ಎಸ್.ಎಲ್ ಭೈರಪ್ಪ: ಕಥನ ಮತ್ತು ರಾಜಕಾರಣ

 

ಎಸ್.ಎಲ್. ಭೈರಪ್ಪ ಕನ್ನಡ ಮತ್ತು ಭಾರತದ ಸಂದರ್ಭದ ಅತ್ಯಂತ ಜನಪ್ರಿಯ ಸಾಹಿತಿ. ಬಹುಶ: ತೇಜಸ್ವಿ, ಯು.ಆರ್. ಅನಂತಮೂರ್ತಿಯವರನ್ನು ಬಿಟ್ಟರೆ ಕನ್ನಡದ ಕೃತಿಕಾರನೊಬ್ಬನ ಹೆಚ್ಚು ಕೃತಿಗಳು ಕನ್ನಡೇತರ ಭಾಷೆ ಮತ್ತು ಸಮುದಾಯಗಳ ನಡುವೆ ಪ್ರಚಲಿತವಿರುವ ಸಾಹಿತಿಯೆಂದರೆ ಎಸ್.ಎಲ್. ಭೈರಪ್ಪ. ಸಾರ್ಥ, ಪರ್ವ ಕಾದಂಬರಿಗಳು ಸಂಸ್ಕøತಕ್ಕೂ ಅನುವಾದಿತಗೊಂಡಿವೆ. ಬೆಂಗಳೂರಿನ ಸಂಸ್ಕø ಭಾರತೀ ಪ್ರಕಾಶನ ಇದನ್ನು ಪ್ರಕಟಿಸಿವೆ. ಬಹುಶ: ಕನ್ನಡದ ಸಂದರ್ಭದಲ್ಲಿ ಸಂಸ್ಕø ಭಾಷೆಗೆ ಅನುವಾದಿತಗೊಂಡ ಕೃತಿಗಳೇ ಇಲ್ಲವೆಂದು ನನ್ನ ಅಭಿಪ್ರಾಯ. ಬಹುಶ: ಅತ್ಯಂತ ಸಂಕೀರ್ಣ, ಸೈದ್ಧಾಂತಿಕ ನೆಲೆ ಕೂಡಾ ಇಲ್ಲಿದೆ. ತೇಜಸ್ವಿಯ ಕೃತಿಗಳನೇಕ ಜಪಾನೀ, ಚೀನೀ ಭಾಷೆಗೂ ಅನುವಾದಗೊಂಡಿರುವುದು ಹಿಂದಿನ ನಿಲುವುಗಳು ಹಾಗೂ ರಾಜಕಾರಣ, ಭೈರಪ್ಪ ಕೃತಿಗಳ ಸಂಸ್ಕøತಾನುವಾದ ಹಿಂದಿರುವ ರಾಜಕಾರಣವೇ ಬಹುಶ: ಭೈರಪ್ಪ ಅವರ ನಿಲುವುಗಳ ಮತ್ತವುಗಳು ಪ್ರತಿನಿಧಿಸುವ ಕೋಮುವಾದೀ ರಾಜಕಾರಣದ ನಿರೂಪಣೆಯಾಗಿ, ನಡವಳಿಕೆಯಾಗಿ ಗೋಚರಿಸುತ್ತದೆ. ಅನುವಾದದ ಮೂಲಕ, ವಿಚಾರದ ಪ್ರಸಾರವಾಗಿ ತಾತ್ವಿಕವಾದ ಕೋಮುವಾದೀ ವಿಚಾರಗಳು ಗರಿಗೆದರಿದರೆ, ಉದ್ಯಮಕ್ಕೆ ಕೃತಿಕಾರ ಸಮ್ಮತಿಸುವ ಪರಿಯ ಮೂಲಕ ಆತನ ಕೋಮುವಾದೀ ಮನೋಭಾವವು ಕೂಡಾ ರೀತಿಯಲ್ಲಿ ಪ್ರಕಟಗೊಳ್ಳುತ್ತದೆ. ಹಿಂದಿ ಮತ್ತು ಮರಾಠಿಯಲ್ಲಿ ಭಾಷೆಯ ಲೇಖಕರನ್ನು ಹೊರತುಪಡಿಸಿದರೆ ಅತ್ಯಂತ ಜನಪ್ರಿಯ ಸಾಹಿತಿಯೆಂದರೆ ಎಸ್.ಎಲ್.ಭೈರಪ್ಪನವರು. ಯಾರು ಓದುಗರು? ಭೈರಪ್ಪನೆನ್ನುವ ಓದುಗನನ್ನು ಅವರು ಹೇಗೆ ರೂಪಿಸುತ್ತಿದದಾರೆ? ಭೈರಪ್ಪ ಹೇಗೆ ಅವರನ್ನು ಪ್ರಭಾವಿಸುತ್ತಿದ್ದಾರೆ? ಭೈರಪ್ಪನವರ ಕೃತಿಗಳು ಆವೃತ್ತಿಯ ಮೇಲೆ ಆವೃತ್ತಿ ಖರ್ಚಾಗುವ, ಕರಗುವ ಕಾರಣವೇನು? ಇದರ ಹಿಂದಿನ ರಾಜಕಾರಣವೇನು? ಸಾಹಿತ್ಯದ ಸಂದರ್ಭ ಮತ್ತು ರಾಜಕಾರಣವೇನು? ಭೈರಪ್ಪನವರ ಸಾಹಿತ್ಯ ಕೃತಿಗಳು ತಂದೊಡ್ಡುವ ಸಾಂಸ್ಕøತಿಕ ರಾಜಕಾರಣವೇನು? ಹೀಗೆ ಹತ್ತು ಹಲವಾಋಉ ಪ್ರಶ್ನೆಗಳನ್ನು ಎಲ್.ಎಲ್.ಭೈರಪ್ಪನವರ ಕೃತಿಗಳು ತಂದೊಡ್ಡುತ್ತವೆ. ಬಹುಶ: ಅಂತಹ ಸರಣಿ, ಸಂಕೀರ್ಣ ಪ್ರಶ್ನೆಗಳಿಗೆ ಹುಡುಕುವ ಉತ್ತರಗಳು ಖಂಡಿತವಾಗಿ ಕೋಮುವಾದಿ ರಾಜಕಾರಣವನ್ನು, ಅದರ ಬಗೆಗಿನ ಭೈರಪ್ಪನವರ ಬದ್ಧತೆಯನ್ನು ಅದು ಅಭಿವ್ಯಕ್ತಿ ಪಡೆದಿರುವ ಸ್ವರೂಪವನ್ನೂ ಕೂಡಾ ಗಮನಿಸಬಹುದಾಗಿದೆ. ಭೈರಪ್ಪನವರ ಕೃತಿ ಮತ್ತು ಜೀವನದ ತಾತ್ವಿಕತೆಗಳೂ ಕೂಡಾ ಕೋಮುವಾದಿ ನಿಲುವುಗಳನ್ನು ಹೊಂದಿರುವುದನ್ನೂ ತನ್ಮೂಲಕ ಗಮನಿಸಬಹುದಾಗಿದೆ. ಬಹುಶ: ಭೀಮಕಾಯ, ಧರ್ಮಶ್ರೀಯಿಂದ ಹಿಡಿದು ಅವರ ಇತ್ತೀಚಿನ ಆವರಣ, ಕಮುಯಾನದವರೆಗಿನ ಎಲ್ಲಾ ಕಾದಂಬರಿಗಳ ತಾತ್ವಿಕ ಸ್ವರೂಪವೂ ಇದೇ ಆಗಿದೆ. ಕೋಮುವಾದಿ ರಾಜಕಾರಣದ ಸ್ವರೂಪವಾಗಿರುವ ಹಿಂದುತ್ವ, ವೈದಿಕತೆ, ಜಾತಿ ರಚನೆಯ ಬಗೆಗಿನ ಮಾನ್ಯತೆ, ಪ್ರಾಚೀನ ವೈಭವ, ಮುಸ್ಲಿಂ ಧಾಳಿಯ ನಿರೂಪಣೆಯ ಚರಿತ್ರೆ, ಮುಸ್ಲಿಂ ಸಮುದಾಯದ ಮೇಲಿನ ಪೂರ್ವಗ್ರಹಗಳು, ಸಂಸ್ಕøತಿ, ಸಂಸ್ಕø ಭಾಷೆಯ ಶ್ರೇಷ್ಠತೆಗಳು ಭೈರಪ್ಪನವರ ಮತ್ತು ಅವರ ಕೃತಿಗಳ ಕಾಳಜಿಯೂ ಆಗಿವೆ. ಇವೆಲ್ಲಾ ಮತ್ತು ಇನ್ನೂ ಹಲವು ಕಾರಣಗಳಿಂಧ ಭೈರಪ್ಪನವರ ಸಾಹಿತ್ಯವು ಕನ್ನಡ ಸಂದರ್ಭದ ಹಿಂದುತ್ವದ ರಾಜಕಾರಣದ ಅವತಾರವಾಗಿ ಕಾಣುತ್ತದೆ. ಭೈರಪ್ಪನವರಿಗೆ ಅದರ ಮೇಲೆ ಬದ್ಧತೆ ಇದೆ. ನೆಲೆಯಲ್ಲಿ ರಾಂ ಗುಹಾ ಹೇಳುವ, “ಕಟ್ಟರ್ ಪಂಥಿ ಬಲಪಂಥೀಯರು ಮತ್ತು ಎಡಪಂಥೀಯರನ್ನು ನೋಡಿದಾಗ ಅವರ ಸೈದ್ಧಾಂತಿಕತೆಯ ಅತಿರೇಕವಿದ್ದಾಗ್ಯೂ ಕೂಡಾ ಆಕರ್ಷಕವಾಗಿರುತ್ತಾರೆ ಎನ್ನುವುದನ್ನೂ ಕೂಡಾ ಒಪ್ಪಬಹುದಾಗಿದೆ. ಬಹುಶ: ಬದ್ಧತೆಯ ಕಾರಣದಿಂದಲೇನೇ ಹೀಗೆ ಹೇಳಿದ್ದಿರಬಹುದು. ಬದ್ಧತೆಯ ಸಿಂಧುತ್ವ, ಸರಿ-ತಪ್ಪುಗಳ ವಿವೇಚನೆಯಿದ್ದಾಗ್ಯೂ ಕೂಡಾ ಮಾತನ್ನು ಉಲ್ಲೇಖಿಸಿಯೇ ನಾನು ನನ್ನ ವಾದಗಳನ್ನು ಭೈರಪ್ಪನವರ ಜತೆ ಮುಖಾಮುಖಿಯಾಗಿಸಬೇಕಾಗುತ್ತದೆ.

       ಭೈರಪ್ಪನವರ ಸಾಹಿತ್ಯಮಿಮಾಂಸೆ ಅಥವಾ ಭೈರಪ್ಪ ಸಾಹಿತ್ಯ ಹುಟ್ಟುವ ಬಗೆಗೆ ನಡೆದಿರುವ ಅಲ್ಪ ಅಧ್ಯಯನಗಳ ಜತೆಯಲ್ಲಿಯೇ ನಾವು ಅವರನ್ನು ವಿಮರ್ಶಿಸಿ ಮುಂದೆ ಸಾಗಬೇಕಾಗುತ್ತದೆ. ಭೈರಪ್ಪನವರನ್ನೂ ಅವರ ಸಾಹಿತ್ಯವನ್ನು ಜರಿದು ತಾತ್ಸಾರ ಮಾಡಿದ ಅನುಭವವೇ ಕನ್ನಡದ ಸಂದರ್ಭದಲ್ಲಿ ಹೆಚ್ಚು. ಬಹುಶ: ಇದೊಂದು ದೊಡ್ಡ ಕೊರತೆ ಮತ್ತು ಅಪಾಯ ಕೂಡಾ ಹೌದು. ವೈಯುಕ್ತಿಕವಾಗಿ ನನಗನ್ನಿಸಿದ್ದು ನವ್ಯದಂತಹ ಪ್ರಧಾನ, ಪ್ರಭಾವೀ ಸಾಹಿತ್ಯ ಮತ್ತು ವಿಮರ್ಶಾ ಪರಂಪರೆ ಭೈರಪ್ಪನವರನ್ನು ಸೇರಿ, ಇನ್ನೂ ಅನೇಕರನ್ನು, ಅನೇಕ ಹೊಸತನ, ಪ್ರಶ್ನೆಗಳನ್ನು, ಚೌಕಟ್ಟುಗಳನ್ನು ಬದಿಗೆ ಸರಿಸಿದ, ಅಭಿವ್ಯಕ್ತಿ ಕ್ರಮದ ಬಗ್ಗೆ ಕೂದಲು ಸೀಳುವ ಹಾಗೆ ಅಭಿವ್ಯಕ್ತಿಸಿ, ಕೊನೆಗೆ ಅಭಿವ್ಯಕ್ತಿಯನ್ನೇ ದಮನಿಸಿದ ಯಾಜಮಾನ್ಯ (ಹೆಜಿಮನಿ)ವಾಗಿ ಕಂಡುಬಂದ ನವ್ಯದಂತಹ ಪ್ರಬಲ ರಾಜಕಾರಣದ ಸೂತ್ರ-ಬಲವನ್ನು ಹೊಂದಿದ ನವ್ಯ ಚಳುವಳಿಯ ರಾಜಕಾರಣವೂ ಕೂಡಾ ಇದರ ಹಿಂದಿರುವುದನ್ನು ಇಲ್ಲವೆನ್ನಲಾಗದು. ತೇಜಸ್ವಿಯನ್ನು, ಲಂಕೇಶ್ರನ್ನು ಮಡಿಯಲ್ಲಿಟ್ಟು, ಬದಿಯಲ್ಲಿಟ್ಟು ಕ್ರಮದ ನೆಲೆಯೂ ಬಹುಶ: ರೀತಿಯದ್ದೇ ಆಗಿದೆ. ಭೈರಪ್ಪರ ನಿಲುವುಗಳು ಏನೇ ಆಗಿರಲಿ, ಭೈರಪ್ಪ ಏನು? ಏಕೆ? ಹೇಗೆ? ಭೈರಪ್ಪ ಎನ್ನುವ ಸಾಹಿತ್ಯದ ಕ್ರಮ, ಅಭಿವ್ಯಕ್ತಿ ರೂಪುಗೊಳ್ಳುವ ಬಗೆ ಏನು? ಹೇಗೆ? ಅವರನ್ನು ನಿರೂಪಿಸಿ, ನಿರ್ಮಿಸಿದ ಕಾಲ ದೇಶಗಳೇನು? ಇತ್ಯಾದಿ ಅನೇಕ ಪ್ರಶ್ನೆಗಳನ್ನು ಸಂಕೀರ್ಣತೆಯನ್ನು ಮುಟ್ಟಿ, ಪ್ರಶ್ನಿಸಿ, ಅನುಮಾನಿಸಿ ತರ್ಕಿಸಿದ ವಿಭಿನ್ನ ನೆಲೆಯ ಅಧ್ಯಯನಗಳು ಆಗಬೇಕಿತ್ತು. ಆದರೆ ಕನ್ನಡದಲ್ಲಿ ಇಂತಹದ್ದೊಂದು ಆಗಲೇ ಇಲ್ಲ. ಭೈರಪ್ಪನವರ ಪಾತ್ರಗಳನ್ನಿಟ್ಟುಕೊಂಡೇ ಬಹುಶ: ಒಂದು ಮನ:ಶಾಸ್ತ್ರೀಯ, ಸಮಾಜಶಾಸ್ತ್ರೀಯ ಅಧ್ಯಯನಗಳನ್ನೂ ನಡೆಸಬಹುದೇನೋ. ಭೈರಪ್ಪನವರ ಕೃತಿಗಳಲ್ಲಿ ಪರ್ವ, ಗೃಹಭಂಗ ತುಸು ವಿಭಿನ್ನವಾಗಿ ನಿಲ್ಲುತ್ತದೆ. ಅವುಗಳು ಯಾಕೆ ರೀತಿಯಲ್ಲಿ ರೂಪುಗೊಂಡುವು. ಅವುಗಳನ್ನು ಪ್ರಭಾವಿಸಿದ ಮತ್ತು ಭೈರಪ್ಪರನ್ನು ಪ್ರಭಾವಿಸಿದ ಅಂಶಗಳೇನು? ಹೀಗೆ ಹತ್ತು ಹಲವು ಸಾಧ್ಯತೆಯಿತ್ತು ಅಧ್ಯಯನಗಳಿಗೆ. ಬದಲು ಭೈರಪ್ಪನವರ ಬಗ್ಗೆ ಪಾಪ್ಯುಲರ್ ಆದ, ಆ್ಯಕ್ಟಿವಿಸಂನ ನೆಲೆಯ, ತುರ್ತು-ಅತಿಜರೂರಿನ, ಆತುರದ ಬಿಡಿ ಬಿಡಿ ಬರಹಗಳು ಬಂದುವು. ಆವರಣದಂತಹ ಚರಿತ್ರೆ ಮತ್ತು ವರ್ತಮಾನದ ಸಂಬಂಧದ, ಚರಿತ್ರೆಯೆಂಬ ವರ್ತಮಾನದ ಅಗತ್ಯತೆ ಮತ್ತು ಮಾನ್ಯತೆಯ ವಿಷಯ ಸಂಬಂಧಿಸಿದ ಚರ್ಚೆಯ ಕೃತಿ ಬಂದಾಗಲೂ ಕನ್ನಡದ ತಥಾಕಥಿತ ವಿಮರ್ಶಕ ವಲಯ, ಚಿಂತಕ, ಬುದ್ಧಿಜೀವಿ, ಬೀದಿ ಹೋರಾಟಗಾರರು ಮತ್ತು ಅನೇಕ ಪಂಗಡಗಳು ಅತ್ಯಂತ ಗಂಭೀರವಾಗಿ ಚರಿತ್ರೆಯ ಬಳಕೆ ಮತ್ತು ಆವರಣದ ವಿನ್ಯಾಸವನ್ನು ಕುರಿತು, ಅದರ ರಾಜ ಕಾರಣವನ್ನು ಕುರಿತು ಯಾವುದೇ ಗಂಭೀರ ಅಧ್ಯಯನದಲ್ಲಿ ತೊಡಗಲಿಲ್ಲ. ಭೈರಪ್ಪನವರ ಬಗೆಗೆ ಬಹುಶ: ಅತ್ಯಂತ ಗಂಭೀರವಾಗಿ ಬಂದ ಒಂದು ವಿಮರ್ಶೆಯ ಕೃತಿಯೆಂದರೆ1990 ದಶಕದಲ್ಲಿ ಗೋವಿಂದರಾವ್ ಮತ್ತು ಕುಲಕರ್ಣಿ, ವಂಶವೃಕ್ಷ ಕೃತಿಯ  ನಂತರ ಸಂಪಾದಿಸಿದ ಸಹಸ್ಪಂದನ. ಅದನ್ನು ಬಿಟ್ಟರೆ ಬಹುಶ: ಸ್ವಲ್ಪ ಗಂಭೀರವಾಗಿ ಭೈರಪ್ಪನವರ ಕೃತಿಗಳಲ್ಲಿ ಧರ್ಮದ ಸ್ವರೂಪವನ್ನು ಚರ್ಚಿಸಿದ್ದಾರೆ ಗೌರೀಶ ಕಾಯ್ಕಿಣಿಯವರು. ಕಾಯ್ಕಿಣಿ, ಭಾರತದಲ್ಲಿ ನಡೆದ ಹಿಂದುತ್ವ, ಮತ್ತು ಬಲಪಂಥೀಯ ರಾಷ್ಟ್ರವಾದ ಮತ್ತದರ ಸಾಧನಗಳನ್ನೂ ವಿಮರ್ಶಿಸಿದ ರೀತಿಯಲ್ಲಿ ಅಧ್ಯಯನ ಮಾಡದೇ ಇದ್ದರೂ, ತುಸುಮಟ್ಟಿಗೆ ಸೃಜನಶೀಲ, ಒರಿಜಿನಲ್ ಎನ್ನುವ ನೆಲೆಯಲ್ಲಿಧರ್ಮಶ್ರೀ ಯಂತಹ ಕಾದಂಬರಿಯ ಧರ್ಮದ ಪ್ರಶ್ನೆ ಮತ್ತು ರಾಜಕಾರಣವನ್ನು ಚರ್ಚಿಸುತ್ತಾ ಹೋಗುತ್ತಾರೆ. ಬಹುಶ: ಅವರ ಪ್ರಾಮಾಣಿಕತೆಗೆ ನಮೋ ಎನ್ನಬೇಕು. ಇನ್ನುಳಿದಂತೆಆವರಣ ಅನಾವರಣ ಬರಹಗಳು ಮತ್ತು ತರೀಕೆರೆ, ನಟರಾಜ್ ಹುಳಿಯಾರ್ ಮತ್ತಿತರರ ಬರಹಗಳು ಅತ್ಯಂತ ಗಂಭೀರವಾಗಿ ಏನನ್ನೂ ಪರೀಕ್ಷೆಗೊಡ್ಡಲೇ ಇಲ್ಲ. ಡಿ.ಆರ್. ನಾಗರಾಜ್ರಂತಹ ವಿಮರ್ಶಕ ಕೂಡಾ ಅತ್ಯಂತ ಪಾಪ್ಯುಲರ್ ನೆಲೆಯಲ್ಲಿಯೇ ಅವರನ್ನು ಪರಿಚಯಿಸಿದರು. ಬಹುಶ: ಭೈರಪ್ಪರ ಅಧ್ಯಯನದ ಸಂದರ್ಭದಲ್ಲಿ ಒದಗುವ ದೊಡ್ಡ ತೊಡಕೆಂದೇ ನನ್ನ ಅಭಿಪ್ರಾಯ. ಭಾರತದಲ್ಲಿ ಕೋಮುವಾದಿ ರಾಜಕಾರಣ, ಹಿಂದುತ್ವ ಪಾಲಿಟಿಕ್ಸ್ ಮೇಲೆ ರಾಶಿ ರಾಶಿ ಅತ್ಯಂತ ಗಂಭೀರ ಅಧ್ಯಯನಗಳಾಗಿವೆ. ಕ್ರಿಸ್ಟೋಫರ್ ಜೆಪ್ರಲಾಟ್, ಆ್ಯಂಡರ್ಸನ್, ಜೋತಿರ್ಮಯ್ ಶರ್ಮಾ, ಕೆ.ಎನ್. ಫಣಿಕ್ಕರ್, ಬಿಪನ್ಚಂದ್ರ, ಗ್ಯಾನೇಂದ್ರ ಪಾಂಡೆ ಮುಂತಾದವರು ತಲಸ್ಪರ್ಶಿ ಅಧ್ಯಯನವನ್ನೂ ನಡೆಸಿ ರೀತಿಯ ಕೋಮುವಾದಿ ರಾಜಕಾರಣ ಹುಟ್ಟುವ ಬಗೆಯನ್ನು, ಆಯಾಮವನ್ನು ಕೂಡಾ ಅಧ್ಯಯನ ನಡೆಸಿದ್ದಾರೆ. ರೊಮಿಲಾ ಥಾಪರ್, ಡಿ.ಎನ್. ಝಾರಂತಹ ವಿದ್ವಾಂಸರು ಬಲಪಂಥದ ಸಾಂಸ್ಕøತಿಕ ಪ್ರತಿಮೆಗಳ ಮೇಲೆ ಅತ್ಯಂತ ಸಂಕೀರ್ಣವಾದ ಪ್ರಶ್ನೆಗಳನ್ನೂ ತಳೆದಿದ್ದಾರೆ. ರೊಮಿಲಾ ಥಾಪರ್ ಅಂತೂ ಭಾರತದಲ್ಲಿ ಧಾರ್ಮಿಕ ಸಮುದಾಯಗಳು ರೂಪುಗೊಳ್ಳುವ, ಏಕರೂಪಗೊಳ್ಳುವ ಬಗೆ ಮತ್ತು ಸಮುದಾಯಗಳ ಧಾರ್ಮಿಕ ಅಸ್ಮಿತೆ ಜಾಗೃತಗೊಳ್ಳುವ ರಾಜಕಾರಣವನ್ನು ಅತ್ಯಂತ ಸಂಕೀರ್ಣವಾಗಿ ಅಧ್ಯಯನ ಮಾಡಿದ್ದಾರೆ. ಆದರೆ ಭೈರಪ್ಪ ಮತ್ತು ಅವರು ಪ್ರತಿನಿಧಿಸುವ ಕೋಮುವಾದದ ರಾಜಕಾರಣ, ಅದರ ವಿನ್ಯಾಸ, ಅದು ಚಾರಿತ್ರಿಕವಾಗಿ ಬೆಳೆದಿರುವಂತಹ ಕ್ರಮದ ಅಧ್ಯಯನವಾಗಿಲ್ಲದಿರುವುದು ನಿಜಕ್ಕೂ ವಿಷಾದನೀಯ. ಭಾರತದಲ್ಲಿ ಕೋಮುವಾದೀ ರಾಜಕಾರಣ, ಹಿಂದುತ್ವ ಪಾಲಿಟಿಕ್ಸ್ ಬಗೆಗೆ ಬಂದಿರುವ ಅಧ್ಯಯನಗಳು ಸಾಹಿತಿ, ಚಿಂತಕರು, ಹೋರಾಟಗಾರರು, ಸಮಾಜ ವಿಜ್ಞಾನಿಗಳು, ಎಲ್ಲರಿಗೂ ಕೂಡಾ ಸಾಕಷ್ಟು ಆಹಾರವನ್ನು ನೀಡಿತು.

       ಭೈರಪ್ಪನವರ ಬಗೆಗೆ ಬಂದಿರುವ ಕೃಪಾಪೋಷಣೆಯ, ಪೋಷಿತ ವಿಮರ್ಶೆ, ಬರಹಗಳಂತೂ ಭೈರಪ್ಪನವರ ಸಾಹಿತ್ಯ ಮತ್ತು ಅವರು ಪ್ರಸ್ತುತಗೊಳಿಸುವ ರಾಜಕಾರಣದ ತಾತ್ವಿಕತೆಗೆ ಪೂರಕವಾಗಿಯೇ ಸಾಗುತ್ತದೆ. ಇಲ್ಲಿನ ಕೆಲವರಂತೂ ಸ್ವಘೋಷಿತ ಸಾಹಿತಿಗಳು. ಶತಾವಧಾನಿ ಆರ್. ಗಣೇಶ್ ಸಾಹಿತ್ಯದಲ್ಲೂ ಅವಧಾನ ಹರಿಸಿದ್ದು, ಪ್ರಧಾನ ಗುರುದತ್ತರ ಭೈರಪ್ಪನವರ ಬಗೆಗಿನ ಅಸ್ಖಲಿತ ಭೈರಪ್ಪ ಪ್ರಜ್ಞೆ-ಕಾಳಜಿ, ಸುಮತೀಂದ್ರ ನಾಡಿಗ, ದೊಡ್ಡರಂಗೇ ಗೌಡರಂತಹ ಮೊನಚು ಕಳೆದುಕೊಂಡ ಸಾಹಿತಿಗಳು ಇನ್ನೂ ಅನೇಕರು ಬಳಗದಲ್ಲಿರುವವರು. ಒಂದು ನೆಲೆಯ ಭಟ್ಟಂಗಿತನವೇ ಮೈವೆತ್ತ ರೂಪದಂತೆ ಕೋಟೆಯಿದೆ. ತನ್ನ ಗೋಡೆಯನ್ನೊಡೆಯದೇ ಇನ್ನೂ ಭದ್ರವಾಗಿ ತತ್ವ-ನಿಷ್ಕರ್ಶೆಯನ್ನು ಮಾಡಲಾಗುತ್ತಿದೆಯಷ್ಟೇ ಇಲ್ಲಿ.  ಇಲ್ಲಿ ಸಂವಿಧಾನವಿಲ್ಲ, ಸಂವಾದವಿಲ್ಲ, ಸಂಘೀಯತೆ ಮತ್ತು ಸಂಘ-ಸಂವಿಧಾನ ಅಂದರೆ ಅಪ್ರಶ್ನೀಯತೆ, ಬರಿ ತಲೆ ಅಲ್ಲಾಡಿಸುವುದಷ್ಟೇ ಇಲ್ಲಿ ನಡೆಯುವಂತದ್ದು. ಇವರ ತರ್ಕಗಳು ಓರಿಯಂಟಲ್ ತರ್ಕಗಳಿಂದ ಇನ್ನೂ ದೂರ ಸರಿದಿಲ್ಲ. ಇವರು ವಿಮರ್ಶೆಗೆ ಬಳಸುವುದು ಆನಂದ ಕಮಾರ ಸ್ವಾಮಿಯವರ, ಡ್ಯಾನ್ಸ್ ಆಫ್ ಶಿವ ಮತ್ತು ಸೌಂದರ್ಯ ಮೀಮಾಂಸೆ. ಅದೇ ತರ್ಕಗಳು ಅವರಿಗೆ ಬತ್ತದಿರುವ ಗಂಗೆ. ಇಲ್ಲಿ ಒಂದೇ ಒಂದು ಬೇಸರವೆಂದರೆ ನಾಡಿಗರು ಆರಂಭದ ತಮ್ಮ ಕಾವ್ಯ ಕೃಷಿಯಲ್ಲಿ ತುಂಬಾ ಸಂವೇದನೆಗಳನ್ನು ಹೊಂದಿದ್ದವರು, ಆದರೆ ಹೇಗೆ? ಯಾಕೆ? ಯಾವಾಗ ಇವರನ್ನು ಸೇರಿಕೊಂಡರೋ ನಾಕಾಣೆ. ನೆಲೆಯಿಂದ ರೀತಿ ವಿಮರ್ಶಕ ಪರಂಪರೆ ಭೈರಪ್ಪನವರ ಅಧ್ಯಯನದಲ್ಲಿ ಅತ್ಯಂತ ಮುಖ್ಯವಾಗುವುದಿಲ್ಲವೆಂದೇ ನನ್ನ ಅಭಿಪ್ರಾಯ. ಆದರೆ ಕೃಪಾಪೋಷಣೆಯ ಹಿಂದಿರುವ ರಾಜಕಾರಣದ ವಿನ್ಯಾಸವನ್ನು ಖಂಡಿತವಾಗಿ ವಿಶೇಷವಾದಂತಹ ಅಧ್ಯಯನ ನಡೆಸಬಹುದೇನೋ ಅನ್ನಿಸುತ್ತದೆ. ಇವರಿಂದ ಹೆಚ್ಚಿನ ನಿರೀಕ್ಷೆ ಮಾಡಲಾಗದು. ಹಾಗೆ ನೋಡ ಹೊರಟರೆ ವಂಶವೃಕ್ಷ ಮೇಲಿನ ನವ್ಯ ವಿಮರ್ಶೆ ಅತ್ಯಂತ, ಗಂಭೀರ, ಶಿಸ್ತಿನ, ಅಕಡಮಿಕ್ ಸ್ವರೂಪವನ್ನು ಹೊಂದಿರುವಂತದ್ದೂ ಆಗಿದೆ. ಆಮೂರ, ಗಿರಡ್ಡಿ, ಅನಂತಮೂರ್ತಿಯವರ ಬರಹಗಳು ಅತ್ಯಂತ ಒಳ್ಳೆಯ ಒಳನೋಟಗಳನ್ನು ಹೊಂದಿರುವಂತದ್ದು ಸತ್ಯವಾಗಿದೆ.

       ನಾನು ಆರಂಭದಲ್ಲಿಯೇ ಭೈರಪ್ಪನವರ ಬಗೆಗೆ ಎತ್ತಿದ ಪ್ರಶ್ನೆಗಳ ಆಧಾರದ ಮೇಲೆ ಚರ್ಚೆಯನ್ನೂ ಎತ್ತಿಕೊಳ್ಳುತ್ತೇನೆ. ಭೈರಪ್ಪನವರ ಜನಪ್ರಿಯತೆ ಮತ್ತು ಅದನ್ನು ಸಾಧಿಸಲು ನೆರವಾದ ಓದುಗ ಸಮುದಾಯದ ಕಾಳಜಿಯ ಪ್ರಶ್ನೆಯನ್ನು ನಾನು ಕೊನೆಗೆ ಎತ್ತುತ್ತೇನೆ. ಮೊದಲು ಭೈರಪ್ಪನವರ ಸಂಸ್ಕø ಅನುವಾದ ಮತ್ತು ಕಾಳಜಿಯ ಪ್ರಶ್ನೆಯನ್ನು ನಾನು ಎತ್ತಿಕೊಳ್ಳುತ್ತೇನೆ. ಭೈರಪ್ಪನವರ ಸಂಸ್ಕø ಕೃತಿಗಳ ಅನುವಾದ, ವಿಶೇಷವಾಗಿ ಸಾರ್ಥ ಮತ್ತು ಪರ್ವವನ್ನು ಅನುವಾದಿಸಿದ್ದು ಸಂಸ್ಕø ಭಾರತೀ ಎನ್ನುವ ಸಂಘಟನೆ. ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಥೆ, ಇದೀಗ ಇಡೀ ದೇಶದಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿದೆ. ಮೊದಲು ತನ್ನ ಕೇಂದ್ರಸ್ಥಾನವಾಗಿದ್ದ ಗಿರಿನಗರದ ಸಂಸ್ಕø ಭಾರತೀ ಈಗ ಬರೀ ದಕ್ಷಿಣ ಕರ್ನಾಟಕದ ಸಂಸ್ಕø ಭಾರತೀಯ ಕೇಂದ್ರವಾಗಿದೆ. ಸಂಸ್ಕø ಭಾರತಿ ಸಂಸ್ಥೆಯು ಸಂಸ್ಕø ಪ್ರಚಾರ, ಪ್ರಸಾರಕ್ಕೋಸ್ಕರ ಹುಟ್ಟಿದಂತಹ ಸಂಸ್ಥೆಯಾಗಿದ್ದು, ಸದ್ಯ ದೆಹಲಿಯಲ್ಲಿ ಕೇಂದ್ರ ಕಛೇರಿ ಹೊಂದಿದೆ. ದೂರದ ಅಮೇರಿಕಾ, ಯುರೋಪ್ಗಳಲ್ಲಿ ಕೂಡಾ ಕೇಂದ್ರಗಳನ್ನು ಹೊಂದಿದೆ. ಸುಮಾರು 1980 ದಶಕದಲ್ಲಿ ಸಂಸ್ಕø ಭಾರತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಪರಿವಾರವಾಗಿ ಹುಟ್ಟಿತು. ಭೈರಪ್ಪನವರ ಬಾಲ್ಯದ ಗೆಳೆಯ ಸಹಪಾಟಿಯಾದ ಆರೆಸ್ಸೆಸ್ ಪ್ರಚಾರಕ ಒಬ್ಬರ ಸೂಚನೆಯ ಮೇರೆಗೆ ತಿರುಪತಿಯ ರಾಷ್ಟ್ರೀಯ ಸಂಸ್ಕø ವಿದ್ಯಾಪೀಠದಲ್ಲಿ ಕಲಿತ ಉಡುಪಿಯ ವ್ಯಕ್ತಿಯೊಬ್ಬರು ಸಂಸ್ಕø ಭಾರತೀ ಸಂಸ್ಥೆಯನ್ನು ಆರಂಭಿಸಿದರು. 1980 ದಶಕದಲ್ಲಿ ಉಡುಪಿಯಲ್ಲಿ ನಡೆದವಿಶ್ವ ಹಿಂದೂ ಪರಿಷತ್ ಮಹಾಸಮ್ಮೇಳನದ ವಿವಿಧ ಗೊತ್ತುವಳಿಗಳಲ್ಲಿ, ಸಂಸ್ಕø ಮತ್ತು ಸಂಸ್ಕøತಿಯು ಅತ್ಯಂತ ಪ್ರಮುಖವಾದ ವಿಷಯವಾಯಿತು. ನಂತರ ಆರೆಸ್ಸೆಸ್ ಸೈದ್ಧಾಂತಿಕತೆಯಲ್ಲೂ ಮಹತ್ವದ ಪಾಲು ಪಡೆಯಿತು. ಸಂಸ್ಕø ಭಾರತೀ ಆರೆಸ್ಸೆಸ್ನಿಂದ ತಾತ್ವಿಕ ಮನ್ನಣೆಯನ್ನು ಪಡೆದುಭಾರತಸ್ಯ ಪ್ರತಿಷ್ಠೇ ದ್ಯೇ, ಸಂಸ್ಕøತಂ, ಸಂಸ್ಕøತಿಸ್ತಥಾ ಎನ್ನುವ ಘೋಷವಾಕ್ಯದಲ್ಲಿ ಮುನ್ನಡೆಯಿತು.

       ಸಂಸ್ಕø ಭಾರತೀ ಚಟುವಟಿಕೆಗಳು ಮತ್ತು ನಂಬಿಕೆಗಳು ಸಾಂಸ್ಕøತಿಕ ರಾಷ್ಟ್ರವಾದ, ಭಾಷೆಯ ಮೇಲಿನ ರಾಷ್ಟ್ರವಾದದ ರೂಪದಲ್ಲಿ ಮೂಡಿದುವು. ಸಂಸ್ಕø ಎಂಬ ದೇವಭಾಷೆ ಜನಭಾಷೆಯೂ ಆಗಿತ್ತು, ಅದು ಜನಮಾನಸದಲ್ಲಿ ರೂಢಿಯಲ್ಲಿತ್ತು ಎನ್ನುತ್ತಾ ಅಂತಹ ದೇವಭಾಷೆಯನ್ನು ಪುನ: ಜಾಗೃತಗೊಳಿಸಿ, ಸಂಸ್ಕøತದ ನೆಲೆಯ, ಸಂಸ್ಕø ವಿಶಿಷ್ಠವಾದ ಪಾನ್ ಇಂಡಿಯನ್ ನೆಲೆಯ ಮೇಲೆ ಪ್ರಭಾವಿಸುವ, ರೂಪುಗೊಳ್ಳುವ ದೇಶಕ್ಕಾಗಿ ಆಗ್ರಹಿಸಿತು. ಸಂಸ್ಕø ಭಾಷೆಯ ಬಗೆಗೆ ತಾನು ಪಡೆದ ಪ್ರೇರಣೆಗಳೂ ಕೂಡಾ 19ನೆಯ ಶತಕದ ಇಂಪೀರಿಯಲ್ ಮತ್ತು ಒರಿಯಂಟಲ್ ಗ್ರಹಿಕೆಗಳ ಮೇಲೆ ರೂಪಿತವಾಗಿತ್ತು. ಸಂಸ್ಕø ಭಾರತಿ ಮತ್ತದರ ತಾತ್ವಿಕತೆ ಖಂಡಿತವಾಗಿ ಕೂಡಾ ಓರಿಯಂಟಲಿಸಂ ರೂಪಿತ ವಿದ್ಯಮಾನವೇ ಆಗಿದೆ. ಸಂಸ್ಕø ಭಾರತಿಯ ತರ್ಕಗಳು ಇಸ್ರೇಲ್ ಮತ್ತು ಯಹೂದಿ ಭಾಷೆ ಮತ್ತು ರಾಜಕಾರಣದ ರೀತಿಯದೇ ಆಗಿದೆ. ಅದಕ್ಕೆ ಅದೇ ಮಾದರಿ. ಸಂಸ್ಕø ಸಂಭಾಷಣಾ ಶಿಬಿರಗಳು, ಅಂಚೆ ತೆರಳುವ ಶಿಕ್ಷಣ, ಸಂಸ್ಕø ಗ್ರಾಮಗಳಂತಹ ಮಿಥಕಗಳ ಸೃಷ್ಠಿ, ಮುಂತಾದ ಚಟುವಟಿಕೆಗಳೊಂದಿಗೆ ಸಂಸ್ಕø ಮೃತ ಭಾಷೆಯಲ್ಲ, ಅಮೃತ ಭಾಷೆ ಎನ್ನುತ್ತಾ, ಪ್ರಭುತ್ವ ಮತ್ತು ಪ್ರಭುತ್ವದ ಸಹಕಾರಿಗಳನ್ನೂ ಪ್ರಚೋದಿಸುವ, ಒಳಗೊಳ್ಳುವ ಕಾರ್ಯವನ್ನು ಮಾಡುತ್ತಿದೆ. ಭಾರತೀಯ ಸೈನ್ಸ್ ಕಾಂಗ್ರೆಸ್ ಪ್ರತೀವರ್ಷದ ಅಧಿವೇಶನದಲ್ಲಂತೂ ಒಂದು ಅನಿವಾರ್ಯ ಸಂಸ್ಕø ಗೋಷ್ಠಿಯ ಅಳವಡಿಕೆಯವರೆಗೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಇದು ಕಾರ್ಯ ನಿರ್ವಹಿಸುತ್ತಿದೆ. 2011 ಜನಗಣತಿಯಲ್ಲಂತೂ ಸಂಸ್ಕø ಭಾರತೀ ಕಡ್ಡಾಯವಾಗಿ ತನ್ನ ಅನೇಕ ಕಾರ್ಯಕರ್ತರನ್ನು ಮಾತೃಭಾಷೆ ಸಂಸ್ಕøತವೆಂದೂ ಬರೆಸಿದೆ. ರೀತಿಯಲ್ಲಿ ಆಕ್ಟಿವ್ ಆದ, ಭಾಷೆಯ ಮೇಲಿನ ಕೋಮುವಾದೀ ರಾಜಕಾರಣವನ್ನೇ ಸಂಸ್ಕø ಭಾರತೀ ಮಾಡುತ್ತಿದೆ. ಬೆಂಗಳೂರಿನ ಸಂಸ್ಕø ವಿ.ವಿ. ಕೇಂದ್ರ ಸರ್ಕಾರದ  ಹೆಚ್.ಆರ್.ಡಿ ಮಿನಿಸ್ಟ್ರಿಯಿಂದ ಕೋಟಿ ಕೋಟಿ ರೂಪಾಯಿಯ ಅನುದಾನದ ಗಳಿಕೆ ಇತ್ಯಾದಿ. ಅನೇಕ ವಿಧದ ರಾಜಕಾರಣಗಳನ್ನು ಆರೆಸ್ಸೆಸ್ಗೆ ಸಮಾನಾಂತರವಾಗಿ ನಡೆಸುತ್ತಿದೆ. ಆರೆಸ್ಸೆಸ್ ಕೂಡಾ ಬಿಜೆಪಿಯನ್ನು ರಿಮೋಟ್ ಕಂಟ್ರೋಲ್ನಿಂದÀ ನಿಯಂತ್ರಿಸುವಂತೆ ಸಂಸ್ಕø ಭಾರತಿಯ ಸಂಪೂರ್ಣ ಆಡಳಿತವನ್ನು ಸಂಪೂರ್ಣ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಇಂತಹ ಸಂಸ್ಕø ಭಾರತಿಯು ಪರ್ವ, ಸಾರ್ಥಗಳನ್ನು ಅನುವಾದಿಸಲುಭೈರಪ್ಪ ನೀಡಿರುವುದು ಬರೀ ಅನುವಾದದ ಕಾರ್ಯವಷ್ಟೇ ಅಲ್ಲ, ಬದಲು, ಸಂಸ್ಕø ಭಾರತಿ ಮತ್ತು ಸಂಘ ಪರಿವಾರದ ಮೂಲ ಕೃತಿಗೆ ಶ್ರುತಿ ನೀಡಿರುವ ಕ್ರಮವೂ ಆಗಿದೆ. ಇಲ್ಲದಿದ್ದರೆ ಸಂಪೂರ್ಣ ಸತ್ತಿರುವ ಭಾಷೆಯೊಂದರ ಬೂದಿಯನ್ನು ಒಟ್ಟು ಸೇರಿಸಿ ಫೀನಿಕ್ಸ್ ಹಕ್ಕಿಯನ್ನು ರಚಿಸುವ ಕೈಂಕರ್ಯ ರಾಷ್ಟ್ರ ಕಟ್ಟುವ, ಭಾಷೆ ಮತ್ತು ಸಾಂಸ್ಕøತಿಕ ರಾಷ್ಟ್ರೀಯವಾದದ ನೀಲಿನಕ್ಷೆಯನ್ನು ರಚಿಸಿ, ಇಲ್ಲದಿರುವ ಕಲ್ಪಿತ ಸಮುದಾಯವನ್ನು ಕಟ್ಟುವ ಪ್ರಕ್ರಿಯೆಯ ಭಾಗವೊಂದನ್ನಾಗಿಯೇ ನಾವು ಗ್ರಹಿಸಬಹುದಾಗಿದೆ. ಚರಿತ್ರೆಯೆಂದರೇನೇ ಮಾನ್ಯತೆ, ವಿಶೇಷವಾಗಿ ವರ್ತಮಾನದ ಮಾನ್ಯತೆ ಎಂದೂ ಕೂಡಾ ಆಡುಭಾಷೆಯಾಗದಿದ್ದ ಭಾಷೆಯನ್ನು ಬಿಂಬಿಸಿ, ರಂಜಿಸಿ, ಸೂತ್ರೀಕರಿಸಿ ಬಳಸುವ ಪ್ರತೀಕಕ್ಕೆ, ಅಂತಹ ಉದ್ಯಮಕ್ಕೆ ಭೈರಪ್ಪ ಅತ್ಯಂತ ಪ್ರಜ್ಞಾಪೂರ್ವಕವಾಗಿಯೇ ಇಳಿದಿರುವುದನ್ನೂ ನಾವಿಲ್ಲಿ ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಅಂತಹ ಮಹಾನ್ ಕೈಂಕರ್ಯಕ್ಕೆ ಇಲ್ಲಿ ಭೈರಪ್ಪ ಕಿರುಕಾಣಿಕೆಯನ್ನು ನೀಡುತ್ತಿದ್ದಾರಷ್ಟೇ. ಸಂಸ್ಕø ಭಾಷೆಯ ಬಗೆಗೆ ಭೈರಪ್ಪನವರ ನಿಲುವುಗಳೂ ಮತ್ತು ಸಂಸ್ಕø ಭಾರತೀ, ಸಂಘ ಪರಿವಾರದ ನಿಲುವುಗಳಲ್ಲಿ ಯಾವುದೇ ಭೇದ ಇಲ್ಲ, ಅಸ್ಖಲಿತತೆ ಇದೆ. ನೆಲೆಯಿಂದಲೇ ಒಂದು ಹೈಪರ್ ನ್ಯಾಶಲಿಸಂನ ಚರ್ಚೆ ಮತ್ತು ರಾಜಕಾರಣಕ್ಕೆ ಪೂರಕವಾಗಿ ಬಹುಶ: ಭೈರಪ್ಪ ಅತ್ಯಂತ ಪ್ರಜ್ಞಾಪೂರಕವಾಗಿ ಸಹಕರಿಸಲೆಂಬಂತೆ ಭೈರಪ್ಪನವರ ಕಾದಂಬರಿಗಳು ಸಂಸ್ಕø ಭಾಷೆಗೆ ಅನುವಾದಿತಗೊಂಡಿರುವಂತದ್ದು. ನೆಲೆಯಲ್ಲಿ ಅನುವಾದ ಅತ್ಯಂತ ಜಟಿಲ ಮತ್ತು ರಾಜಕಾರಣದ ಪ್ರಶ್ನೆಯಾಗಿ ಕೂಡಾ ಕಾಣಿಸುತ್ತದೆ. ಭೈರಪ್ಪನವರ ಅನುವಾದಗಳ ಮೂಲಕ ನಿರ್ಮಾಣಗೊಳ್ಳುವ ಸಂಸ್ಕøತದ ಓದುಗರ ವರ್ಗ, ಅದರ ವಿನ್ಯಾಸ, ಅದರ ಆಗ್ರಹಗಳು, ಬೇಡಿಕೆಗಳು, ತಾತ್ವಿಕತೆ ಮತ್ತು ಇನ್ನೂ ಅನೇಕ ಸಂಗತಿಯನ್ನು ಪೂರೈಸುವ ಅಗತ್ಯದ ಆಹಾರದ ರಾಜಕಾರಣದಂತೆ ಇದು ಕಾಣುತ್ತದೆ.

       ಭೈರಪ್ಪನವರ ಸಾಹಿತ್ಯ ಕೋಮುವಾದಿ ಚರ್ಚೆಯನ್ನು ಹೊಂದಿದೆ ಮತ್ತು ಕೋಮುವಾದ ರಾಜಕಾರಣವೇ ಅವರ ಕೃತಿಗಳ ಗರ್ಭವೆನ್ನಲು ಅತ್ಯಂತ ಮುಖ್ಯವಾದ ಕಾರಣ ಅವರ ಕಾದಂಬರಿಗಳ ಜೀವ ವಿರೋಧ. ಧರ್ಮಶ್ರೀಯಿಂದ ಸಂಗತಿಯ ಚರ್ಚೆ ಆರಂಭವಾಗುತ್ತದೆ. ಧರ್ಮಶ್ರೀಯಲ್ಲಿ ಬರುವ ಇಡೀ ಧರ್ಮದ ಚರ್ಚೆಯಿಂದ ಹಿಡಿದು, ಭೈರಪ್ಪನವರ ಕಾದಂಬರಿಗಳ ಕಥನ, ವಸ್ತು, ನಿಲುವುಗಳು ಜೀವ ವಿರೋಧವನ್ನೇ ಮುಖ್ಯ ಕಾಳಜಿಯನ್ನಾಗಿಸಿವೆ. ಅಸಮಾನತೆ, ಜಾತಿಯೆನ್ನುವ ಸಾಮಾಜಿಕ ರಚನೆಯ ಪುರಸ್ಕಾರ, ಸೂಕ್ಷ್ಮ-ಸ್ಥೂಲವಾಗಿ ಜಾತಿಯನ್ನು ಪ್ರತಿಪಾದಿಸುವುದು, ಬ್ರಾಹ್ಮಣೀಯ ಕ್ರಮ ಆಚರಣೆಗಳ ಶ್ರೇಷ್ಠತೆ, ಜಾತಿಯನ್ನು ಮೀರಿದ್ದೇನೆ ಎನ್ನುವ ಆಷಾಢಭೂತಿತನ, ಹಿಂದೂಧರ್ಮವೆಂಬ, ಸಾಮ್ರಾಜ್ಯಶಾಹೀ ನಿರೂಪಿಸಿದ ಓರಿಯಂಟಲ್ ಧರ್ಮವನ್ನು ಹೊರತುಪಡಿಸಿ ಉಳಿದ ಸಂಪ್ರದಾಯ, ಮತಗಳಾದ ಬೌದ್ಧ, ಜೈನ, ಇಸ್ಲಾಂ, ಕ್ರಿಶ್ಚಿಯಾನಿಟಿಯ ನಿರಾಕರಣೆ ಇವುಗಳ ಕೆಲವು ಲಕ್ಷಣಗಳು. ಅತ್ಯಂತ ಸಮಗ್ರವಾಗಿ ಬಲಪಂಥದ ರಾಜಕಾರಣ, ಸಾಂಸ್ಕøತಿಕ ರಾಷ್ಟ್ರವಾದದ ಪುರಸ್ಕಾರ ಕೂಡಾ ಜೀವವಿರೋಧವನ್ನೇ ಸಮರ್ಥಿಸುತ್ತದೆ. ಬಲಪಂಥ ಬಳಸುವ, ಸಾಂಸ್ಕøತಿಕವಾಗಿ ಇನ್ಕಾರ್ಪರೇಟ್ ಮಾಡುವಗೋವಿನ ಪ್ರತೀಕವಂತೂ ಭೈರಪ್ಪನವರ ತಾತ್ವಿಕತೆಯ ಒಂದು ಪ್ರಮುಖವಾದ ಭಾಗವೇ ಆಗಿದೆ. ತಬ್ಬಲಿಯು ನೀನಾದೆ ಮಗನೆ ಕೃತಿಯು ಬಹುಶ: ರೀತಿಯ ಚರ್ಚೆಯನ್ನು ಮಾಡುತ್ತದೆ. ಗೋವಿನ ಸುತ್ತ ಹೆಣೆದಿರುವ ಒಂದು ಪ್ರಬಲ ನೆಲೆಯ ಸಾಂಸ್ಕøತಿಕ ರಾಜಕಾರಣವನ್ನು ಕೃತಿ ನಮ್ಮ ಮುಂದಿಡುತ್ತದೆ. ಕನ್ನಡದ ಅನುಭವವಾದ ಗೋವಿನ ಕಥೆಯ ತಾತ್ವಿಕತೆಗಿಂತ ಭೀಕರವಾದ ಚರ್ಚೆ ತಬ್ಬಲಿ ನೀನಾದೆ ಕಾದಂಬರಿಂiÀiಲ್ಲಿದೆ. ಗೋವಿನ ಜತೆಜತೆಯಲ್ಲೇ ಇದು ಹಿಂದುತ್ವ ರಾಜಕಾರಣ ಅಸಹ್ಯಪಡುವ, ಒಪ್ಪದ ಕಾಂಗ್ರೆಸ್ ರಾಜಕಾರಣವನ್ನೂ ಕೂಡಾ ನಿರಾಕರಿಸುತ್ತದೆ, ಟೀಕಿಸುತ್ತದೆ. ‘ಗೋವಿನ ಹಾಡು ಅನುಭವದ ಪ್ಯಾಸಿವ್ ಆದ ನೆಲೆಯಲ್ಲಿ ಒದಗುವ ಆಹಾರದ ಪ್ರಶ್ನೆಗಳನ್ನು ಮೀರಿ, ಅಹಿಂಸೆಯ ತಾತ್ವಿಕತೆಯನ್ನು ದಾಟಿ ಸಪಾಟಾದ ತೀರುಗಳನ್ನೂ, ಬಲಪಂಥೀಯ ರಾಜಕಾರಣದ ಸ್ಪೂರ್ತಿ ತೀರ್ಪುಗಳನ್ನು ಕೃತಿಯು ನಮಗೊದಗಿಸುತ್ತದೆ. ಭೈರಪ್ಪನವರ ಜೀವವಿರೋಧ ಪ್ರಮುಖವಾಗಿ ಮೂರು ನೆಲೆಯಲ್ಲಿ ಸಾಗುತ್ತದೆ. ಒಂದು ಜಾತಿ ರಚನೆಯ ಮಾನ್ಯತೆ, ಅದು ಸೃಷ್ಟಿಸಿದ ಒಂದು ಅಸಮಾನತೆಯ, ಮಾನವನ ಘನತೆಯ ವಿರೋಧವಾದಂತಹ ತತ್ವದ ಅಂಗೀಕಾರ, ಎರಡು:ಇಸ್ಲಾಂ, ಕ್ರೈಸ್ತ ಮತ್ತು ಬೌದ್ಧೇತರ ಮತಧರ್ಮಗಳ ನಿರಾಕರಣೆ, ಮೂರು: ಲಿಂಗÀ ವಿವಕ್ಷತೆ, ಸ್ತ್ರೀ ಸಂವೇದನೆ ಮತ್ತು ಅನುಭವವನ್ನು ದ್ವಿತೀಯ ದರ್ಜೆಯ ಅನುಭವವೆಂದು ಜರಿಯುವ ಹೈಪರ್ ಮಸ್ಕುಲಿನಿಟಿ ಮತ್ತು ಪೇಟ್ರಿಯಾರ್ಕಲ್ ಮೌಲ್ಯಗಳ ಬಗೆಗಿನ ಪ್ರಖರ ಒಲವು. ಎಲ್ಲಿ ಕೂಡಾ ಎಸ್.ಎಲ್. ಭೈರಪ್ಪ ಮೇಲಿನ ಮೂರು ಸೂತ್ರಗಳನ್ನು ಮೀರದೆ ಅತ್ಯಂತ ಖಡಕ್ಕಾಗಿ ವಸಾಹತುಶಾಹೀ ರೂಪಿಸಿದ ವ್ಯಕ್ತಿಯಾಗಿಯೇ ಕಾಣಿಸುತ್ತಾರೆ. ಸ್ತ್ರೀ ಸಂವೇದನೆ, ಲಿಂಗ ವಿವಕ್ಷೆಯ ರಾಜಕಾರಣದ ಸಂದರ್ಭದಲ್ಲಿ ಮತ್ತು ಸಾಂಸ್ಕøತಿಕ ರಾಷ್ಟ್ರವಾದದ ಸಂದರ್ಭದಲ್ಲಿ ವಸಾಹತುಶಾಹೀರೂಪಣೆಯ ಜತೆಗೆ ಭಾರತೀಯ ಎನ್ನಬಹುದಾದ ಪಾನ್ ಇಂಡಿಯನ್ ನೆಲೆಯ ಪುರುಷ ಪ್ರಧಾನಿಕೆಯೂ ಜತೆಗೂಡುತ್ತದೆ. ಭೈರಪ್ಪನವರ ವಂಶವೃಕ್ಷ ಕೃತಿಯು 1970 ದಶಕದಲ್ಲಿ ರಚಿಸಲ್ಪಟ್ಟು, ಅದರ ಮೇಲಿನ ವಿಮರ್ಶೆಗಳು ಹೊತ್ತಿಗಾಗಲೇ ಭೈರಪ್ಪನವರ ನಿಲುವುಗಳನ್ನು ಗುರುತಿಸಿದರೂ ಕೂಡಾ ಸಂದರ್ಭದಲ್ಲಿ ಅನಂತಮೂರ್ತಿ, ವಂಶವೃಕ್ಷವನ್ನು ಒಳಗೊಂಡು, ಭೈರಪ್ಪನವರ ಒಟ್ಟಾರೆ ಕೃತಿ ಮತ್ತು ಆಶಯಗಳ ಉದ್ದೇಶ, “ರಂಜಿಸಿ, ವಂಚಿಸುವ ಕಲೆ ಎಂದೂ, ಅದೇ ರೀತಿಯ ಅಭಿಪ್ರಾಯವನ್ನು ಜಿ.ಎಸ್. ಅಮೂರ ಮತ್ತು ಗಿರಡ್ಡಿ ಕೂಡಾ ವ್ಯಕ್ತಪಡಿಸಿದ್ದರು. ಅನಂತಮೂರ್ತಿ ಇನ್ನೂ ಮುಂದೆ ಹೋಗಿ ಭೈರಪ್ಪನವರನ್ನು ಡಿಬೇಟರ್ ಎಂದೂ ಕರೆದರು. ಭೈರಪ್ಪ ಎಲ್ಲಿ ಕೂಡಾ ಮೀರುವುದಿಲ್ಲ. ಸಂಪ್ರದಾಯವನ್ನು, ಅದರ ಮೇಲಿನ ಅನುಭವವನ್ನು, ಸಾಮಾಜಿಕ ಚೌಕಟ್ಟು ಮತ್ತು ಅನುಭಾವವನ್ನು ಅವರು ಮೀರುವಂತೆ ನಟಿಸಿ ಪುನ: ಸುರಕ್ಷೆಯ ಗಡಿಯೊಳಗೆ, ಸಾಮಾಜಿಕ ಸ್ಥಿರೀಕೃತ ವ್ಯವಸ್ಥೆಯೊಂದಿಗೇನೇ ವಾಸಮಾಡುತ್ತಾರೆ. ಜಾತಿ ಪ್ರಶ್ನೆಯನ್ನು ಭೈರಪ್ಪನವರು ಹೇಳುವ ಹಾಗೆ, ಗಂಭೀರ ಚರ್ಚೆಯನ್ನು ನಡೆಸಿದೆ ಎನ್ನುವ ಕೃತಿಯಲ್ಲೂ ಭೈರಪ್ಪ ಜಾತಿಯ ಗಡಿಯನ್ನು ದಾಟುವುದೇ ಇಲ್ಲ. ವಂಶವೃಕ್ಷದಲ್ಲೂ ಕೂಡಾ ಆಸೆ, ಆಶಯ, ವಿಮೋಚನೆ ಇತ್ಯಾದಿಗಳನ್ನು ಗರಿಗೆದರಿಸಿಯೂ ಕಾತ್ಯಾಯಿನಿಯನ್ನು ಹಾಗೆಯೇ ಉಳಿಸುತ್ತಾರೆ. ಬಹುಶ: ಭೈರಪ್ಪನವರ ನಿಲುಮೆಯೂ ಅದೇ ಆಗಿತ್ತು. ಜಾತಿ ಒಂದು ಸಾಮಾಜಿಕ ರಚನೆ ಅನ್ನುವುದು ಬಹುಶ: ಗಾಂಧಿಯ ನಂಬುಗೆಯ ರೀತಿಯದಾಗಿರಲಿಲ್ಲ. ಅದು ಸತತ ಪ್ರಯೋಗಶೀಲ ಮತ್ತು ಅನೇಕ ಸಾಂದರ್ಭಿಕ ಅನುಭವಗಳ ಮೂಸೆಯಿಂದ ಕೂಡಾ ಮೂಡಿದ್ದಲ್ಲ, ಬದಲು ಗಾಂಧಿಯಿಂದ ಸಂಪೂರ್ಣ ದೂರ ಸರಿದಂತÀ, ಅದರ ವಿರೋಧವೆಂಬಂತೆ ಕಂಡುಬರುವ ನೆಲೆಯಿಂದ. 1970 ದಶಕದಲ್ಲಿ ಜತೆಜತೆಯಾಗಿ ಬಂದ ಅನಂತಮೂರ್ತಿಯವರಸಂಸ್ಕಾg’À ಮತ್ತು ಭೈರಪ್ಪನವರವಂಶವೃಕ್ಷ ನಡುವಿನ ಸಂವಾದ, ತಾತ್ವಿಕತೆಯ ಓಟದಲ್ಲಿ ಭೈರಪ್ಪ ಸೋಲುವುದು ಕೂಡಾ ಇದೇ ನೆಲೆಯಿಂದ. ಅನಂತಮೂರ್ತಿ ತಮ್ಮ ಎಲ್ಲಾ ಕೃತಿಗಳಲ್ಲಿ ರೀತಿಯ ಮೀರುವ ಪ್ರಯತ್ನ ಮಾಡುತ್ತಾರೆ, ಬದಲು ಭೈರಪ್ಪ ರಂಜಿಸುತ್ತಾರೆ. ವಿಚಾರದ ಕಿಚ್ಚನ್ನು ಹಚ್ಚುವುದಕ್ಕೇನೇ ಭೈರಪ್ಪ ಅನುಮಾನಿಸುತ್ತಾರೆ. ಭೈರಪ್ಪ ಒಂದು ನೆಲೆಯಲ್ಲಿ ಪೂರ್ವ ಗ್ರಹೀತರು ಕೂಡಾ. ಅವರೇಕೆ ಬರೆಯುತ್ತಾರೆ? ಎನ್ನುವಲ್ಲಿನ ಸಕಲ ನಿರ್ದಿಷ್ಠತೆಗಳನ್ನು ಭೈರಪ್ಪ ಮೊದಲೇ ಆಟದ ನಿಯಮಗಳ ರೀತಿಯಲ್ಲಿ ಸಾಗುವ ಕಾರಣ ಮುಂದು ಮೈಮುರಿದು ಡಯಲೆಕ್ಟಿಕ್ ನೆಲೆಯ ಸಂವಾಧ ಮತ್ತು ಅನುಭವದ ಅಕ್ಷರೀಕರಣವನ್ನು ಸಾಧಿಸಲು ಸಾಧ್ಯವೇ ಆಗುವುದಿಲ್ಲ.

       ಭೈರಪ್ಪನವರ ಜೀವವಿರೋಧದ ತಾತ್ವಿಕತೆ ಒಂದು ಇಸ್ಲಾಂ ವಿರುದ್ಧ, ಇನ್ನೊಂದು ಬೌದ್ಧಧರ್ಮದ ವಿರುದ್ಧ ಸಾಬೀತಾಗಿದ್ದು ಅನುಕ್ರಮವಾಗಿಆವರಣ ಮತ್ತುಸಾರ್ಥ ಕಾದಂಬರಿಗಳ ಮೂಲಕ. ಸಾರ್ಥದಲ್ಲಿ ಭೈರಪ್ಪ ನೇರವಾಗಿ ತಾತ್ವಿಕ ಮುಖಾಮುಖಿಯಾದದ್ದು ಬೌದ್ಧಧರ್ಮವನ್ನು ಇಲ್ಲಿ ಯಾವುದೇ ಧರ್ಮ ಅಥವಾ ಮತಗಳು ಮುಖ್ಯವಾಗುವುದಾದರೆ ಎಲ್ಲವೂ ಮುಖ್ಯವಾಗಬೇಕು, ಇಲ್ಲದಿದ್ದರೆ ಎಲ್ಲವೂ ಅಮುಖ್ಯವೂ ಆಗಬೇಕು. ಪ್ರತೀ ಧರ್ಮಗಳ ಬಗೆಗಿನ ಪರಿಕಲ್ಪನೆ ಒಂದು ನೆಲೆಯಲ್ಲಿ ರಮ್ಯವೇ ಆಗಿರುತ್ತದೆ. ಸೂಫಿ, ಅನುಭಾವ, ಮಿಸ್ಟಿಸಿಸಂ ಮುಂತಾದ ಸಂಗತಿಗಳು ಬರೀ ಪರಿಭಾಷೇ ಆಗಿರುತ್ತದೆ. ಯಾವುದೇ ಒಂದು ಧರ್ಮದ ಅನುಭವಜನ್ಯ ಅನುಭವ ಹೇಗಿದೆ? ಎನ್ನುವುದೇ ಮುಖ್ಯವಾಗುತ್ತದೆ. ಕನಿಷ್ಠ ಮಟ್ಟಿಗೆ ಒಂದು ಧರ್ಮ ಅಥವಾ ಮತ್ತು ಜೀವ ಪರವಾಗಿದೆ ಎಂದರೆ ಬಹುಶ: ಅದು ಪರಮೋಚ್ಚ ಧರ್ಮ. ಅದು ಸಾಂಸ್ಥಿಕವಾದ ಧರ್ಮವೇ ಆಗಬೇಕೆಂದಿಲ್ಲ, ಹೃದಯವೂ ಕೂಡಾ ಧರ್ಮವಾಗಬಲ್ಲದು, ಹೃದಯಧರ್ಮವೂ ಮುಖ್ಯವಾಗಬಲ್ಲದು. ಆದರೆ ಚರಿತ್ರೆ ವಿದ್ಯಾರ್ಥಿಯಾಗಿ ನಾನು ಗಮನಿಸುವ ಹಾಗೆ ಜಾಗತಿಕವಾದ ಎಲ್ಲಾ ಸಾಂಸ್ಥಿಕ ಧರ್ಮಗಳೂ ಕೂಡಾ ಸ್ವಲ್ಪಮಟ್ಟಿನ ರಮ್ಯತೆಯನ್ನು ಹೊಂದಿದ್ದಾಗ್ಯೂ ಕೂಡಾ ಕೆಲವು ಧರ್ಮಗಳಲ್ಲಿ ಇದರ ಪ್ರಮಾಣ ತೀರಾ. ಹಿಂದೂಧರ್ಮವೆಂಬ ಅನುಭವದಲ್ಲಿನ ಜಾತಿ, ವಿಧಿನಿಷೇಧ, ಮಾನವೀಯ ಘನತೆಯ ವಿರೋಧವಿದ್ದಾಗ್ಯೂ, ಭೈರಪ್ಪ ಅದರ ಫಲವಾಗಿ ವಾದಿಸುತ್ತಾ ಸಾರ್ಥದ ಕೊನೆಯಲ್ಲಿಹಿಂದುತ್ವ ನಿಲುವಿಗೆ ಬಂದು ನಿಲ್ಲುತ್ತಾರೆ. ಕಾದಂಬರಿಯಲ್ಲಿ ಕೆಲವು ಕಡೆ ಹಿಂದೂ ಪುನರುಥ್ಥಾನವಾದಿಯಾಗಿ ಕಾಣಿಸುತ್ತಾ, ಸುಮಾರು 10-12ನೆಯ ಕಥಾ ಸಂದರ್ಭದಲ್ಲಿ ದೇವಲ ಸ್ಮøತಿಯನ್ನು ಉಲ್ಲೇಖಿಸುತ್ತಾ, 19ನೆಯ ಶತಕದ ಆರ್ಯ ಸಮಾಜ್ ನಿರೂಪಿತ ಶುದ್ಧಿ ಚಳುವಳಿಯನ್ನು ನೆನಪಿಸುತ್ತಾ, ಅದು ನಂತರ ಮತ್ತು ಈಗ ನೆರೆದಿರುವಘರ್ ವಾಪಸಿ ತಾತ್ವಿಕ ಚರ್ಚೆಯವರೆಗೂ ಬಂದು ಅದನ್ನೇ ವಕ್ತಾರಿಕೆಯಿಂದ ಕಥಿಸುತ್ತಾರೆ. ಇನ್ನು ಸಾರ್ಥದ ತಾತ್ವಿಕ ಚರ್ಚೆ ವಿಶೇಷವಾಗಿ ಬೌದ್ಧಧರ್ಮವನ್ನು ಸೋಲಿಸಲೋಸುಗವೆಂಬಂತೆಯೇ ಕಾಣಿಸುತ್ತದೆ.

       ಆವರಣ ಬಹುಶ: ಭೈರಪ್ಪನವರ ಕೃತಿಗಳ ಕೋಮುವಾದೀ ರಾಜಕಾರಣ ತಾರಕಕ್ಕೇರಿದ ನಿದರ್ಶನವೇ ಆಗಿದೆ. ಇಲ್ಲಿ ಬಲಪಂಥ ಅಥವಾ ಹಿಂದುತ್ವ ರಾಜಕಾರಣ ತನ್ನ ವಾಗ್ವಾದವಾದ ಸಾಂಸ್ಕøತಿಕ ರಾಷ್ಟ್ರವಾದವನ್ನು ಸಮರ್ಥಿಸಲು ಬಳಸುವ ರಾಷ್ಟ್ರೀಯವಾದೀ ಚರಿತ್ರೆ, ವಿಶೇಷವಾಗಿ ರಾಷ್ಟ್ರೀಯವಾದೀ ಚರಿತ್ರೆಯ ಖಟ್ಟರ್ ಪಂಥೀತನವನ್ನು, ಆವರಣ ಕೃತಿ, ರಾಷ್ಟ್ರೀಯವಾದಿ ಚರಿತ್ರೆ ಮತ್ತು ಆವರಣವನ್ನು ಬಿಟ್ಟು ಚಲಿಸುವುದೇ ಇಲ್ಲ. ಅತ್ಯಂತ ಪ್ರಜ್ಞಾಪೂರ್ವಕವಾಗಿ ಅದು ತನ್ನ ವಾದಗಳನ್ನು ಮಂಡಿಸುತ್ತದೆ. ಆವರಣ ಎನ್ನುವ ಶೀರ್ಷಿಕೆಯನ್ನೂ ಕೂಡಾ ಇದೇ ಅರ್ಥದಲ್ಲಿ ನಾವು ಅರ್ಥೈಸಿಕೊಳ್ಳಬಹುದು. ಇಡೀ ರಾಷ್ಟ್ರೀಯವಾದೀ ಚರಿತ್ರೆಯ ತರ್ಕ ಕೂಡಾ ವರ್ತಮಾನದ ಯಾವುದೋ ಒಂದು ಅಗತ್ಯವನ್ನು ಪೂರೈಸಿಕೊಳ್ಳುವುದು. ಆವರಣ ಕೃತಿಯು ಅತ್ಯಂತ ಸ್ಪಷ್ಟವಾದ ಎಲ್ಲಾ ವಿನ್ಯಾಸಗಳನ್ನೂ ಹೊಂದಿದೆ. ಇಲ್ಲಿ ಭೈರಪ್ಪ ಚರಿತ್ರೆಯ ಅಧ್ಯಯನದ ಉಳಿದ ನಿರೂಪಣೆಗಳಾದ ಎಡಪಂಥೀಯ ಬರಹದ ಕ್ರಮ, ಮಾನವಶಾಸ್ತ್ರೀಯ ತರ್ಕಗಳ ನಿರೂಪಣೆ, ಸೈಕೋಅನಾಲಿಸಿಸ್, ಬ್ರೌದೇಲಿಯನ್ ಪರಂಪರೆಯ ವಾದಗಳು, ಫೆಮಿನಿಸ್ಟ್, ಪೋಸ್ಟ್ ಮಾಡರ್ನ್ ಯೋಚನಾಕ್ರಮಗಳನ್ನು ಮನ್ನಿಸುವುದೇ ಇಲ್ಲ. ರಾಷ್ಟ್ರೀಯವಾದೀ ನಿರೂಪಣೆಯಲ್ಲೂ ಕೂಡಾ ತೀರಾ ಕಮ್ಯುನಲ್ ಆದ ಮತ್ತು ನೇರವಾಗಿ ಬ್ರಿಟಿಷ್-ಇಂಪೀರಿಯಲ್ ಚರಿತ್ರೆ ಬರವಣಿಗೆಗಳ ರೀತಿಯ ಪೂರ್ವಾಗ್ರಹ ಹಾಗೂ ರಾಜಕಾರಣದಿಂದ ವ್ಯಕ್ತಪಡಿಸಿದ ನೆಲೆಯಲ್ಲೇ ಅಭಿವ್ಯಕ್ತಿಸುತ್ತಾ ಅವುಗಳು ನೀಡಿರುವ ಒಂದನೇ ತಲೆಮಾರಿನ ಆಧಾರ, ಆಧಾರಗ್ರಂಥಗಳನ್ನಷ್ಟೇ ಬಳಸುತ್ತಾರೆ. ಅದುವರೆಗೂ ಭೈರಪ್ಪನವರು ವಿಗ್ರಹಭಂಜನೆಗಾಗಿ ಕಾದು, ಒಮ್ಮೆಲೆ ಆಸ್ಫೋಟಿಸಿಕೊಂಡ ಕ್ರಮದ ಕಮ್ಯುನಲ್ವಾಂತಿಯ ಸ್ವರೂಪದಲ್ಲೂ ಇದನ್ನು ಕಾಣಬಹುದಾಗಿದೆ.

       ಎಲ್.ಎಲ್. ಭೈರಪ್ಪನವರು ಸಾಹಿತ್ಯವನ್ನು ಹೊರತುಪಡಿಸಿ ನೇರವಾಗಿ ಕೋಮುವಾದೀ ರಾಜಕಾರಣ, ಹಿಂದುತ್ವ-ಭಾ..ಪಾದ ರಾಜಕಾರಣದೊಂದಿಗೆ ಗುರುತಿಸಿಕೊಂಡ ಕ್ರಮ ಅವರ ಪ್ರಾಯೋಗಿಕ ನಡೆ ಮತ್ತು ನೆಲೆಯನ್ನೂ ನಮಗೆ ಮನವರಿಕೆ ಮಾಡಿಕೊಡುತ್ತದೆ. ಹಿಂದುತ್ವ ರಾಜಕಾರಣದ ಪ್ರಯೋಗ ಶಾಲೆಯಲ್ಲಿ ಭೈರಪ್ಪನವರು ನೇರ ಭಾಗಾಳುವಾದ ಪ್ರಸಂಗದ ಸಿಂಧತ್ವವನ್ನು ನಮಗೆ ಮನಗಾಣಿಸುತ್ತದೆ. ಹಿಂದುತ್ವ ಚಿಂತನ ಶಾಲೆಯ ಪ್ರಮುಖ ಕಾಳಜಿಗಳಾದ ಬಾಬಾ ಬುಡಾನ್ ಗಇರಿ, ಟಿಪ್ಪೂ ಮತಾಂಧತೆ, ಟಿಪ್ಪೂ ವಿ.ವಿ. ವಿವಾದ ಮುಂತಾದ ವಿಚಾರಗಳ ಸಂದರ್ಭ ಚರ್ಚೆಯಲ್ಲಿ ಭೈರಪ್ಪ ಖುದ್ದಾಗಿ ಅಭಿಪ್ರಾಯ ಪ್ರಕಟಿಸುವುದೂ ಕೂಡಾ ಅವರ ಕಮ್ಯುನಲ್ ಪಾಲಿಟಿಕ್ಸ್ ಪ್ರಮುಖ ಕಾಳಜಿಯಾಗಿಯೂ ಕಾಣಿಸುತ್ತದೆ. ಸಂಘ ಪರಿವಾರದ ಶಿಬಿರಗಳಲ್ಲಿ ಬೌದ್ಧಿಕವರ್ಗವನ್ನು ನಡೆಸಿಕೊಡುವುದು ಮತ್ತು ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ನಡೆಸುವ ದೆಹಲಿ ಚಲೋ ಮತ್ತು ಸಹಿ ಸಂಗ್ರಹ ಅಭಿಯಾನಗಳು ಅವರ ಮತ್ತು ತಾತ್ವಿಕತೆಯ ಇನ್ನೂ ಹಲವು ಅವತಾರಗಳಷ್ಟೇ.

***

                                        

 

 

 

 

 

 

 

                          

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ