ತೃತೀಯ ಜಗತ್ತು ಮತ್ತು ಸಿನಿಮಾ
ತೃತೀಯ ಜಗತ್ತು ಮತ್ತು ಸಿನಿಮಾ ತೃತೀಯ ಜಗತ್ತು ಯಾವುದು ? ಎನ್ನುವ ರಾಜಕೀಯ , ಸಾಂಸ್ಕ ø ತಿಕ ಮತ್ತು ಸಮಾಜೋ - ಚಾರಿತ್ರಿಕ ಪ್ರಶ್ನೆಯನ್ನು ಎದುರಿಸುತ್ತಲೇ ಪ್ರಸ್ತುತ ವಿಷಯವನ್ನು ಚರ್ಚೆಗೆ ಹಚ್ಚುವುದು ಅತ್ಯಂತ ಖುಷಿ ಕೊಡುವ ವಿಚಾರ ಅತ್ಯಂತ ಸೀಮಿತವಾಗಿ ನಾನು ಸಿನಿಮಾ ಚರ್ಚೆಯನ್ನು ಮಾಡಬೇಕಾಗಿರುವ ಕಾರಣ ತೃತೀಯ ಜಗತ್ತಿನ ರಾಜಕೀಯ - ಬೌದ್ಧಿಕ ಚರ್ಚೆಯನ್ನು ಮಾಡುವುದಿಲ್ಲ . ತೃತೀಯ ಜಗತ್ತಿನ ಸಿನಿಮಾ ಎಂದರೇನು ? ಅದರ ಲಕ್ಷಣಗಳು , ತೃತೀಯ ಜಗತ್ತಿನ ಭೂಗೋಳ , ಆ ಸಿನಿಮಾದ ಕಾಳಜಿಗಳು , ಕಾಳಜಿಗಳು ವ್ಯಕ್ತವಾಗಲು ಇರುವಂತಹ ಜರೂರುಗಳು , ತೃತೀಯ ಸಿನಿಮಾದ ಸಾಂಸ್ಕ ø ತಿಕ ಆಯಾಮಗಳು ಇತ್ಯಾದಿಗಳ ಜಗತ್ತಿನಲ್ಲಿ , ಸಮಗ್ರವಾದ ಸಿನಿಮಾ ಜಗತ್ತಿನಲ್ಲಿ ತೃತೀಯ ಜಗತ್ತಿನ ಸಿನಿಮಾವನ್ನು ಸಂದರ್ಭೀಕರಿಸಬೇಕಾದದ್ದು ಹೇಗೆ ? ಅವುಗಳ ಸ್ಥಾನ ಏನು ? ಎನ್ನುವುದು ನನ್ನ ಈ ಬರಹದ ಉದ್ದೇಶ . ಸಾಂಸ್ಕ ø ತಿಕವಾಗಿ ಸಮೃದ್ಧವಾದ , ಶೋಧನಾತ್ಮಕ ರಚನೆಗಳನ್ನು ಹೊಂದಿ , ರಾಜಕೀಯವಾಗಿ ಉಗ್ರ - ಹರಿತವಾಗಿರುವ ತೃತೀಯ ಜಗತ್ತಿನ ಸಿನಿಮಾ , ಜಾಗತಿಕ ಸಿನಿಮಾದಲ್ಲಿ ಬಹಳ ಮುಖ್ಯವಾದ ಅಲೆ , ಸ್ಥಾನ , ಪ್ರಭಾವವನ್ನು ...