ಪೋಸ್ಟ್‌ಗಳು

ಆಗಸ್ಟ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕುಂದಾಪುರ ಕನ್ನಡವನ್ನು ಅನುಲಕ್ಶಿಸಿ

‘ ಕುಂದಾಪುರ ಕನ್ನಡ ’ , ಶಬ್ದ ಒಂತರಾ ರಮ್ಯ , ಅದ್ಭುತ ರಮ್ಯ . ಅದು ಒಂದು ಸಂಕೀರ್ಣ ಸಮಸ್ಯೆ , ವಿದ್ಯಮಾನವೂ ಹೌದು . ಸಂಕೀರ್ಣ ಎಂದರೆ ಎರಡು ಸಂಗತಿಗಳು ಅದನ್ನು ರೂಪಿಸಿರುವುದರಿಂದ ಒಂದು ; ಕುಂದಾಪ್ರ ಕನ್ನಡ ಎಂದಾಗ ಅದು ಹುಟ್ಟಿಸುವ , ಎದುರಿಸುವ ಪ್ರಶ್ನೆಗಳಿಂದ , ಎರಡು ; ತಥಾಕಥಿತ ಬಳಕೆಯಾಗಿ ಅದು ಎದುರಿಸುವ ಸಂದೇಹಗಳಿಂದ . ಅದು ಭಾಷೆಯ ರಚನೀಯತೆಯನ್ನು ಭಾಷಿಕ ನೆಲೆಯಲ್ಲಿ ಅಭಿವ್ಯಕ್ತಿಗೊಳಿಸುತ್ತದೆ ಎನ್ನುವುದಕ್ಕಿಂತಲೂ ಒಂದು ರಾಜಕೀಯ , ರಾಜಕೀಯ ಗಡಿಯನ್ನು ಧ್ವನಿಸುವ ಅಭಿವ್ಯಕ್ತಿಯಾಗಿಯೂ ಕಾಣಿಸಿಕೊಳ್ಳುವ ಕಾರಣದಿಂದ ಕೂಡಾ ಜಿಜ್ಞಾಸೆ ಮತ್ತು ಒಂದು ರೀತಿಯ ಸಂವಾದಕ್ಕೆ ತೆರೆದುಕೊಳ್ಳುತ್ತದೆ ಎಂಬ ಕಾರಣದಿಂದ ಈ ಭಾಷೆಯ ಬಗೆಗಿನ ಚರ್ಚೆಯೂ ಕೂಡಾ ತುಂಬಾ ಮುಖ್ಯವಾಗುತ್ತದೆ . ಅತ್ಯಂತ ಪ್ರಾಚೀನ ಭಾಷೆಯಾಗಿರುವ ಈ ಕುಂದಾಪ್ರ ಕನ್ನಡ ಅಖಿಲ ಕರ್ನಾಟಕ ( ಪಾನ್ ಕರ್ನಾಟಕನ್ ) ಮತ್ತು ಭಾಷಾಶಾಸ್ತ್ರದ ನೆಲೆಯಲ್ಲಿ ಉಪಭಾಷೆ ಎನ್ನುವ ಉಪಾಧಿಯಿಂದ ಹೇರಲ್ಪಟ್ಟಿರುವುದೂ ಕೂಡಾ ಸೇರಿದಂತೆ ಹೊಸದಾದ ವಿವೇಚನೆಯ ಹೊಸದಾರಿಗಳನ್ನೂ ಕೂಡಾ ಆಗ್ರಹಿಸುತ್ತದೆ . ಪ್ರಭುತ್ವವು ಕೂಡಾ ಉಪಭಾಷೆಯನ್ನು ಅದರ ಯೋಚನೆಯ ಹರಿವನ್ನು ವ್ಯಕ್ತಪಡಿಸಿರುವ ಸಂಗತಿಗಳವರೆಗೆ ನಾವು ಈ ಸಂದರ್ಭದಲ್ಲಿ ಕೂಡಾ ಚರ್ಚಿಸಬೇಕಿದೆ . ಭಾಷೆ , ಭಾಷೆಯ ಉತ್ತೇಜನ ಎನ್ನುವ ನೆಲೆಯ ...