ದೇಗುಲ ಪ್ರವೇಶ; ಸಮಕಾಲೀನ ಸಂವಾದ
ದೇಗುಲ ಪ್ರವೇಶ ಸಮಕಾಲೀನ ಸಂವಾದವೂ ಹೌದು . ಚಾರಿತ್ರಿಕ ವಿದ್ಯಮಾನವೂ ಹೌದು ಮತ್ತು ಕೆಲವೊಮ್ಮೆ ಎರಡೂ ಮಿಳಿತವಾಗುವ ಸನ್ನಿವೇಶವೂ ಹೌದು . ದೇಗುಲ ಪ್ರವೇಶದ ಸಂದರ್ಭದಲ್ಲಿ ದೇಗುಲ ಎಂದರೇನು ? ದೇಗುಲ ಪ್ರವೇಶ ಎಂದರೇನು ? ಮತ್ತು ದೇಗುಲ ಪ್ರವೇಶದ ಸಮಕಾಲೀನ ಸಂದರ್ಭವೇನು ? ಎನ್ನುವುದರ ಚರ್ಚೆ ಬಹುಮುಖ್ಯವಾದುದಾದ ಕಾರಣ ಕ್ರಮವಾಗಿ ಅವುಗಳ ಚರ್ಚೆ ತುಂಬಾ ಮುಖ್ಯವೆಂದೇ ನನ್ನ ನಂಬಿಕೆ . ದೇಗುಲ ಪ್ರವೇಶ ಮತ್ತು ದೇಗುಲ ರೂಪುಗೊಂಡ , ದೇಗುಲಗಳು ರೂಪುಗೊಳ್ಳುವ ಚಾರಿತ್ರಿಕ ಪ್ರಕ್ರಿಯೆ ತುಂಬಾ ಪ್ರಮುಖವಾದುದು . ಇಂತಹ ನೆಲೆಯಲ್ಲಿ ಚಾರಿತ್ರಿಕ ಪ್ರಕ್ರಿಯೆ , ಚಾರಿತ್ರಿಕ ಪ್ರಕ್ರಿಯೆಯ ಭಾಗವಾಗಿರುವ ಸಮಕಾಲೀನ ಸಾಮಾಜಿಕ , ರಾಜಕೀಯ ಮತ್ತು ಸಾಂಸ್ಕ ø ತಿಕ ಸ್ವರೂಪಗಳನ್ನು ಅರಿಯದೇ , ಅವುಗಳು ದೇಗುಲವೆಂಬ ಭೌತಿಕ , ಸಾಂಸ್ಥಿಕವಾದ , ಸಾಮಾಜಿಕ ಸಂಸ್ಥೆಯನ್ನು ರೂಪಿಸಿದ ಕಾರಣ , ಪ್ರಕ್ರಿಯೆಯನ್ನು ತಿಳಿಯದೇ ನಾವು ದೇಗುಲ ಪ್ರವೇಶ ಮತ್ತು ದೇಗುಲ ಪ್ರವೇಶದ ರಾಜಕಾರಣವನ್ನು ತಿಳಿಯಲು ಸಾಧ್ಯವಾಗುವುದಿಲ್ಲ , ಅಂತಹ ವಾಗ್ವಾದವನ್ನು ಸಮಕಾಲೀನ ಸಂದರ್ಭಕ್ಕೂ ಎಳೆದು ತರಲಾಗುವುದಿಲ್ಲ . ಆದರೆ ಈ ಚಾರಿತ್ರಿಕ ಪ್ರಕ್ರಿಯೆಯನ್ನು ಗುರುತಿಸುವುದು ಅಷ್ಟು ಸುಲಭದ ಮಾತಲ್ಲ . ಚಾರಿತ್ರಿಕ ಪ್ರಕ್ರಿಯೆಯೆಂಬುದೇ ಅತ್ಯಂತ ಸಂಕೀರ್ಣವಾದುದೆನ್ನುವುದು ಪ್ರಸಿದ್ಧ ಚಿಂತಕ...