ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಚಾರಿತ್ರಿಕ ಚರಿತ್ರಕಾರನ ಗತದ ಸಂಗೋಪನೆ: ಮಿಷೆಲ್ ಫುಕೋ ಮತ್ತು ಚರಿತ್ರೆ

  ಮಿಷೆಲ್ ಫುಕೋನ ಬಹುತೇಕ ವಾಜ್ಞಯ ಮತ್ತು ಕೃತಿಯನ್ನು ಮಾನವಶಾಸ್ತ್ರಜ್ಞರು , ಸಮಾಜಶಾಸ್ತ್ರಜ್ಞರು , ಮನ : ಶಾಸ್ತ್ರಜ್ಞರು , ಸಾಹಿತ್ಯ ವಿಮರ್ಶಕರು ಮತ್ತು ಚರಿತ್ರಕಾರರು ಓದುತ್ತಾರಾದರೂ ಕೂಡಾ ಅತ್ಯಂತ ಆನುಷಂಗಿಕವಾಗಿ ಅವುಗಳು ಚರಿತ್ರೆಗೆ ಸಂಬಂಧಿಸಿವೆ . ಇದೇ ಹೊತ್ತಿಗೆ ತತ್ವಶಾಸ್ತ್ರವೂ ಕೂಡಾ ಆತನ ಕೃತಿ ಮತ್ತು ವಿಚಾರಗಳನ್ನು ತಮ್ಮದೆಂದೂ ಕ್ಲೈಮು ಮಾಡಿದೆ . ಚರಿತ್ರೆ ಮತ್ತು ಚರಿತ್ರೆ ಬರವಣಿಗೆಗೆ ಫುಕೋ ಒಂದು ಹೊಸ ರೀತಿಯ ಆಲೋಚನೆಯನ್ನು ನೀಡಿದನು . ಸಮಕಾಲೀನ ರಾಜಕೀಯಾತ್ಮಕ ಹೋರಾಟಗಳ ಸಂದರ್ಭದಲ್ಲಂತೂ ಹೊಸದಾಗಿ ಚರಿತ್ರೆಯನ್ನು ಅರ್ಥೈಸಲು ಆತ ಪ್ರಯತ್ನಿಸಿದ . ಆತನ ಕ್ರಾಂತಿಕಾರಕ ಆಲೋಚನೆಗಳಿಂದ ಸಮಾಜವಿಜ್ಞಾನಗಳು ಮುರಿದು ಮುಗ್ಗರಿಸಿದ ಹೊತ್ತಿನಲ್ಲೇ ಅವುಗಳು ಒಂದು ವಿಭಿನ್ನವಾದ ತಾತ್ವಿಕ ಗತಿ ಮತ್ತು ಸ್ವರೂಪವನ್ನು ಕೂಡಾ ಕಂಡವು . ಫುಕೋ ಒಂದು ರೀತಿಯಲ್ಲಿ ಅಚಾರಿತ್ರಿಕ ಚರಿತ್ರಕಾರ . ಚರಿತ್ರೆ ಕುರಿತು ಬರೆಯುತ್ತಲೇ ಅಂತಹ ಶಿಸ್ತನ್ನೇ ಬುಡಮೇಲು ಮಾಡಿದ ಪ್ರತಿಭಾಶಾಲಿ . ಫುಕೋನ ಕೃತಿಗಳನ್ನು ಅವಲೋಕಿಸಿದರೆ ಒಂದು ತಾತ್ವಿಕ ಚೌಕಟ್ಟಿನ ಸ್ವರೂಪದಲ್ಲಿ ಅಥವಾ ಚರಿತ್ರೆಯ ತಯಾರಿಯ ಕ್ರಮದಲ್ಲಿ ನೇರಾನೇರಾವಾಗಿ ಏನನ್ನೂ ಕೂಡಾ ಮಂಡಿಸಿಲ್ಲ . ಟಾಯ್ನ್ ‍ ಬಿ ನಡೆಸಿದ ವರ್ಗೀಕರಣದ ನಮೂನೆಯಲ್ಲಿ ಆತ ಏನನ್ನೂ ಕೂಡಾ ನಡೆಸಿಲ್ಲ ....