ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಮಾಜವಾದ, ಪ್ರಜಾಸತ್ತೆ ಮತ್ತು ಅಂಬೇಡ್ಕರ್

ಸಮಾಜವಾದ , ಪ್ರಜಾಸತ್ತೆ ಮತ್ತು ಅಂಬೇಡ್ಕರ್ ಸುಮಾರು 1950 ಜನವರಿ 26 ದಾದಾಸಾಹೇಬ್ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ವಿದಾಯ ಕಾರ್ಯಕ್ರಮದಲ್ಲಿ ಅವರ ಆಲೋಚನೆಯ ಪ್ರಜಾಸತ್ತ್ತೆಯ ಬಗೆಗೆ ಸುಮಾರು ಒಂದು ತಾಸು ಭಾಷಣ ಮಾಡಿದ್ದರು . ಅಂಬೇಡ್ಕರ್ ಮಾಡಿದ ಈ ಭಾಷಣ ಮತ್ತು ವಿಚಾರ ಕೊನೆಗೆ ಮತಕ್ಕೆ ಹಾಕಲ್ಪಟ್ಟಿತು . ಬಾಬಾಸಾಹೇಬ್ ಕೇವಲ 5% ಮತಗಳನ್ನಷ್ಟೇ ಪಡೆದು ಹಿನ್ನಡೆ ಅನುಭವಿಸಿದ್ದರು . ಬಹುಶ : ಆಧುನಿಕ ಭಾರತದ ಚರಿತ್ರೆಯ ಅತ್ಯಂತ ದುರಂತ , ದಾರುಣ ಮತ್ತು ದು : ಖದ ದಿನವೆಂದೇ ಆ ದಿನವನ್ನು ಕರೆಯಬಹುದು . ಬಾಬಾಸಾಹೇಬ್ ತಮ್ಮ ಪ್ರಜಾಸತ್ತೆಯ ಸ್ವರೂಪವನ್ನು ಸಮಾಜವಾದೀ ನೆಲೆಗಳಲ್ಲಿ ಗುರುತಿಸಿದ್ದರು . ಅಂತೆಯೇ ಅದನ್ನು ಸೋಶಿಯಲಿಸ್ಟಿಕ್ ಡೆಮಾಕ್ರಸಿ ಎಂದೂ ಕೂಡಾ ಕರೆದಿದ್ದರು . ಅಂಬೇಡ್ಕರ್ ಆಲೋಚನೆಯು , ಒಳ್ಳೆಯ ಸಮಾಜದ ಪರಿಕಲ್ಪನೆಗೆ ಪೂರಕವಾಗಿತ್ತು . ಬಹುಶ : ಸದ್ಯದ ಕಾಲಮಾನದಲ್ಲಂತೂ ಅಂಬೇಡ್ಕರ್ ಅವರ ಈ ಆಲೋಚನೆಯನ್ನು ಪುನ : ಚರ್ಚಿಸಿ ಅದರ ಜಾರಿಗಾಗಿಯೂ ಆಗ್ರಹಿಸಬೇಕಾಗಿದೆ . ಭಾರತದಲ್ಲಿ ಡೆಮಾಕ್ರಸಿ ಅನ್ನುವುದು ಇದೆಯೇ ? ಇದೆಯೆಂದರೆ ಯಾರಿಗಿದೆ ಎನ್ನುವ ಅರುಂಧತಿ ರಾಯ್ ಅವರ ಪ್ರಶ್ನೆ ಮತ್ತು ಅದರ ತಾತ್ವಿಕತೆಯ ಹಿನ್ನೆಲೆಯಲ್ಲಿಯೇ ನಾವು ಅಂಬೇಡ್ಕರ್ ಯೋಚನೆಯ ಸಮಾಜವಾದವನ್ನು ಚರ್ಚೆಗೆ ತರಬೇಕಾಗಿದೆ . ಅಂಬೇಡ್ಕರ್ ಅವರ ಸಮಾಜವ...