ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದಾಮೋದರ ಧರ್ಮಾನಂದ ಕೊಸಾಂಬಿ : ಭಾರತೀಯ ಚರಿತ್ರಶಾಸ್ತ್ರದ ಮಾದರಿ ಸ್ಥಿತ್ಯಂತರ

ವೈಜ್ಞಾನಿಕ ಜ್ಞಾನದಲ್ಲಿ ಕ್ರಾಂತಿಯಾಗುವುದು ಬರಿಯ ಮಾಹಿತಿ ಸಂಗ್ರಹದಿಂದಲ್ಲ , ಬದಲು ಒಂದು ಮಾದರಿ ಬದಲಾವಣೆ , ಸ್ಥಿತ್ಯಂತರವಾಗುವುದರ ಮೂಲಕ . ಇದರಿಂದ ನಮ್ಮ ಪ್ರಾಕ್ ಕಲ್ಪನೆ , ಊಹೆ ಅಥವಾ ಹೈಪೋತಿಸೀಸ್ ‍ ಗಳನ್ನು ಪರೀಕ್ಷಿಸಿ ಪರಿಹರಿಸುವುದರ ಜತೆಗೆ ಹೊಸ ರೀತಿಯ ಪ್ರಶ್ನೆಗಳನ್ನು ಹಾಕುವುದೂ ಕೂಡಾ ಸಾಧ್ಯ . ಪ್ರಖ್ಯಾತ ಚಿಂತಕ ಥಾಮಸ್ ಕೊಹ್ನ್ ‍ ನ ಈ ಮಾತು ವಿಜ್ಞಾನಕ್ಕೆ ಅನ್ವಯಿಸೋ ಹಾಗೆ ಇತಿಹಾಸಕ್ಕೆ ಕೂಡಾ . ಭಾರತೀಯ ಇತಿಹಾಸ ರಚನೆ ಅಥವಾ ಚರಿತ್ರಶಾಸ್ತ್ರದಲ್ಲೂ ಕೂಡಾ ಈ ರೀತಿಯ ಮೂರು ಮಾದರಿ ಸ್ಥಿತ್ಯಂತರಗಳಿವೆ . ಜೇಮ್ಸ್ ಮಿಲ್ ಮೊದಲನೆಯ ಮಾದರಿಯಾಗಿ , ಭಾರತೀಯ ಇತಿಹಾಸವನ್ನು ಹಿಂದೂ - ಹಿಂದುಳಿಕೆ , ಮುಸ್ಲಿಂ - ಸ್ಥಗನ ಮತ್ತು ಬ್ರಿಟೀಷ್ ಎಂದು ವಿಭಾಗೀಕರಿಸಿದ . ವಿನ್ಸೆಂಟ್ ಸ್ಮಿತ್ ‍ ನದು ಎರಡನೆಯ ಮಾದರಿ ಪರಿವರ್ತನೆ , ‘ ವಂಶಗಳ ಏಳುಬೀಳು ಮತ್ತು ಕ್ರೊನಾಲಜಿ ಅಥವಾ ಕಾಲಾನುಕ್ರಮಣಿಕೆ ’ ಯ ಸ್ವರೂಪಗಳಿಗೆ ಒತ್ತು ನೀಡಿ , ಮೂರನೆಯ ಸ್ಥಿತ್ಯಂತರೀಯ ಮಾದರಿ ಪರಿಕ್ರಮ ದಾಮೋದರ ಧರ್ಮಾನಂದ ಕೊಸಾಂಬಿಯದು , ‘ ಉತ್ಪಾದನಾಂಶಗಳು - ಉತ್ಪಾದನಾ ಸಂಬಂಧಗಳ ಕ್ರೊನಾಲಜಿಕಲ್ ವಿಶ್ಲೇಷಣೆ , ಸಂಕೀರ್ಣತೆಯ ವ್ಯಾಖ್ಯಾನವೇ ಭಾರತೀಯ ಇತಿಹಾಸ , ಸಂಸ್ಕ ø ತಿ , ನಾಗರೀಕತೆ ’ ಎನ್ನುವುದರ ಮೂಲಕ . ಡಿ . ಡಿ . ಕೊಸಾಂಬಿ ಭಾರತೀಯ ಚರಿತ್ರಶಾಸ್ತ್ರದಲ್ಲ...