್ಯಾಪಿಸಿ ಉಳಿದುದೆಲ್ಲವನ್ನೂ
ಕೂಡಾ ಗೌಣವನ್ನಾಗಿಸಿಬಿಡುತ್ತದೆ. ಕ್ಯಾಮೆರಾವನ್ನು ಕತ್ತಿಯಂತೆ ಬಳಸಿ, ಚುರುಕುತನವನ್ನು ಹರಿಹಾಯಿಸಿ
ಲಾಂಗ್‍ಶಾಟ್‍ಗಳಲ್ಲಿ ಕುರೋಸವಾ ಪ್ರಯತ್ನಪೂರ್ವಕವಾಗಿ ಹಲವು ಧ್ವನಿಗಳನ್ನು ಧ್ವನಿಸುತ್ತಾನೆ. ಪ್ರಕೃತಿಯ
ಶಿಶುವಾದ ದೆರ್ಸು ಮತ್ತು ಸೈನ್ಯದ ನಾಯಕನಾದ ಅರ್ಸೆನೀವ್ ಇಲ್ಲಿ ಹೀರೋಗಳಾಗದೇ ಪ್ರಕೃತಿಯೇ ಹೀರೋ ವಾಗುತ್ತದೆ.
ಅತ್ಯಂತ ದೂರದಲ್ಲಿ ಬಿದ್ದಿರುವ ಹಿಮವನ್ನು, ವಿಶಾಲವಾದ ಲ್ಯಾಂಡ್‍ಸ್ಕೇಪ್‍ನ್ನು ಮತ್ತು ಸೈಬೀರಿಯಾದ
ಉಸ್ಸುರಿ ಪ್ರದೇಶದ ಅರಣ್ಯತೆಯನ್ನು ಅದರ ನಿಗೂಢÀತೆ ಮತ್ತು ದಟ್ಟಣೆಯನ್ನು ವೈಡ್ ಮತ್ತು ಲಾಂಗ್‍ಶಾಟ್‍ಗಳ
ಮೂಲಕ ತೋರಿಸಿ, ಅದರಲ್ಲಿ ಮನುಷ್ಯನನ್ನು ಅತ್ಯಂತ ಚಿಕ್ಕ ಇಲಿ ಅಥವಾ ಚುಕ್ಕೆ ರೀತಿಯಲ್ಲಿ ತೋರಿಸಿ
“ನೋಡು ಮಾನವ ನೀನೆಷ್ಟು ಚಿಕ್ಕವ ಎನ್ನುವ ಧ್ವನಿ ಆಶಯವನ್ನು ಕುರೋಸವಾ ಹೊಮ್ಮಿಸುತ್ತಾನೆ. ಅರ್ಸೆನಿವ್
ಮೂಲಕ ಕೂಡಾ ‘ಒಚಿಟಿ is ಣoo smಚಿಟಟ ಣo ಜಿಚಿಛಿe ಣhe vಚಿsಣಟಿess oಜಿ ಣhe ಟಿಚಿಣuಡಿe‘ ಎನ್ನುತ್ತಾ
ಪುನಃ ಸಾಬೀತುಪಡಿಸುತ್ತಾನೆ. ದೆರ್ಸುವಿನಂತಹ ಪಾತ್ರಗಳು ಪಾಠ ಹೇಳುವ (Pಚಿಠಿieಡಿ ಒಚಿಛಿhe) ಪಾತ್ರಗಳಾಗಿ
ಜಪಾನ್ ಮತ್ತು ಜಗತ್ತು ಈ ಶತಮಾನದಲ್ಲಿ ಸಾಧಿಸಿದ ಪ್ರಗತಿ’’ಯ ಪರಿಕಲ್ಪನೆಯನ್ನು
ಪ್ರಶ್ನಿಸಿ ಅದು ಅತೀ ಅನೈತಿಕವೆಂದು ಸಾಧಿಸಿ ಪರ್ಯಾಯದ ಸೃಷ್ಠಿಗೆ ಆಗ್ರಹಿಸಿರುವುದನ್ನೂ ಕೂಡಾ ಕಾಣಬಹುದು.
ಕುರೋಸವಾ ಕೂಡಾ ಅಂತಿಮವಾಗಿ ಪ್ರವಾದಿಯಾಗುತ್ತಾನೆ. ಆತನ ಈ ಪ್ರವಾದಿತನ ಒಮ್ಮೆಲೇ ಆಗದೇ ಹಂತ
ಹಂತವಾಗಿ ಉಂಟಾಗುತ್ತದೆ. ಅದು ಈ ಮೊದಲಿನ ಡೊಡೆಸುಕಾಡೆನ್ ಚಿತ್ರದಲ್ಲಿ Poಟಟuಣioಟಿ ಅನ್ನು ಚರ್ಚಿಸುತ್ತಾ
ಇದರಲ್ಲಿ ನಿಸರ್ಗ-ನೀತಿ ಅನೀತಿ-ಪ್ರಗತಿಯ ಚರ್ಚೆ-ಆಧುನಿಕತೆ, ಜಾಗತೀಕರಣ, ಕೊಳ್ಳುಬಾಕತನದ ಚರ್ಚೆಯ
ಮೂಲಕ ಬೆಳೆಯುತ್ತದೆ. ಡ್ರೀಮ್ಸ್ ಮತ್ತು ಆತನ ಅಂತಿಮ ಚಿತ್ರವಾದ ‘ರಪ್ಸಡಿ ಇನ್ ಅಗಸ್ಟ್‘ ನಲ್ಲಿನ ವಿಚಾರಗಳು ಹೆಚ್ಚು ಕಡಿಮೆ ನೋಮ್ ಚೋಮ್ಸ್ಕಿಯ, ‘ಅಮೇರಿಕಾದ ನವವಸಾಹಯಿಷಾಹಿ’ ಚರ್ಚೆ ಮತ್ತು ಟೀಕೆ ಗಳಿಗೆ ಸಮಾನಾಂತರವಾಗಿ ಸಾಗುತ್ತಾ ಒಬ್ಬ ನಿರ್ದೇಶಕನ ಬೌದ್ಧಿಕ ಜವಾಬ್ದಾರಿ
ಮತ್ತು ಮಾನವೀಯ ಕಾಳಜಿಯ ಮುಖವನ್ನು ಕೂಡಾ ಅಭಿವ್ಯಕ್ತಿಸುತ್ತದೆ. ದೆರ್ಸುಉಝಲದ ಮೂಲಕ ಕುರೋಸವಾ ಜಗತ್ತಿಗೇನೇ
ಒಂದು ಮಾದರಿಯನ್ನು ವಿಶೇಷವಾಗಿ “ಪ್ರಕೃತಿ ಮತ್ತು ಮಾನವರ ನಡುವಿನ ಸಂಬಂಧದ ಮಾದರಿಯ” ಏಷ್ಯನ್ ರೂಪವನ್ನು ಕೊಡುತ್ತಾನೆ. ದೆರ್ಸು ಕೂಡಾ ಯೂರೋಪಿನ- ಅಮೇರಿಕಾದ ಭೌತಿಕ ಅಭಿವೃದ್ಧಿಯಲ್ಲಿ
ಸ್ವಲ್ಪ ಮಟ್ಟಿಗಾದರೂ ಕೂಡಾ ಭಾಗವಹಿಸಿದ ಮಸೆದ ಕೊಡಲಿ, ಬೂಟು ಮತ್ತು ಉದ್ದನೆಯ ಹ್ಯಾಟು ಧರಿಸಿ ದೈತ್ಯ
ಮರಗಳನ್ನು ಕಡಿವ ಅಮೇರಿಕಾದ “ಡೇವಿಡ್ ಕ್ರೋಕೆಟ್ ಮತ್ತು ಪಾಲ್ ಬುನ್ಯನ್” ಮಾದರಿಗಳನ್ನು ಪ್ರಶ್ನಿಸುವ ರೀತಿ ಕೂಡಾ ಹೌದು. ಇಡೀ ಜಗತ್ತಿನ ಇಂದಿನ ಭೌತಿಕತೆ ಮತ್ತು ಸಮಾಜೋ-ಸಾಂಸ್ಕøತಿಕ
ಸಂದರ್ಭದಲ್ಲಿ, ಇದು ಒಂದು ‘ತೃತೀಯ ಜಗತ್ತಿನ ಮಾದರಿ’, ಮತ್ತು ಸಮನ್ವಯದ ಸಾಮರಸ್ಯದ ಮಾದರಿಯಾಗಿಯೂ ಕೂಡಾ ಇದು ನಿಲ್ಲುತ್ತದೆ.
ಅಮೇರಿಕನ್ ಮತ್ತು ಯೂರೋಪ್ ಪ್ರಣೀತ ಅಭಿವೃದ್ಧಿಯ ಮಾದರಿಯ ಕ್ರಮಗಳನ್ನು ತಾರ್ಕಿಕವಾಗಿ ವೈಚಾರಿಕವಾಗಿ
‘ದೆರ್ಸು ಮಾದರಿ’ ಪ್ರಶ್ನಿಸುತ್ತದೆ.
ಭಾರತದಂತಹ ದೇಶಗಳು ವಿಶೇಷವಾಗಿ ನಿಸರ್ಗವನ್ನು, ಸಾಂಪ್ರದಾಯಿಕ ಕೃಷಿಯನ್ನು ಕಡೆಗಣಿಸಿ, ರಸ್ತೆ
ಅಗಲಿಸಿ ಅಲ್ಲಿ ಶ್ರೀಮಂತರ ಕಾರುಗಳನ್ನು ಮಾತ್ರ ಓಡಿಸಿ, ಬಡ ರೈತ ಕಾರ್ಮಿಕ, ದಾರಿಹೋಕ ದಾಟಲು ಕಷ್ಟವಾಗುವ
ಹಾಗೆ ವಿನ್ಯಾಸ ಮಾಡಿ, ರಸ್ತೆಯ ಬದಿಯ ನೂರಾರು ಮರಗಳನ್ನು ಕಡಿದು ಪ್ರಗತಿಯ ದರದ ಲೆಕ್ಕ ಹೇಳುವಂತಹ
ಸ್ಥಿತಿಗೆ ತಲುಪಿರುವ ಈ ಸಂದರ್ಭದಲ್ಲಿ, “ದೆÉರ್ಸುಮಾದರಿ” ಯೋಚಿಸುವವರನ್ನು,
ಯೋಜಿಸುವವರನ್ನು ಮತ್ತು ಅದನ್ನು ಪ್ರಾಮಾಣಿಕವಾಗಿ ಬಯಸುವವರನ್ನು ಚಿಂತೆಗೀಡು ಮಾಡುವ, ಚಿಂತನೆಗೆ ಹಚ್ಚಿಸುವ
ಅಭಿವ್ಯಕ್ತಿಯ ರೂಪದಲ್ಲಿ ಕೂಡಾ ನಮ್ಮನ್ನು ಕಾಡುತ್ತದೆ. ಚಾರಿತ್ರಿಕವಾಗಿ, ಸಮಾಜೋ ಸಾಂಸ್ಕøತಿಕವಾಗಿ
ನಮ್ಮ ಮನ, ಬುದ್ಧಿ, ಇಂದ್ರಿಯ, ಅನುಭವ, ಪ್ರಗತಿಯ ಮಾದರಿ ಮುಂತಾದೆಲ್ಲವನ್ನೂ ಕೂಡಾ ಸುಮಾರು 200 ವರ್ಷಕಾಲ
ವಸಾಹತುಶಾಹೀ ಎರವಲಿಗೆ, ಬಾಡಿಗೆಗೆ ಮೈಯೊಡ್ಡಿದ ಭಾರತದಂತಹ ಅನೇಕ ರಾಷ್ಟ್ರಗಳು ಪುನ: ಸಮಾಜ-ಸಂಸ್ಕøತಿ-ಶಿಕ್ಷಣ-ಬೌದ್ಧಿಕತೆ-ಪ್ರಗತಿ-ಮನಸ್ಸು
ಮುಂತಾದವುಗಳನ್ನು ನಿರ್ವಸಾಹತೀಕರಣಕ್ಕೆ ಒಡ್ಡುವ ಪ್ರಯತ್ನ, ಪ್ರಕ್ರಿಯೆಯನ್ನೂ ಕೂಡಾ ದೆರ್ಸು ಉಝಲ
ಪ್ರಚೋದಿಸುತ್ತದೆ.
ದೆÉರ್ಸುಉಝಲ ಒಂದು ನಿರ್ವಚನೀಯ,
ನಿರಚನೀಯ ಪಠ್ಯ. ಅಗೆದಷ್ಟು, ಮೊಗೆದಷ್ಟು ಇನ್ನೂ ಒರತೆ ಕಾಣಿಸುವಂತಹ ಸಿನಿಮಾ.ಕುರೋಸವಾ ಈ ಸಿನಿಮಾದ
ಬಗ್ಗೆ ಕಥಿಸಿದ ಅಭಿಪ್ರಾಯದೊಂದಿಗೆ ಈ ಬರಹವನ್ನು ಮುಗಿಸುತ್ತೇನೆ.
“The relationship between human beings and
nature is getting worse and worse. I wanted to have people all over the world
know about this soviet Asian character who lived in harmony with nature. I
think people should be more humble toward nature because we are a part of it
and we must become harmonized with it. If nature is destroyed too. So we can
learn a lot from Dersu”.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ