ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕರ್ನಾಟಕದಲ್ಲಿ ಇಸ್ಲಾಂ

  ಕರ್ನಾಟಕದಲ್ಲಿ ಇಸ್ಲಾಂ ಎನ್ನುವ ತಲೆಬರಹವು ಕರ್ನಾಟಕದಲ್ಲಿ ಸೂಫೀ ಪರಂಪರೆ ಎನ್ನುವ ತಲೆಬರಹದಷ್ಟು ಸಂಕೀರ್ಣತೆಯನ್ನೂ ಮತ್ತು ಸಮಸ್ಯೆಯನ್ನು ತಂದೊಡ್ಡುತ್ತಿದೆ. ಈಗಾಗಲೇ ಈ ಸಮಸ್ಯೆಯ ಚರ್ಚೆಯನ್ನು ಚರ್ಚಿಸಿದ ಕಾರಣ. ಪುನ: ಅದರ ಚರ್ಚೆ ಅಪ್ರಸ್ತುತ ಎನ್ನುವುದು ನನ್ನ ತಿಳುವಳಿಕೆ. ಆದರೂ ಕರ್ನಾಟಕದಲ್ಲಿ ಇಸ್ಲಾಂ ಪ್ರತಿನಿಧಿತವಾದ, ಬರವಣಿಗೆಗೆ ಒಳಪಟ್ಟ ಅಥವಾ ಆ ನೆಲೆಯಲ್ಲಿ ರಚನೆಗೊಂಡ ಕ್ರಮ ಮತ್ತು ಅದರ ಸಮಸ್ಯೆಯ ಬಗ್ಗೆ ತಕರಾರನ್ನು ಮಾತ್ರ ಇಲ್ಲಿ ಎತ್ತಬಹುದು. ಅದು ಕರ್ನಾಟಕದಲ್ಲಿ ಇಸ್ಲಾಂ ಚರಿತ್ರೆಯ ರಚನೆಯ ಸಂದರ್ಭ ಒದಗಿಬರುವ ರಾಜಕೀಯ ವಂಶ ಅಥವಾ ಡೈನಾಸ್ಟೀಯ ಕಥನ ಕೇಂದ್ರತೆ, ಅಂದರೆ ಕರ್ನಾಟಕದಲ್ಲಿ ಇಸ್ಲಾಂ ಎಂದ ತಕ್ಷಣ ಅದೊಂದು ರಾಜಕೀಯ ವಂಶ ಕೇಂದ್ರಿತ ಎಂದೆಣಿಸುವ ಮತ್ತು ಅದರ   ಸಮಾನಾಂತರವಾದ ಕಥನದಂತೆ ಸಾಗುವ ಕ್ರಮದಿಂದಾಗಿ, ಕರ್ನಾಟಕದಲ್ಲಿ ಅದು ಮುಖ್ಯವಾಗಿ ರಾಜಕೀಯ ಕಥನವೇ ಆಗಿವೆ. ಅದನ್ನು ಹೊರತುಪಡಿಸಿದ ಭೌತಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಜನಪದರ ಅಥವಾ ಜನಸಾಮಾನ್ಯರ   ಅನುಭವದ ನೆಲೆ ಮತ್ತು ಸಂದರ್ಭಕ್ಕೆ ಒದಗುವುದೇ ಇಲ್ಲ. ಈ ಕಾರಣದಿಂದ ಈ ರೀತಿಯ ಅನೇಕ ಕಥನಗಳು ಅತ್ಯಂತಿಕವಾಗಿ ಇಸ್ಲಾಂ ಆಳ್ವಿಕೆಯನ್ನು ಕೇಂದ್ರೀಕರಿಸುತ್ತವೆ. ಈ ಮೂಲಕ ಇಸ್ಲಾಂ ಅನ್ನು ಅತ್ಯಂತ ವೈವಿಧ್ಯಪೂರ್ಣವಾಗಿ ಮತ್ತು ಬೇರೆಯದೇ ಆದ ನೆಲೆಗಳಿಂದ ಅರ್ಥೈಸಿಕೊಳ್ಳುವ ಕ್ರಮಕ್ಕೆ ತಡೆಯೊಡ್ಡುತ್ತದೆ. ಬಹುಶ: ಈ ನೆಲೆಯ ಅಧ್ಯಾಯಗಳು ಕನ್ನಡದಲ್ಲಿ...

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

  ಕನ್ನಡ ಸಿನಿಮಾ ಪರಂಪರೆ ಭಾರತದ ಕೆಲವೇ ಕೆಲವು ಪರಂಪರೆಗಳಲ್ಲಿ ಮಹತ್ವದ್ದು. ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅಸ್ಸಾಮೀ ಮತ್ತು ಬಂಗಾಲೀ ಸಿನಿಮಾ ಪರಂಪರೆಗಳಷ್ಟೇ ಅದು ಶಕ್ತಿಶಾಲಿಯಾದುದು ಮತ್ತು ಸತ್ವಪೂರ್ಣವಾದುದು. ಬಹುಶ: ಕನ್ನಡ ಚಿತ್ರರಂಗ ಉದ್ಯಮವಾಗಿಯೂ ಕೂಡಾ ಭಾರತದಲ್ಲಿ ಬಹಳ ಪ್ರಮುಖವಾದುದು. ಹಿಂದಿ ಹಾಗೂ ತಮಿಳಿನ ನಂತರ ಅತ್ಯಂತ ಹೆಚ್ಚು ಸಿನಿಮಾಗಳ ಉತ್ಪಾದನೆಯನ್ನು ನಾವಿಲ್ಲಿ ನೋಡಬಹುದು. ಸಿನಿಮಾ ಎನ್ನುವ ಮಾಧ್ಯಮವೇ ಅತ್ಯಂತ ಸಂಕೀರ್ಣ, ಅಂತೆಯೇ ಕನ್ನಡ ಸಿನಿಮಾ ಕೂಡಾ. ಕನ್ನಡ ಸಿನಿಮಾಕ್ಕೆ ಇಲ್ಲಿ ಒಂದು ತಂತ್ರಜ್ಞಾನವಿದೆ, ಸಿನಿಮಾವಸ್ತುವಿದೆ, ಒಂದು ಉದ್ಯಮವಿದೆ ಮತ್ತು ಇದೆಲ್ಲದರ ಜತೆ ಸಿನಿಮಾ ಭಾಷೆಯ ಸಾಂಗತ್ಯವಿದೆ. ಇಂತಹ ಕನ್ನಡ ಸಿನಿಮಾ ವಿಶಿಷ್ಠ ಮತ್ತು ಅನನ್ಯಗೊಳ್ಳುವುದು, ನಾವು ಕನ್ನಡವೆಂದು ಪರಿಭಾವಿಸುವ ಒಂದು ಸ್ಥಿತಿ ಮತ್ತು ಅನುಭವವನ್ನು ಈ ಸಿನಿಮಾ ಸಾಧ್ಯತೆಯು ಪ್ರತಿನಿಧಿಸುವ ಕಾರಣ. ಕನ್ನಡ ಸಿನಿಮಾ ಎಂಬುದೊಂದಿದೆಯೇ ? ಎಂಬ ಪ್ರಶ್ನೆಯನ್ನೂ ಈ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾಗುತ್ತದೆ ಕೂಡಾ. ಇದಕ್ಕೆ ಉತ್ತರರೂಪಿಯಾಗಿ ನಾವು ಅನಿರ್ದಿಷ್ಠತೆಯನ್ನೇ ಪಡೆಯಬೇಕಾಗುತ್ತದೆ. ಒಂದು: ಕನ್ನಡ ಸಿನಿಮಾ ಎಂಬುವ ಒಂದು ಸಾಧ್ಯತೆಯಿಲ್ಲ, ಬದಲು ಕನ್ನಡ ಸಿನಿಮಾಗಳು ಎಂಬ ಬಹು ಸಾಧ್ಯತೆಯೆಂಬ ಉತ್ತರಕ್ಕಾಗಿ, ಎರಡು: ನಾವು ಪರಿಭಾವಿಸುವ ರಾಜಕೀಯ ಗಡಿರೇಖೆಯ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳ ಜತೆ ಕೊಡವ, ಕೊಂಕಣಿ, ...