ಪೋಸ್ಟ್‌ಗಳು

2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಸ್ತು-ವೃದ್ಧರನ್ನು ಮಗುವಿನ ಹಾಗೆ ನೋಡುವ ಸೂತ್ರ

ಅಸ್ತು-ವೃದ್ಧರನ್ನು ಮಗುವಿನ ಹಾಗೆ ನೋಡುವ ಸೂತ್ರ      ಗೋವಾದ 44ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯಂತ ತಣ್ಣಗೆ ಕಾಡಿದ ಚಿತ್ರಗಳಲ್ಲಿ ಮರಾಠೀ ಚಲನಚಿತ್ರ ಅಸ್ತು ಕೂಡಾ ಒಂದು ಅಸ್ತು, ಸಂಸ್ಕøತ ಭಾಷೆಯ ಒಂದು ಶಬ್ದ, ಅದರ ಅರ್ಥ, ಆಗಲಿ, ಹಾಗೆಯೇ ಆಗಲಿ ಎಂದು. ಮರಾಠೀ ಚಿತ್ರಜಗತ್ತು ಇಡೀ ಭಾರತದಲ್ಲಿ ಅತ್ಯಂತ ಚಲನಶೀಲತೆಯನ್ನು ಪ್ರದರ್ಶಿಸುತ್ತಿರುವ ಒಂದು ಪ್ರಪಂಚ. ಅನೇಕ ಮಾದರಿಗಳನ್ನು ನಾವು ಅಲ್ಲಿ ಕಾಣಬಹುದು ಹೊಸ ಪ್ರತಿಭೆಗಳನ್ನು ಅದರಲ್ಲೂ ಅತ್ಯಂತ ಎಳೆಯ ಸಿನಿಮಾ ನಿರ್ದೇಶಕರ ಪರಿಶ್ರಮ, ಆಸಕ್ತಿಯ ರೂಪಕಗಳಾಗಿ ಮರಾಠಿ ಭಾಷೆಯ ಅನೇಕ ಸಿನಿಮಾಗಳು ನಮಗಿಂದು ಲಭ್ಯವಾಗುತ್ತಿವೆ. ಹೊಸ ಪೀಳಿಗೆ ಅಥವಾ ತಲೆಮಾರಿನ ಯುವಕರು ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದ್ದಾರೆ. ಒಂದು ಹಂತದಲ್ಲಿ ವೈವಿಧ್ಯತೆಯನ್ನು ಯುವಕರು ಅತ್ಯಂತ ಪ್ರಭಾವಿಯಾಗಿ ಪ್ರಕಟಪಡಿಸಲು ಹೆಚ್ಚು ಶಕ್ತರು ಎನ್ನುವ ಮಾತನ್ನೂ ಕೂಡಾ ಇದು ಅನುಮೋದಿಸಿದೆ. ‘ಅಸ್ತು’ ಸಿನಿಮಾ ಅಂತಹ ಒಂದು ಪ್ರಯತ್ನ.     ಸುಮಾರು 1990ರ ನಂತರ ಮರಾಠೀ ಜಗತ್ತು ಕೆಲವು ಅನನ್ಯ ನಿರ್ದೇಶಕರನ್ನು ಪಡೆಯಿತು. ಅವರುಗಳಲ್ಲಿ ಸುಮಿತ್ರಾಭಾವೆ-ಸುನಿಲ್ ಸುಕ್ತಂಕರ್ ಜೋಡಿ ನಿಜಕ್ಕೂ ಅತ್ಯಂತ ಮಹತ್ವದ್ದು. ಸುಮಾರು 20ಕ್ಕೂ ಹೆಚ್ಚು ಇರುವ ಇವರ ಸಿನಿಮಾಗಳು ಬರೀ ಮನರಂಜನೆಗಾಗಿಯಲ್ಲ, ಅದು ಸಂದೇಶ ನೀಡುವ  ಕೆಲಸಕ್ಕಾಗಿ ಕೂಡಾ ಅಲ್ಲ, ಬದಲು ದೃಶ್ಯ, ದೃಶ್ಯಮಾಧ...

Rejected Indian Sense of Past; Its Reconsiderations

                                                                                                                                                                      ...

ಉದಾರೀಕೃತ ಭಾರತ ಮತ್ತು ಶಿಕ್ಷಣ: ಗುಸ್ತೆವೋ ಎಸ್ತೆವಾ ವಾಗ್ವಾದಗಳು

ಉದಾರೀಕೃತ ಭಾರತ ಮತ್ತು ಶಿಕ್ಷಣ: ಗುಸ್ತೆವೋ ಎಸ್ತೆವಾ ವಾಗ್ವಾದಗಳು ಸುಮಾರು 1990 ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ LPG- Libaralisation, Privatisation, Globalisation ಪ್ರಕ್ರಿಯೆಗಳು ಬರೀ ಆರ್ಥಿಕ , ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಲ್ಲಿ ಮಾತ್ರ ತನ್ನ ಪರಿಣಾಮಗಳನ್ನು ಉಂಟುಮಾಡಲಿಲ್ಲ , ಬದಲಿಗೆ ಶಿಕ್ಷಣವನ್ನೂ ಒಳಗೊಂಡಂತೆ ಸಾಂಸ್ಕ ø ತಿಕವಾಗಿ ಅದು ಉಂಟುಮಾಡಿದ ಪರಿಣಾಮ ಅತ್ಯಂತ ಮಹತ್ವದ್ದು. ಅದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವೆರಡನ್ನೂ ಉಂಟುಮಾಡಿತಾದರೂ ಕೂಡಾ , ಸಿಂಹಪಾಲು ಪರಿಣಾಮ ಅಧನಾತ್ಮಕವಾದುದು. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಕಷ್ಟು ರಚನೀಯ ಬದಲಾವಣೆಯನ್ನು ಉಂಟುಮಾಡಿತು. ಭಾರತದಲ್ಲಿನ ಕೇಂದ್ರ ಶಿಕ್ಷಣ ವ್ಯವಸ್ಥೆಯ ಭಾಗಗಳಾದ UGC, AICTE ಗಳು ಜಾಗತೀಕೃತ ವಿಶ್ವ ಆರ್ಥಿಕ ವ್ಯವಸ್ಥೆಗೆ ಅನುರೂಪವಾಗಿ ತಮ್ಮ ನೀತಿ ನಿಲುಮೆಯನ್ನು ಬದಲಾಯಿಸಿಕೊಂಡುವು. ಇಂತಹ ಪ್ರಯತ್ನ ಇಡೀ ಭಾರತದಲ್ಲಿ ಒಂದು ಶಿಕ್ಷಣ ಉದ್ಯಮವನ್ನು ಸೃಷ್ಟಿ ಮಾಡಿತು. ಬಂಡವಾಳ , ಮಾರುಕಟ್ಟೆ , ವಿನಿಮಯ ಉತ್ಪಾದನೆಗಳೇ ಅದರ ಮಂತ್ರವಾದುವು. ಇದು ಮುಖ್ಯವಾಗಿ 3 ಸಮಸ್ಯೆಗಳನ್ನು ಸೃಷ್ಟಿಸಿತು. ಒಂದು: ಶಿಕ್ಷಣವನ್ನು ಔಪಚಾರಿಕ ಉದ್ಯಮ-ಮಾರುಕಟ್ಟೆಯನ್ನಾಗಿಸಿ ಭಾರತದ ಶಿಕ್ಷಣ ವ್ಯವಸ್ಥೆಯ ಉದ್ಯಮವನ್ನು ಅಂತರಾಷ್ಟ್ರೀಯ ಶಿಕ್ಷಣ ವಾಣಿಜ್ಯದ ಜತೆಗೆ ಜೋಡಿಸಲು ಪ್ರಯತ್ನಿಸಿದ್ದು , ಎರಡು: ಮಾರುಕಟ್ಟೆಯ ಭರದಲ್ಲಿ ಶಿಕ್ಷಣವನ್ನು ಉದ್ಯಮವಾಗಿ...