ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್ : ಒಂದು ವಿಭಿನ್ನ ಕೃತಿ.

ಸಮುದಾಯಗಳ ಚರಿತ್ರೆ ಬರೆಯುದೆಂದರೆ ಜೇನುಗೂಡಿಗೆ ಕೈಯಿಕ್ಕುವ ಪರಿಯೆಂದೇ ನನ್ನ ಭಾವನೆ ಜಾತಿವರ್ಗಸಮುದಾಯಗಳ ಮೇಲಿನ ಬರವಣಿಗೆಗಳು ಅನೇಕ ಸಂಗತಿಗಳನ್ನು ಆಗ್ರಹಿಸುತ್ತವೆಅವುಗಳ ಹಿಂದೆ ಮತ್ತು ಮುಂದೆ ಅನೇಕ ವಿದ್ಯಮಾನಗಳು ಸಂಚರಿಸಿಸುತ್ತಿಕೊಂಡು ಅತ್ಯಂತ ಎಚ್ಚರದಿಂದ ಅವುಗಳನ್ನು ಹಿಂಬಾಲಿಸುತ್ತವೆಪ್ರತೀ ಚರಿತ್ರೆಗಳೂ ಕೂಡ ವರ್ತಮಾನದ ಜರೂರನ್ನು ಆಗ್ರಹಿಸುತ್ತವೆಮೊತ್ತ ಮೊದಲನೆಯದಾಗಿ ಅಂತಹ ಜರೂರುಗಳು ವರ್ತಮಾನವೆಂಬ ಕಾಲದೇಶಅಧಿಕಾರ ಪ್ರಶ್ನೆ ಮೊದಲಾದವುಗಳ ಮೇಲೆ ಕೂಡಾ ಆಧರಿಸಿರುತ್ತವೆಎಲ್ಲಾ ಬಗೆಯ ಚರಿತ್ರೆಗಳೂ ಕೂಡಾ  ತೆರನಾಗಿ  ತಮ್ಮದೇ ತರ್ಕಗಳನ್ನು ಆಧರಿಸಿಪೂರ್ವಾಗ್ರಹನಿಹಿತ ಹಿತಾಸಕ್ತಿಗಳನ್ನು ಹೊಂದಿಯೇ ಸಾಗುತ್ತದೆತಥಾಕಥಿತ ಆಧುನಿಕ (ಮಾಡರ್ನ್ಎನ್ನುವ ಯುಗದ  ರೀತಿಯ ಅನೇಕ ಸಂಗತಿಗಳು ಮುಖ್ಯವಾಗಿ ರಾಷ್ಟ್ರಸಮುದಾಯಜಾತಿವರ್ಗ ಮುಂತಾದ ಗುರುತುಗಳು ಮತ್ತು ಅವುಗಳ ಮೇಲಿನ ರಾಜಕಾರಣದಿಂದ ಹೊರತಾಗಿರದೇ ಅವುಗಳಿಗೆ ಪೂರಕವಾದ ಕಥನ ಮತ್ತು ಮಾನ್ಯತೆಗಳನ್ನು ಆಗ್ರಹಿಸುತ್ತವೆಯುರೋಪಿನ ಒಬ್ಬ ಪ್ರಸಿದ್ಧ ಚರಿತ್ರಕಾರನಂತೂ, ‘ಚರಿತ್ರೆಯೆಂದರೆ ಮಾನ್ಯತೆಮಾನ್ಯತೆ ಗಿಟ್ಟಿಸುವ ಪ್ರಕ್ರಿಯೆ’’ಯೆಂದೇ ಅರುಹಿರುವುದೂ ಕೂಡಾ ಸಮಂಜಸವೂ ಆಗಿದೆಪ್ರತೀ ಚರಿತ್ರೆಯೂ ನಿರ್ಮಾಣ ಮತ್ತು ಪ್ರತೀ ಚರಿತ್ರೆಗಳೂ ನಿರ್ಮಾಣಕ್ಕೆ ತಕ್ಕುದಾದ ತರ್ಕಗಳನ್ನೂ ಕೂಡಾ ಹೊಂದಿರುತ್ತವೆಒಂದು ರೀತಿ ಇಂತಹ ನಿರ್ಮಾಣಗಳು ಮಧ್ಯಯುಗದಲ್ಲಿ ಮತ್ತು ಆರಂಭದ ಮಧ್ಯಯುಗದಲ್ಲಿ ರೂಪುಗೊಂಡ ‘ಚರಿತ (ಉದಾಹರೆಣೆಗೆ ಹರ್ಷಚರಿತ)ಗಳ ರೀತಿಯಲ್ಲೇ ಸಾಗುತ್ತವಾದ್ದರಿಂದ ನಾವು ತುಸು ಮಾರ್ಪಡಿಸಿ ಇವುಗಳನ್ನು ‘ನವ ಚರಿತಗಳೆಂದೇ ಗ್ರಹಿಸಬಹುದಾಗಿದೆ ಕೂಡಾಸಮಾಜವೊಂದುಜಾಗತಿಕ ವ್ಯವಸ್ಥೆಯೊಂದು ತೀವ್ರ ತೆರನಾದ ಬದಲಾವಣೆಸ್ಥಿತ್ಯಂತರಗಳನ್ನು ಹೊಂದಿ ಅದು ವರ್ಗಸಮುದಾಯಗಳ ಮೇಲೆ ಬೀರುವ ಪರಿಣಾಮಗಳೂ ಕೂಡಾ ಸಮುದಾಯಗಳ ಅನನ್ಯತೆ ಮತ್ತು ಗುರುತುಗಳ ಚರಿತ್ರೆ ಮತ್ತು ಅಂತಹ ನ್ಯಾಯಬದ್ಧತೆಯ ಕಥನಗಳನ್ನು ಆಗ್ರಹಿಸಿ ಆಶ್ರಯಿಸುತ್ತವೆಅಂತೆಯೇ ಪ್ರತೀ ಚರಿತ್ರೆಚಾರಿತ್ರಿಕ ಕಥನಗಳೂ ಕೂಡಾ ಅಧಿಕಾರ ಪ್ರಶ್ನೆಯ ಮೇಲೆಯೇ ನಿಂತಿರುವುದಾಗಿದೆಉದಾಹರಣೆಗೆ ವಿಶೇಷವಾಗಿ ಭಾರತದಲ್ಲಿ ಜಾಗತೀಕರಣದ ಪ್ರಕ್ರಿಯೆ ನಡೆದ 1990 ದಶಕದ ನಂತರ ಜಾಗೃತಗೊಂಡ ‘ದಲಿತ ಗುರುತು,ಸಕ್ರಿಯ ರಾಜಕಾರಣ ,ದಲಿತ ಚಳುವಳಿಯ ಕಾರಣದಿಂದ ನಿರ್ಮಿತವಾಗಿತ್ತಾದರೂ ಕೂಡಾ ಚರಿತ್ರೆ ಹಾಗೂ ತಮ್ಮದೇ ಆದ,ತಮಗೆ ಬಹಳ ಮುಖ್ಯವಾದ ಆದ ವೈಯುಕ್ತಿಕ ಚರಿತ್ರೆಯ ಕಥನದಿಂದಲೂ ಕೂಡಾ ಅವು ಏರ್ಪಡುತ್ತವೆಅವು ವರ್ತಮಾನದ ಅಗತ್ಯತೆಗಳನ್ನೂ ಕೂಡಾ ಅದರಿಂದ ಪೂರೈಸಿಕೊಳ್ಳುತ್ತವೆÉ. ಭಾರತದಲ್ಲಿನ ಎಲ್ಲಾ ಜಾತಿಸಮುದಾಯಗಳ ಚರಿತ್ರೆಗಳೂ ಸಹ ಇದೇ ತೆರನಾದುದು.

ಹೆಚ್ಚಿನ ಜಾತಿ ಮತ್ತು ಸಮುದಾಯಗಳ ಚಾರಿತ್ರಿಕ ಮತ್ತು ಸಾಂಸ್ಕøತಿಕ ಶೋಧಅದು ಪಿ.ಹೆಚ್.ಡಿ ಆಗಿರಬಹುದು ಅಥವಾ ಸಾಮಾನ್ಯ ಪ್ರಬಂಧವಾಗಿರಬಹುದುಅವುಗಳನ್ನು  ಸಮುದಾಯದಜಾತಿಯ ಸದಸ್ಯರೇ ಕೈಗೊಂಡು ನಿರ್ವಹಿಸುವುದು ವಾಡಿಕೆಕರ್ನಾಟಕದ ಹೆಚ್ಚಿನ ವಿಶ್ವವಿದ್ಯಾನಿಲಯದಲ್ಲಿ ನಡೆದನಡೆಸುವ  ರೀತಿಯ ಸಮುದಾಯದ ಸಂಪ್ರಬಂಧಗಳನ್ನು ಅವುಗಳಿಗೆ ಸೇರಿದವರೇ ಸಿಂಹಪಾಲು ಕೈಗೊಂಡಿದ್ದನ್ನು ಕೂಡಾ ಗಮನಿಸಬಹುದಾಗಿದೆಒಂದು ರೀತಿ ಅಸ್ಖಲಿತ ಸತ್ಯದ ರೂಪದಲ್ಲಿ ಅದು ಜಾರಿಯಾಗುವುದನ್ನೂ ಕೂಡಾ ಗಮನಿಸಬಹುದುಅಂತಹ ಸಮುದಾಯದ ಬಗೆಗಿನ ಚರಿತ್ರೆಯನ್ನು ಬರೆದರೆ ಅಕಾಡಮೀಶಿಯನ್ಸ್ ಎಂದು ಕೇಳಿಕೊಳ್ಳುವ ಜನರಿಂದ ಹಿಡಿದು ಸಮುದಾಯದ ಸಾಮಾನ್ಯ ಜನ ಹಾಗೂ ಪ್ರಮುಖರವರೆಗೆ ಎಸಗುವ ‘ಪ್ರಶ್ನೆ ನಮ್ಮ ಸಮುದಾಯಕ್ಕೆ ಸೇರಿರದ ಒಬ್ಬ ವ್ಯಕ್ತಿಗೆ ನಮ್ಮ ಬಗ್ಗೆನಮ್ಮ ಸಮುದಾಯದ ಬಗ್ಗೆ ಏನು ಗೊತ್ತುಂಟು ? ಅಥವಾ ಅವನು ಏನು ಬರೆಯಬಲ್ಲಬಂಜೆಗೇನು ಗೊತ್ತು ಹೆತ್ತ ‘ನೋವುಎಂಬ ರೀತಿಯ ವ್ಯಂಗ್ಯ ಉಢಾಫೆಯವರೆಗೂ ಕೂಡಾ ಅದು ಸಾಗುತ್ತದೆಯಾವುದೇ ಜ್ಞಾನ ಶಿಸ್ತುಗಳ ಅಧ್ಯಯನಅಧ್ಯಾಪನ ಯಾರು ಬೇಕಾದರೂ ಮಾಡಬಹುದುಆದರೆ ಕನಿಷ್ಠ ಒಂದು ಜ್ಞಾನಶಿಸ್ತಿನ ಜತೆ ವ್ಯವಹರಿಸಲು ಬೇಕಾಗುವ ಪ್ರಾಥಮಿಕ ಸಂಗತಿಗಳನ್ನು ಅವರು ತಿಳಿದು ಕೊಂಡಿರಬೇಕಾಗುತ್ತದೆಇದಷ್ಟೇ ಪೂರ್ವಾವಶ್ಯಕತೆಯಾಗಿರುತ್ತದೆಅಂತೆಯೇ ದಾಮೋದರ ಧರ್ಮಾನಂದ ಕೊಸಾಂಬಿ ಗಣಿತಜ್ಞ ಎನ್ನುವುದಕ್ಕಿಂತ ಹೆಚ್ಚಾಗಿ ಚರಿತ್ರಕಾರ ಎಂದೆನಿಸಿಕೊಂಡಿದ್ದುಅದೇ ರೀತಿ ಆಯ್ದುಕೊಂಡ ವಿಷಯದ ಮೇಲೆ ಪ್ರೀತಿಆಸ್ಥೆ ಕೂಡಾ ಬೇಕಾಗುತ್ತದೆ ನೆಲೆಯಲ್ಲಿ ವೈಯುಕ್ತಿಕವಾಗಿ ನನ್ನ ಅಭಿಪ್ರಾಯ ಏನೆಂದರೆಯಾವುದೇ ಒಂದು ಜಾತಿಸಮುದಾಯದ ಚರಿತ್ರೆ ಅಥವಾ ಕಥನವನ್ನು ಸರಿಸುಮಾರು ವಸ್ತುನಿಷ್ಠವಾಗಿ ಚಿತ್ರಿಸಬೇಕೆಂದರೆ ಅದಕ್ಕೆ ಸ್ವಲ್ಪಮಟ್ಟಿಗಾದರೂ ಜ್ಞಾನಶಿಸ್ತುಗಳನ್ನು ತಿಳಿದು ಕೊಂಡಿರುವಂತಹ ವ್ಯಕ್ತಿಯ ಯೋಗ್ಯತಾಪತ್ರಗಳೇ ಸಮರ್ಪಕ ಎಂಬುದುಇಂತಹ ವಿದ್ವಾಂಸರು ರಚಿಸುವ ಕಥನಗಳು ಸಮುದಾಯ ಆಗ್ರಹಿಸುವ ಅವರನ್ನು ಬಂಧಿಸುವ ಆಗ್ರಹಗಳನ್ನು ಮೀರಿ ನಿಂತು ತಕ್ಕಮಟ್ಟಿನ ವಸ್ತುನಿಷ್ಠತೆಯಿಂದ ಸಂವಾದಕ್ಕೆ ಅಣಿಯಾಗುತ್ತವೆಸಂಪೂರ್ಣ ವಸ್ತುನಿಷ್ಠತೆ ಯಾರಿಗೂ ಕೂಡಾ ಸಾಧ್ಯವಿಲ್ಲಗತ ಬೇರೆಚರಿತ್ರೆ ಬೇರೆಗತ ಅಥವಾ ಪ್ರಕರಣ ಯಾವಾಗಲೂ ಕೂಡಾ ಒಂದೇ ಆಗಿರುತ್ತದೆ.ಆದರೆ ವಿವಿಧ ಚರಿತ್ರೆಗಳು ಕೇವಲ ನಿರ್ಮಾಣಗಳುಇಲ್ಲಿ  ತಕ್ಕಮಟ್ಟಿನ ವಸ್ತುನಿಷ್ಠತೆ ಅಂದರೆ ವಿದ್ವಾಂಸರುಗಳು ಪ್ರಶ್ನಿಸಿವಿಚಾರಿಸಿತುಲನೆ ಮಾಡಿ ವಿಶ್ಲೇಷಿಸಿ ಹಾಗೂ ಇನ್ನೂ ಕೆಲವು ಸಾಧನಗಳನ್ನು ಬಳಸಿ ನಿರ್ದಿಷ್ಟ ಪಡಿಸುವ ಸಾಪೇಕ್ಷ ಕ್ರಮವೂ ಹೌದಾಗಿದೆ.

ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್  ರೀತಿಯದಾದ ಒಂದು ಪ್ರಯತ್ನಇದರ ಲೇಖಕರು ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಸುರೇಂದ್ರ ರಾವ್ ಕೃತಿ ಮೂಲತಃ ಮಂಗಳೂರಿನ ಬಂಟ್ಸ್ ಫೌಂಡೇಶನ್ರಾವ್ ಅವರಲ್ಲಿ ವಿನಂತಿಸಿ ಬರೆಸಿದ ಯೋಜನೆಆದರೆ ಯಾವುದೇ ಆಗ್ರಹಗಳಿಲ್ಲದೆ ಆಗ್ರಹಗಳು ಎಷ್ಟು ಸಮಸ್ಯೆ ಎಂಬ ಅರಿವಿದ್ದ ಕಾರಣದಿಂದಲೇನೇ ರಾವ್ ಅವರು ಅಂತಹ ಆಗ್ರಹಗಳಿಲ್ಲದ ಕಾರಣದಿಂದ ಒಪ್ಪಿದ್ದೆಂದು ಇಡೀ ಪುಸ್ತಕ ಕೂಡಾ ನಿರೂಪಿಸುತ್ತದೆಅಂತಹ ಸಮುದಾಯ ಕಥನದ ಗುರುತು ಮತ್ತು ರಾಜಕಾರಣದ ಅರಿವಿದ್ದ ಕಾರಣ ಕೂಡಾ ಇಂತಹ ಉತ್ತಮ ಪುಸ್ತಕ ಮೂಡಿದೆ ಬಂಟರು ಯಾರುಎನ್ನುವ ಪ್ರಶ್ನೆಯಿದ್ದಾಗ್ಯೂ ಕೂಡಾ, ‘ಬಂಟರೆನ್ನುವ ಸಮುದಾಯದ ಕುರಿತು ಬಂದಿರಬಹುದಾದ ಒಂದು ಅತ್ಯುತ್ಕøಷ್ಟ ಪುಸ್ತಕ ಇದಾಗಿದೆಉಳಿದಂತೆ ಇದುವರೆಗೆ ಬಂದಿರುವ ಹೆಚ್ಚಿನ ಪುಸ್ತಕಗಳು ಪ್ರಶ್ನೆಯನ್ನು ಹೊಂದಿಯೇ ಇಲ್ಲಬದಲು ಬರೀ ಉತ್ತರದ ಕಣಜಗಳಾಗಿವೆ.‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್ ಪುಸ್ತಕ ಉತ್ತರಗಳಿಗಿಂತ ಮುಖ್ಯವಾಗಿ ಹಲವು ಕೋನಗಳಲ್ಲಿ ಪ್ರಶ್ನೆಯನ್ನು ಎತ್ತುತ್ತದೆಒಂದು ಹಂತದಲ್ಲಿ  ಪ್ರಶ್ನೆಗಳೇ ಮುಖ್ಯ ಉತ್ತರಗಳಿಗಿಂತ ಕೃತಿಬರೆಸಿದ ಕೃತಿಗಿಂತ ಭಿನ್ನವಾಗಿದೆಬರೆಸುವ ಕೃತಿಗಳು  ಹಲವು ಅಪಾಯಗಳನ್ನು ಹೊಂದಿರುತ್ತವೆಮುಖ್ಯವಾಗಿ ಯಾರು ಬರೆಯಿಸುತ್ತಾರೆಯೋ ಅವರ ತಾಳಗಳಿಗೆ ಹೆಜ್ಜೆ ಹಾಕುವ ಅಪಾಯಅಂತಹ ಕೃತಿ ಸಿರಿವೈಭವಪ್ರಚಾರ ಇತ್ಯಾದಿಗಳನ್ನು ಹೊಂದಿಸತ್ಯದಿಂದಸತ್ಯದ ಬಹುತ್ವದಿಂದ ವಿಮುಖವಾಗಿರುತ್ತದೆಇದು ಸತ್ಯದ ಶೋಧ ಮತ್ತು ಪ್ರಶ್ನೆಯ ಗುರಿಯನ್ನು ಸಂಪೂರ್ಣ ವಿಮುಖವಾಗಿಸಿತು ಎನ್ನುವುದಕ್ಕಿಂತಲೂಅಂತಹ ಮಧ್ಯಮ ಮಾರ್ಗದಿಂದಲೇ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ವಿಮುಖಗೊಳಿಸಿತುಬಂಟರ ಬಗೆಗೆ ಇದುವರೆಗೆ ಬಂದ ಹೆಚ್ಚಿನ ಬರಹ ಮತ್ತು ತಥಾಕಥಿತ ಅಧ್ಯಯನಗಳ ಸಮಸ್ಯೆ ಇರುವುದೇ ಇಲ್ಲಿ ರೀತಿಯ ಅಧ್ಯಯನವನ್ನು ನಡೆಸಿದ ಹೆಚ್ಚಿನ ಬಂಟ ಸಮಾಜ ಬಾಂಧವರು ‘ಪದ್ಮಪತ್ರ ಮಿವಾಂಬಸಾ ಅಂದರೆ ಅಂಟಿಯೂ ಅಂಟದ ಹಾಗೆ ವರ್ತಿಸಲೇ ಇಲ್ಲಬದಲು ಅಂಟಿಕೊಂಡರುಇದಲ್ಲದೆ ಯಾರೂ ಕೂಡಾ ಪ್ರಶ್ನೆಯನ್ನೇ ಮಾಡಲಿಲ್ಲಹೀಗೆ ‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್ ಕೃತಿಯ ಮೊತ್ತಮೊದಲ ಶ್ರೇಯವೇ ಅದು ಅಕಡಮಿಕ್ ಆಗಿ ಮತ್ತು ಸಾಮಾನ್ಯ ತರ್ಕಗಳಲ್ಲಿ ಪ್ರಶ್ನೆಗಳನ್ನು ಕೇಳಿದ್ದು ಹಾಗೂ ಬಂಟ ಎನ್ನುವ ಕಲ್ಪಿತ ಸಮುದಾಯದ ನಿರ್ಮಾಣ (ಮೇಕಿಂಗ್)ವನ್ನು ಸಂದೇಹಿಸದ್ದೇ ಆಗಿದೆ.

 

ಇದುವರೆಗಿನ ಬಂಟರ ಬಗೆಗಿನ ಹೆಚ್ಚಿನ ಬರವಣಿಗೆಗಳು ಅಕ್ಷರಶಃ ವಿಜೃಂಭಣೆಯೇ ಆಗಿವೆ ಕಾರಣದಿಂದ ಅವು ಚರಿತ್ರೆಯ ಜತೆಗೆ ಪುರಾಣವನ್ನೂ ಬಳಸಿಕೊಳ್ಳುತ್ತವೆ ಕಾರಣದಿಂದಲೇನೇ ಈವರೆಗೆ ಬಂದಿರುವ ಹೆಚ್ಚಿನ ಬರಹಗಳು ಭೂತಾಳಪಾಂಡ್ಯನಿಂದಲೇ ಆರಂಭವಾಗುತ್ತವೆಇಂತಹ ಮಿಥಕಗಳು ಅನೇಕ ಬುಡಕಟ್ಟು ಸಮುದಾಯಗಳ ಒಂದು ವಿಶಿಷ್ಠ ಲಕ್ಷಣವೂ ಹೌದುಆಫ್ರಿಕಾದ ಬುಡಕಟ್ಟುಗಳಲ್ಲೂ ಸಹ  ತೆರನಾದ ನಂಬಿಕೆಮಿಥ್ಯಗಳಿವೆಆದರೆ  ನಂಬಿಕೆಗಳನ್ನು ಮೈಥಾಲಜಿಕಲ್ ಮತ್ತು ಆಂತ್ರೊಪೋಮೋರ್ಫಿಕ್ ನೆಲೆಯಲ್ಲಿ ಬಳಸಿಕೊಂಡರಷ್ಟೇ ಅವುಗಳ ಅನ್ವಯ ಮತ್ತು ವಿಶ್ಲೇಷಣೆಯಿಂದ ಸರಿಸುಮಾರಾದ ಒಂದು ಜನಪದದಸಮುದಾಯದ ವಿಕಾಸದ ವಿನ್ಯಾಸ ಒದಗಿಬರುತ್ತದೆಇಲ್ಲದಿದ್ದರೆ ಕಾಣ್ಕೆ ಮತ್ತು ಜಾಣ್ಮೆ ಎರಡೂ ಕೂಡಾ ಹಳ್ಳ ಹಿಡಿಯುತ್ತದೆಅದು ಅತ್ಯಂತ ಜಾಣ ಚಿಂತಕನಿಗಷ್ಟೇ ಸಾಧ್ಯ.  ಇನ್ನೂ ದೊಡ್ಡ ಜಾಣ್ಮೆಯೆಂದರೆ ಅಂತಹ ಮಿಥ್ಯವನ್ನು ದುಡಿಸಿಕೊಳ್ಳಲು ಕಷ್ಟವಾದರೆ ಅವುಗಳನ್ನು ಸಂಪೂರ್ಣ ವರ್ಜಿಸುವುದೂ ಆಗಿದೆಇಲ್ಲಿ ಕೂಡಾ ‘ಬಂಟ್ ಎನ್ನುವ ಕಲ್ಪಿತ ಸಮುದಾಯ ಅಥವಾ ಗುರುತು ಅತ್ಯಂತ ನಿಚ್ಚಳವಾಗಿ ಆಧುನಿಕಆಧುನಿಕತೆಯ ಸಂದರ್ಭದಲ್ಲಿ ಒಡಮೂಡಿರುವ ಕಾರಣಲೇಖಕ ಅಂತಹ ಕ್ಲಿಷ್ಟವಾದ ಕೆಲಸಕ್ಕೇನೇ ಕೈ ಹಾಕದೇ  ಗುರುತನ್ನು ಅಥವಾ ಅದರ ಅಭಿವ್ಯಕ್ತಿಯಾಗಿರುವ ಸಮುದಾಯದ ಚರಿತ್ರೆಯನ್ನು 19ನೆಯ ಶತಕದಿಂದಲೇ ಚರ್ಚಿಸಿರುವುದೂ  ಕೂಡಾ ಅತ್ಯಂತ ಯೋಗ್ಯವಾದುದೂ ಆಗಿದೆಅಂತಹ ಪ್ರಾಚೀನ ಚರಿತ್ರೆಯೊಂದಿಗೆ ಜತಕು ಹಾಕುವ ಕ್ರಮ ರಾಜಕೀಯ ಭಾಷಣದಲ್ಲೋ ಅಥವಾ ಜಾತಿಸಮುದಾಯದ ಸಮಾವೇಶದಲ್ಲೋ ಲಾಯಕ್ಕು ಎಂಬ ಪ್ರಜ್ಞಾವಂತಿಕೆ ಕೂಡಾ ಲೇಖಕರಿಗಿರುವುದರಿಂದಲೇನೇ  ಕೃತಿ ಒಂದು ಪ್ರೌಢ ಬರವಣಿಗೆಯ ಉದ್ಯಮವಾಗಿಸಂವಾದವಾಗಿ ನಮ್ಮ ಮುಂದಿದೆಪ್ರಾಚೀನಕಾಲದಲ್ಲಿ ಪೃಥ್ವಿಯಲ್ಲೊದಗಿದ ಘಟವು... ಎನ್ನುವಲ್ಲಿಂದ ಬಂಟರ ಅಥವಾ ಯಾವುದೇ ಒಂದು ಸಮುದಾಯಜಾತಿಯ ಚರಿತ್ರೆಯನ್ನು ಕಟ್ಟುವುದು ಸಾಧ್ಯವಿಲ್ಲ ಎನ್ನುವುದೂ ಕೂಡ ಕೃತಿಯ ಆಶಯವಾಗಿ ನಮಗಿಲ್ಲಿ ಕಾಣಿಸುತ್ತದೆಯಾವುದೇ ಒಂದು ಸಮುದಾಯವನ್ನು ಎಲ್ಲಿಯವರೆಗೆ ಎಳೆಯಬಹುದು ಎನ್ನುವ ಪ್ರಶ್ನೆಗೆ ಬರೀ ಆಧುನಿಕ ಕಾಲಘಟ್ಟದವರೆಗೆ ಮಾತ್ರವೆನ್ನುವ ಉತ್ತರವನ್ನೂ ‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್ ಕೃತಿ ನೀಡುತ್ತದೆ ಬಂಟ್ ಎನ್ನುವ ಒಂದು ಗುರುತು ಯುರೋಪಿನ ವಸಾಹತುಶಾಹೀ ಪ್ರಕ್ರಿಯೆ ನೀಡಿದ ಕೊಡುಗೆಯಾಗಿ ಅದು ಉಂಟುಮಾಡಿದ ಆಧುನಿಕತೆ ಮತ್ತದರ ವಿವಿಧ ಮಾಧ್ಯಮಗಳ ಯೋಗದಾನವೆಂದೇ ಕೃತಿ ಗ್ರಹಿಸುತ್ತದೆಮುಖ್ಯವಾಗಿ 1890 ನಂತರ ಬ್ರಿಟಿಷ್ ಸಾಮ್ರಾಜ್ಯಶಾಹಿ ಯಾವಾಗ ಜನಗಣತಿಯನ್ನು ಆರಂಭಿಸಿತೋಆಗ ಹೇಗೆ ವಿವಿಧ ಜಾತಿ ಸಮುದಾಯಗಳು ಪ್ರತಿನಿಧೀಕರಣವನ್ನು ಕಡೆದು ಈಗ ಇರುವ ತಕ್ಕಮಟ್ಟಿನ ಔಪಚಾರಿಕವಾದ ಜಾತಿ ಎನ್ನುವ ಚೌಕಟ್ಟು ಅಥವಾ ವ್ಯವಸ್ಥೆಯಾಗಿರುವ ಮಟ್ಟದ ಬೀಜರೂಪವನ್ನು ಪಡೆದವೆಂಬುದನ್ನೇ ಲೇಖಕರ ಪ್ರಮುಖ ವಾದಗಳನ್ನಾಗಿ ನಾವು ಗ್ರಹಿಸಬಹುದಾಗಿದೆ ಕೃತಿಯಲ್ಲಿ ಲೇಖಕರ ‘ಬಂಟ್ಬಂಟರ ಸಮುದಾಯದ ನಿರ್ಮಾಣದ ಆರಂಭದ ಹಂತವನ್ನು ಕರಾವಳಿಯಲ್ಲಿ ಎಲ್ಲಾ ಸಮುದಾಯಗಳಿಗಿಂತ ಮೊದಲು ಅಂದರೆ ತಥಾಕಥಿತ ಬಂಟರ ಸಮುದಾಯದ ಜನ ಹಳ್ಳಿಗಳಿಂದ ಬಂದು 20ನೆಯ ಶತಮಾನದಾರಂಭದಲ್ಲಿ ನಗರಗಳಲ್ಲಿ ಓದಲೋಸುಗ ಹಾಸ್ಟೆಲ್ (ಬಂಟ್ಸ್ ಹಾಸ್ಟೆಲ್)ಗಳಲ್ಲಿ ನೆಲೆನಿಂತು ಏಕಛತ್ರಿಕೆಯನ್ನು ಪಡೆಯುವುದರಿಂದಲೇ ಉಂಟಾಯಿತು ಎನ್ನುವ ವಾದವೂ ಕೂಡಾ ಪುಷ್ಠಿಯೋಗ್ಯವಾಗಿದೆಲೇಖಕರಿಗೆ 19ನೆಯ ಶತಮಾನದ ಉತ್ತರಾರ್ಧ ಮತ್ತು 20ನೆಯ ಶತಮಾನದ ಪ್ರಥಮಾರ್ಧದ ಸಮಾಜೋ-ಭೌತಿಕ ಕಾಲದೇಶ ಮತ್ತು ಪರಿಸ್ಥಿತಿಯಿಂದ ಬಂಟರು, ‘ಬಂಟಎನ್ನುವ ಪ್ರಜ್ಞೆ ಮೊಳೆತು ಸಮುದಾಯ ಉಗಮಿಸಿತೇ ಹೊರತು ಭೂತಾಳಪಾಂಡ್ಯನಿಂದಲ್ಲ ಎನ್ನುವ ವೈಚಾರಿಕ ತರ್ಕವೇ ಮುಖ್ಯವಾಗುವುದೂ ಕೂಡಾ ಅತ್ಯಂತ ಉಚಿತವೇ ಆಗಿದೆಇಂತಹ ದೃಷ್ಟಿ ಮತ್ತು ತರ್ಕ ಖಂಡಿತವಾಗಿ ಸಾಮಾನ್ಯ ನೆಲೆಯಲ್ಲಿ ಉದ್ಭವವಾಗದೇಅತ್ಯಂತ ಪರಿಣಿತಿಯಓದಿನ ಮತ್ತು ಜ್ಞಾನ ಶಿಸ್ತಿನ ವ್ಯಾಪ್ತಿ ಮತ್ತು ಸ್ವರೂಪದ ಅರಿವಿನಿಂದಲೇ ಉಗಮಗೊಂಡಿರುವಂತದ್ದು ಎನ್ನುವ ಸಂಗತಿಯನ್ನೂ ಕೂಡಾ ನಮಗೆ ಮನದಟ್ಟು ಮಾಡುತ್ತದೆಕುಂದಾಪುರದಿಂದ ಹಿಡಿದು ಕಾಸರಗೋಡಿನವರೆಗೆ ಕರಾವಳಿಯಲ್ಲಿ 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಉದ್ಭವಿಸಿದ ಬಂಟರ ಹಾಸ್ಟೆಲ್ಗಳೇ ಕ್ರಮೇಣ ಛತ್ರಛ್ಛಾಯೆಗಳಾಗಿ ಸ್ವತಂತ್ರೋತ್ತರ ಭಾರತದಲ್ಲಿ ವಿವಿಧ ಬಂಟರ ಸಂಘಗಳಾಗಿ ರೂಪುಗೊಂಡಿರುವ ಅನುಭವಜನ್ಯ ಸಾಕ್ಯಗಳೂ ಸಹ ‘ಬಂಟ ಎನ್ನುವ ಸಮುದಾಯದ ಆಧುನಿಕ ವಿಕಾಸದ ಕಥೆಯನ್ನು ನಮಗೆ ಮನವರಿಕೆ ಮಾಡುವುದು.

ಬಂಟ ಎನ್ನುವ ಸಮುದಾಯದ ಬಗ್ಗೆ ಕೂಡಾ ಕೃತಿ ಅತ್ಯಂತ ನಿರ್ದಿಷ್ಠವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.‘ಬಂಟರ ಯಾನೆ ನಾಡವರ ಎನ್ನುವ ಸಂಯೋಜನೆಯನ್ನು ಅದು ಹೆಚ್ಚಾಗಿ ಗಮನಹರಿಸುವುದಿಲ್ಲಅದು ಚಾರಿತ್ರಿಕವಾದ ದಾಖಲೆ ಮತ್ತು ಮಾಹಿತಿಗಳಿಂದ ಪುಷ್ಠಿಗೊಂಡು  ಜತಕು ಎನ್ನುವುದೇ ಒಂದು ರೀತಿಯ ಅಸಹಜ ಗುರುತು ಎಂಬಂತೆ ಕಂಡಿದೆಅಂದರೆ ಸರಿಸುಮಾರು ಕಾಸರಗೋಡ್ ನಿಂದ ಹಿಡಿದು ಉಡುಪಿಯವರೆಗಿನ ಅಥವಾ ಶಾಂಭವೀ ನದಿ ತೀರದ ಬ್ರಹ್ಮಾವರದವರೆಗಿನ ಭೂಮಿ ಮತ್ತು ಭಾಷೆಯ ವ್ಯಾಪ್ತಿಯಲ್ಲಿ ಅಂದರೆ ತುಳು ಭಾಷೆಯ ನೆಲೆಯಲ್ಲಿಯೇ ಬಂಟರ ಗುರುತನ್ನು ಅದು ಗ್ರಹಿಸಿದೆಇದು ಸಮಂಜಸವೂ ಕೂಡಾಇದಕ್ಕೆ ಚಾರಿತ್ರಿಕ ಮತ್ತು ಸಾಮಾಜಿಕ ನೆಲೆ ಸಾಕ್ಶ್ಯಗಳಿರುವುದನ್ನೂತುಳು ಭಾಷೆಯ ತಳಹದಿಯಿರುವುದನ್ನೂ ಕೂಡಾ ಅತ್ಯಂತ ಸ್ಪಷ್ಟವಾಗಿ ಕೃತಿ ತಿಳಿಸುತ್ತದೆಅಲ್ಲದೆ ಬಂಟ ಎನ್ನುವ ಶಬ್ದದ ನಿಹಿತತೆನಿರ್ವಚನ ಮತ್ತು ಅದನ್ನು ವಿರಚಿಸಿದ ತುಳು ಭೌತಿಕ ಪರಿಸರದ ನೆಲೆಯಿಂದಲೇ ಅದನ್ನು ಗಮನಿಸಲಾಗಿದೆಯೇ ಹೊರತು 1950 ನಂತರ, 1970 ಸುಮಾರಿಗೆ  ಏನು ಕುಂದಾಪುರದ ನಾಡವ ಮತ್ತು ತುಳು ಬಂಟ ಎನುವ ಕಲ್ಪಿತ ಸಮುದಾಯಗಳ ಕಸಿಯ ನಂತರದ ‘ಬಂಟ ಸಮುದಾಯವನ್ನು ಅನುಲಕ್ಷಿಸದಿರುವುದು ಸಾಧುವೂ ಆಗಿದೆ ಕೃತಿಯ ಇನ್ನೊಂದು ಮುಖ್ಯ ಮಗ್ಗುಲೆಂದರೆ 19ನೆಯ ಶತಮಾನದ ಉತ್ತರಾರ್ಧ ಮತ್ತು ಸುಮಾರು 20ನೆಯ ಶತಮಾನದ ಆರಂಭದಲ್ಲಿದ್ದ ಬಂಟರ ಸಮಾಜೋಆರ್ಥಿಕರಾಜಕೀಯ ಸ್ಥಿತಿಯ ಚಿತ್ರಣಇಡೀ ಕರಾವಳಿಯ ಆಧುನಿಕ ಚರಿತ್ರೆಯ ಲೋಪವೆಂದರೆ ಅದು ಬ್ರಾಹ್ಮಣೇತರ ಸಮುದಾಯಗಳನ್ನು ಸುಸಂಧೀಕರಿಸದಿರುವುದೇ ಆಗಿದೆಅದು ಬ್ರಾಹ್ಮಣ ಸಮುದಾಯದಗೌಡ ಸಾರಸ್ವತ ಮತ್ತು ಸಾರಸ್ವತದಂತಹ ಸಮುದಾಯದ ತೊಟ್ಟಿಲುಗಳನ್ನು ಮಾತ್ರ ಘನವೆಂದು ತಿಳಿದು ಮೇಲಕ್ಕೆ ಕಟ್ಟಿದೆಇಡೀ ಕರಾವಳಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಗಾಥೆಯೆಂದರೆ ಅದು ಒಂದು ರೀತಿ ಇಂಗ್ಲಿಶ್ ಶಿಕ್ಷಿತ ಜನಿವಾರೀಯ ಕಥನವಾಗಿಯೇ ಗೋಚರಿಸುತ್ತದೆಯಾರೊಬ್ಬ -ಬ್ರಾಹ್ಮಣಅಸ್ಪøಶ್ಯದೀನ-ದಲಿತ ಅಂತಹ ಗಾಥೆಯಲ್ಲಿ ನಿಲ್ಲಲೂ ಕೂಡ ಜಾಗವಿಲ್ಲದಿರುವಂತಹ ಸ್ಥಿತಿ ನಿರ್ಮಾಣವಾಗಿದೆ ಚರಿತ್ತ್ರೆಯಲ್ಲಿಅದು ಅತ್ಯಂತ ಪ್ರಜ್ಞಾಪೂರ್ವಕ ಬರವಣೆಗೆಯ ಕ್ರಮವೂ ಆಗಿತ್ತುಅಂತಹ ಬರವಣಿಗೆ ಯಾರನ್ನ ಬೆರೆಯಬೇಕುಯಾರನ್ನು ಸೇರಿಸಬಾರದುಯಾರಿಗೆ ಜಾಗ ಕೊಡಬಾರದುಯಾರಿಗೆ ಜಾಗ ಕಾಣಿಸಬೇಕುಎಂಬಂತಹ ಬರಹಮತ್ತು ಸಂಪಾದನೆಯ ತರ್ಕನಿಯಮಗಳ ಮೇಲೆ ಸಾಗಿದ್ದೂ ಕೂಡಾ ಒಂದು ಕಾರಣಅದು ಸವರ್ಣೀಯತೆಜಾತಿಅಕ್ಷರ ಕಲಿಕೆಯ ಮೀಸಲಾತಿಗರ್ವರಾಜಕಾರಣ ಮುಂತಾದ ಸಂಗತಿಗಳ ಮನೋಸ್ಥಿತಿಗಳ ಅಭಿವ್ಯಕ್ತಿಯಾಗಿಯೂ ಸಹ ಗೋಚರಿಸುತ್ತದೆಆದರ ಕಾರಣದಿಂದ ಕರಾವಳಿಯ ಆಧುನಿಕ ಚರಿತ್ರೆಯೆಂದರೆ ಕೆಲವೇ ಕೆಲವು ನಾಯಕರನ್ನುಕೆಲವೇ ಕೆಲವು ಹೋರಾಟಗಾರರನ್ನು ಪದೇ ಪದೇ ಉಲ್ಲೇಖಿಸಿ ಕ್ಲೀಷೆಗೊಳಿಸುವ ಕ್ರಮವಾಗಿಯೂ ಕೂಡಾ ಬೆಳೆಯಿತುಅವರನ್ನು ಬಿಟ್ಟರೆ ಚರಿತ್ರೆ ಇಲ್ಲವೇ ಇಲ್ಲ ಎನ್ನುವ ನಿರ್ವಾತವನ್ನೂ ಅದು ಸೃಷ್ಟಿಸಿತುಆದರೆ  ಕೃತಿ ಅತ್ಯಂತ ಮನೋಜ್ಞವಾಗಿ  ಕಾಲಘಟ್ಟದಲ್ಲಿ ಕೆಳಸ್ಥರ (ಸಬಾಲ್ಟರ್ನ್) ಚರಿತ್ರೆಯ ಘಟಕಗಳಂತಿರುವ ಬಂಟ ಸಮುದಾಯದ ಅನೇಕ ಪುರುಷ ಮತ್ತು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಸಮಕಾಲೀನ ಬ್ರಿಟಿಷ್ ವರದಿಪತ್ರಾಗಾರ ವರದಿಗಳುಯುಗಧರ್ಮ ಮತ್ತು ಮಂಗಳೂರು ಸಮಾಚಾರ ದಂತಹ ಪತ್ರಿಕೆಗಳಿಂದ ಹೆಕ್ಕಿತೆಗೆದು ಪರ್ಯಾಯವಾಗಿ ನಿಲ್ಲಿಸಿ ಪರ್ಯಾಯದಿಂದ ಒಂದು ರೀತಿ ಇಡೀ ಕರಾವಳಿಯ ಆಧುನಿಕ ಚರಿತ್ರೆಯ ಸಮಾಜೋರಾಜಕೀಯ ಚರಿತ್ರೆಯನ್ನು ಹೊಸ ಬೆಳಕುಗಳೊಂದಿಗೆ ನೋಡಬೇಕಾದ ಅನಿವಾರ್ಯತೆ ಇದೆಯೇನೋ ಏನ್ನುವ ಸಂಶಯವನ್ನು ಕೂಡ ಹುಟ್ಟು ಹಾಕಿದೆ ಕಾಲದ ಪ್ರಮುಖ ಬಂಟ ಉದ್ಯಮಿಗಳುಸಮಾಜಸುಧಾರಕರು,ಪಿಲಾಂತ್ರಪಿಸ್ಟ್ಗಳು ಮತ್ತು ಆರಂಭದ ಶಿಕ್ಷಣದ ಅಧ್ವರ್ಯುಗಳನ್ನೂಗಾಂಧೀವಾದಿಗಳನ್ನೂ ಕೂಡಾ ಹೆಸರಿಸಿ ದಾಖಲಿಸಿ ಒಂದು ರೀತಿಯ ಹೊಸ ಸಂವಾದ ಮತ್ತು ಚರಿತ್ರೆಯ ರಚನೆಯ ಬಾಗಿಲನ್ನು ತೆರೆಸಿದೆ.

ಒಟ್ಟಾರೆ ‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್ ಕೃತಿ ಬಹುತೇಕ ಎಲ್ಲಾ  ಮೊದಲಿನ ಬಂಟರ ಬಗೆಗಿನ ಬರಹಗಳಿಗಿಂತ ಭಿನ್ನವಾಗಿ ನಿಂತಿದೆಪುಸ್ತಕದ ನಡುವಿನಲ್ಲಿ ಬರುವ ಅನೇಕ ಗುತ್ತುಗಳ ಮನೆಯ ಚಿತ್ರಅವುಗಳ ಕೆಳಗಿನ ವೈಭವದ ಶೀರ್ಷಿಕೆಯು ಲೇಖಕರ ಕೆಲಸವಲ್ಲವೆಂದೇ ನನ್ನ ಅನಿಸಿಕೆಅದಕ್ಕೆ ಲೇಖಕರ ಪ್ರಜ್ಞಾಪೂರ್ವಕ ಸಮ್ಮತಿಯೂ ಇರಲಿಕ್ಕಿಲ್ಲವೆಂದೇ ನನ್ನ ಭಾವನೆಒಟ್ಟಾರೆ ಪುಸ್ತಕ ಮಿತಿಗಳಿಂದ ಹೊರತಾದುದು ಸಂಪೂರ್ಣವಾಗಿಯೆಂದೂ ಅಲ್ಲಆದರೂ ಕೃತಿಯ ಒಟ್ಟಾರೆ ಆಕೃತಿ ಅತ್ಯಂತ ಶಿಸ್ತುಬದ್ಧತಾರ್ಕಿಕಪ್ರಶ್ನಾಸಹಿತಸಂವಾದಶೀಲೀಯವೆಂದೇ ನನ್ನ ತಿಳುವಳಿಕೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ