ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್ : ಒಂದು ವಿಭಿನ್ನ ಕೃತಿ.

ಸಮುದಾಯಗಳ   ಚರಿತ್ರೆ   ಬರೆಯುದೆಂದರೆ   ಜೇನುಗೂಡಿಗೆ   ಕೈಯಿಕ್ಕುವ   ಪರಿಯೆಂದೇ   ನನ್ನ   ಭಾವನೆ   ಜಾತಿ ,  ವರ್ಗ ,  ಸಮುದಾಯಗಳ   ಮೇಲಿನ   ಬರವಣಿಗೆಗಳು   ಅನೇಕ   ಸಂಗತಿಗಳನ್ನು   ಆಗ್ರಹಿಸುತ್ತವೆ .  ಅವುಗಳ   ಹಿಂದೆ   ಮತ್ತು   ಮುಂದೆ   ಅನೇಕ   ವಿದ್ಯಮಾನಗಳು   ಸಂಚರಿಸಿ ,  ಸುತ್ತಿಕೊಂಡು   ಅತ್ಯಂತ   ಎಚ್ಚರದಿಂದ   ಅವುಗಳನ್ನು   ಹಿಂಬಾಲಿಸುತ್ತವೆ .  ಪ್ರತೀ   ಚರಿತ್ರೆಗಳೂ   ಕೂಡ   ವರ್ತಮಾನದ   ಜರೂರನ್ನು   ಆಗ್ರಹಿಸುತ್ತವೆ .  ಮೊತ್ತ   ಮೊದಲನೆಯದಾಗಿ   ಅಂತಹ   ಜರೂರುಗಳು   ವರ್ತಮಾನವೆಂಬ   ಕಾಲದೇಶ ,  ಅಧಿಕಾರ   ಪ್ರಶ್ನೆ   ಮೊದಲಾದವುಗಳ   ಮೇಲೆ   ಕೂಡಾ   ಆಧರಿಸಿರುತ್ತವೆ .  ಎಲ್ಲಾ   ಬಗೆಯ   ಚರಿತ್ರೆಗಳೂ   ಕೂಡಾ   ಈ   ತೆರನಾಗಿ    ತಮ್ಮದೇ   ತರ್ಕಗಳನ್ನು   ಆಧರಿಸಿ ,  ಪೂರ್ವಾಗ್ರಹ ,  ನಿಹಿತ   ಹಿತಾಸಕ್ತಿಗಳನ್ನು   ಹೊಂದಿಯೇ   ಸಾಗುತ್ತದೆ .  ತಥಾಕಥಿತ   ಆಧುನಿಕ  ( ಮಾಡರ್ನ್ )  ಎನ್ನುವ ...