Shikshana Sota Vichara....
ಸುಮಾರು 1990ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಐPಉ- ಐibಚಿಡಿಚಿಟisಚಿಣioಟಿ, Pಡಿivಚಿಣisಚಿಣioಟಿ, ಉಟobಚಿಟisಚಿಣioಟಿ ಪ್ರಕ್ರಿಯೆಗಳು ಬರೀ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಲ್ಲಿ ಮಾತ್ರ ತನ್ನ ಪರಿಣಾಮಗಳನ್ನು ಉಂಟುಮಾಡಲಿಲ್ಲ, ಬದಲಿಗೆ ಶಿಕ್ಷಣವನ್ನೂ ಒಳಗೊಂಡಂತೆ ಸಾಂಸ್ಕøತಿಕವಾಗಿ ಅದು ಉಂಟುಮಾಡಿದ ಪರಿಣಾಮ ಅತ್ಯಂತ ಮಹತ್ವದ್ದು. ಅದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವೆರಡನ್ನೂ ಉಂಟುಮಾಡಿತಾದರೂ ಕೂಡಾ, ಸಿಂಹಪಾಲು ಪರಿಣಾಮ ಅಧನಾತ್ಮಕವಾದುದು. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಕಷ್ಟು ರಚನೀಯ ಬದಲಾವಣೆಯನ್ನು ಉಂಟುಮಾಡಿತು. ಭಾರತದಲ್ಲಿನ ಕೇಂದ್ರ ಶಿಕ್ಷಣ ವ್ಯವಸ್ಥೆಯ ಭಾಗಗಳಾದ Uಉಅ, ಂIಅಖಿಇಗಳು ಜಾಗತೀಕೃತ ವಿಶ್ವ ಆರ್ಥಿಕ ವ್ಯವಸ್ಥೆಗೆ ಅನುರೂಪವಾಗಿ ತಮ್ಮ ನೀತಿ ನಿಲುಮೆಯನ್ನು ಬದಲಾಯಿಸಿಕೊಂಡುವು. ಇಂತಹ ಪ್ರಯತ್ನ ಇಡೀ ಭಾರತದಲ್ಲಿ ಒಂದು ಶಿಕ್ಷಣ ಉದ್ಯಮವನ್ನು ಸೃಷ್ಟಿ ಮಾಡಿತು. ಬಂಡವಾಳ, ಮಾರುಕಟ್ಟೆ, ವಿನಿಮಯ ಉತ್ಪಾದನೆಗಳೇ ಅದರ ಮಂತ್ರವಾದುವು. ಇದು ಮುಖ್ಯವಾಗಿ 3 ಸಮಸ್ಯೆಗಳನ್ನು ಸೃಷ್ಟಿಸಿತು. ಒಂದು: ಶಿಕ್ಷಣವನ್ನು ಔಪಚಾರಿಕ ಉದ್ಯಮ-ಮಾರುಕಟ್ಟೆಯನ್ನಾಗಿಸಿ ಭಾರತದ ಶಿಕ್ಷಣ ವ್ಯವಸ್ಥೆಯ ಉದ್ಯಮವನ್ನು ಅಂತರಾಷ್ಟ್ರೀಯ ಶಿಕ್ಷಣ ವಾಣಿಜ್ಯದ ಜತೆಗೆ ಜೋಡಿಸಲು ಪ್ರಯತ್ನಿಸಿದ್ದು, ಎರಡು: ಮಾರುಕಟ್ಟೆಯ ಭರದಲ್ಲಿ ಶಿಕ್ಷಣವನ್ನು ಉದ್ಯಮವಾಗಿಸಿ ಶಿಕ್ಷಣದ ಅತ್ಯಂತ ಮಹತ್ವದ ಗುರಿಗಳನ್ನು ಮೂಲೆಗುಂಪಾಗಿಸಿದ್ದು, ಮೂರು: ಭಾರತೀಯ ಅಥವಾ ದೇಶೀಯ ಅನ್ನಬಹುದಾದ ಹಲವು ಶಿಕ್ಷಣ ಪರಂಪರೆ, ಯೋಚನೆ, ಚಿಂತನಾಕ್ರಮ, ಅತ್ಯಂತ ಮುಖ್ಯವಾಗಿ ಕಲಿಕೆಯ ಕ್ರಮವನ್ನು ನಿರಾಕರಿಸುತ್ತಾ ಇದು ಸಾಗಿತು. ಇದು ಪ್ರಜ್ಞೀಯ ಮತ್ತು ಅಪ್ರಜ್ಞೀಯ ನೆಲೆಯಲ್ಲಿ ತನ್ನದಲ್ಲದ ಕ್ರಮವನ್ನು, ಅಮೆರಿಕಾ-ಯುರೋಪ್ ಪ್ರಣೀತ ‘ಶಿಕ್ಷಣ’ವೆನ್ನುವ ಕ್ರಮವನ್ನು ಪರಿಚಯಿಸಿ, ಈಗಾಗಲೇ ಅಸ್ತಿತ್ವದಲ್ಲಿದ್ದ ಕಲಿಕೆಯ ಬಹು ವೈವಿಧ್ಯದ ಕ್ರಮವನ್ನು ಸಾಯಿಸಿತು. ಭಾರತದಲ್ಲಿ ಕಲಿಕೆಯ ಕ್ರಮದ ವಿಶ್ವಗಳಿದ್ದುವು, ಇದನ್ನು ನಿರಾಕರಿಸಿ ಜಾಗತೀಕರಣವು ಶಿಕ್ಷಣವನ್ನು ಪ್ರಭಾವಿಸಿ ಒಂದು ಏಕಶಿಲೀಯ (ಮೊನೋಲಿಥಿಕ್) ನೆಲೆಯ ಕ್ರಮವನ್ನು ಹೇರಿತು. ಇದು ಭಾರತದ ಮಟ್ಟಿಗೆ ಒಂದು ರೀತಿಯಲ್ಲಿ ಹೇಳುವುದಾದರೆ ಹೊಸದಾಗಿ ಬ್ರಿಟಿಷರು ಸಾಂಸ್ಕøತಿಕ ಮತ್ತು ಶೈಕ್ಷಣಿಕವಾಗಿ ಮಾಡಬಹುದಾದ ಆಕ್ರಮಣವನ್ನು ಅಥವಾ ಒಂದು ನೆಲೆಯ ನಿಯೋಕಲ್ಚರಲ್ ಇಂಪೀರಿಯಲಿಸಮ್ ಕ್ರಮವನ್ನು ಸೃಷ್ಟಿಸಿತು ಎನ್ನಬಹುದಾಗಿದೆ. ಈ ಒಂದು ಪ್ರಕ್ರಿಯೆ ಭಾರತದಂತಹ ರಾಷ್ಟ್ರಕ್ಕೆ ತುಂಬಾ ಅಪಾಯಕಾರಿ. ಇದು ಇಲ್ಲಿನ ವೈವಿಧ್ಯತೆ, ಸಹಜತೆ ಮತ್ತು ಸೃಜನಶೀಲತೆಯನ್ನೇ ಹೊಸಕಿ ಹಾಕಬಲ್ಲದು ಎಂಬುದು ಈ ಸಂದರ್ಭದ ಭಾರತೀಯ ಶಿಕ್ಷಣ ತಜ್ಞ ಮಧು ಎಸ್. ಪ್ರಕಾಶ್ ಸೇರಿದಂತೆ ಪ್ರಮುಖ ಚಿಂತಕರ ಅಭಿಪ್ರಾಯ.
‘ಶಿಕ್ಷಣ’ ಅನ್ನುವ ಸ್ವರ್ಗ ಸದೃಶ ಸಂಗತಿ ಇಡೀ ಮಾನವ ಜನಾಂಗವನ್ನೂ ಉನ್ನತೀಕರಿಸುತ್ತದೆ ಎನ್ನುವ ಭ್ರಮೆಯಿಂದಲೇ ಸುಮಾರು 15ನೇ ಶತಕದ ಫ್ರೆಂಚ್ ಸಮಾಜದಲ್ಲಿ (1470ರಲ್ಲಿ) ಈ ಶಿಕ್ಷಣ ಊಹೆ ಮತ್ತು ಅಂದಾಜಿನ ಮೇಲೆ ಆರಂಭವಾಯ್ತು. ಇಂತಹ ಶಿಕ್ಷಣ ನಿಖರತೆ, ಸ್ಪಷ್ಟತೆ, ಅನುಭವಜನ್ಯತೆಯಂತಹ ಗುಣಗಳನ್ನು ತನ್ನ ಮೇಲೆ ಆರೋಪಿಸಿಕೊಂಡ ಕ್ರಮವಂತೂ ಒಂದು ವಿಡಂಬನೆ ಅಕ್ಷರಶ:. ಇಂತಹ ಎರವಲು ಪಡೆದ ಶಿಕ್ಷಣ ಎನ್ನುವ ಕ್ರಮ ಭಾರತೀಯ ಸಮಕಾಲೀನ ಸಂದರ್ಭದಲ್ಲಿ ಹುಟ್ಟುಹಾಕಿದ ಸಮಸ್ಯೆ, ಸಂಕ್ಲೇಷಗಳು ನಿಜವಾಗಿಯೂ ಘೋರರೂಪಿಯಾದದ್ದು. ಇಂತಹ ಸಮಸ್ಯೆಗಳನ್ನು ನಿವಾರಿಸಲು ಒಂದು ಕಮ್ಯೂನಿಸ್ಟ್ ಸಮಾನತೆ ಸ್ಥಾಪನೆ ಆಶಯದ ಹೋರಾಟವೋ ಅಥವಾ ಇಡೀ ಜಗತ್ತಿನ ಒಂದು ಆದರ್ಶವೆಂಬಂತೇನೇ ಬಿಂಬಿತವಾದ ‘ಗಾಂಧಿ’-ಅಹಿಂಸಾತ್ಮಕ ತಾತ್ವಿಕ ಹೋರಾಟವೋ ಮೂಡಬೇಕು ಎನ್ನುವ ಕೆಲವು ಚಿಂತಕರ ಅಭಿಪ್ರಾಯಗಳು ಅತ್ಯಂತ ಪ್ರಮುಖವೆಂದೇ ನನ್ನ ಗ್ರಹಿಕೆ. ಅತ್ಯಂತ ಮುಖ್ಯವಾಗಿ ಬಂಡವಾಳೀಕೃತ ಶಿಕ್ಷಣ ವ್ಯವಸ್ಥೆಯು ಸೃಷ್ಟಿಸಿರುವ 2 ವರ್ಗಗಳು, ಅಂದರೆ ಸಮಕಾಲೀನ ಜಗತ್ತಿನ ಪ್ರಮುಖ ಶಿಕ್ಷಣ ಚಿಂತಕರುಗಳಾದ ಇವಾನ್ ಇಲ್ಲಿಚ್ ಮತ್ತು ಎಸ್ತೆವಾ ಗುಸ್ತೆವಾ ಹೇಳುವ ಹಾಗೆ, ಜ್ಞಾನ ಬಂಡವಾಳಿಗರು ಮತ್ತು ‘ಜ್ಞಾನ ದರಿದ್ರರು ಎನ್ನುವ ಸಮಾಜೋ-ಸಾಂಸ್ಕøತಿಕ ಅಸಮಾನತೆಯ ಮಾದರಿಯ ವರ್ಗಗಳನ್ನು ನಿರ್ಮಾಣ ಮಾಡಿದೆ. ಇದು ಬರಿಯ ವರ್ಗ ಸೃಷ್ಟಿಯಾಗಿರದೇ ‘ಜ್ಞಾನ ದರಿದ್ರರ’ ಅಸ್ತಿತ್ವ ಮತ್ತು ಆತ್ಮಸಾಕ್ಷಿಯನ್ನೇ ನಾಶಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಭಾರತೀಯ ಮತ್ತು ಕನ್ನಡದ ಸಂದರ್ಭದಲ್ಲಂತೂ, ಒಂದು ಕಡೆ ಶ್ರೀಮಂತ, ಮಾಹಿತಿ ಇರುವ ಮತ್ತು ಜ್ಞಾನ ಉದ್ಯಮ-ಬಂಡವಾಳದ ಕ್ರಿಯೆಯಲ್ಲಿ ಭಾಗಿಯಾಗಿರುವ ಜನ ವ್ಯಾಪಕವಾಗಿ IIಖಿ, IIಒ, IISಅ, ಃIಖಿS PIಐಂಓI ಮುಂತಾದ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಈ ಪ್ರಕ್ರಿಯೆಯ ಕೇಂದ್ರ ಮತ್ತು ಪರಿಧಿ-ಎರಡೂ ಕಡೆ ಇಲ್ಲದೇ ತ್ರಿಶಂಕುಗಳಾಗಿರುವ ಬಡವರು, ಆದಿವಾಸಿಗಳು, ಬುಡಕಟ್ಟು ಜನರು ಮತ್ತು ಭಾರತದ ಬಹುಪಾಲು ಹಳ್ಳಿಗಳಲ್ಲಿ ವಾಸವಾಗಿರುವ ಕುಗ್ರಾಮವಾಸಿಗಳು ಈ ವ್ಯವಸ್ಥೆ ಒಳಗೆ ಬರುವುದಿರಲಿ, ಬದಲು ಈ ವ್ಯವಸ್ಥೆಯ ಬಣ್ಣ, ಭಾಷೆ, ಸ್ವರೂಪ, ಆಕೃತಿ, ಔಪಚಾರಿಕತೆಯನ್ನು ನೋಡಿ ಭಯಭೀತರಾಗಿದ್ದಾರೆ ಮತ್ತು ಹೆಚ್ಚು ಹೆಚ್ಚು ಕನ್‍ಫ್ಯೂಶನ್‍ಗೆ ಒಳಗಾಗಿದ್ದಾರೆ. ಹೀಗೆ ಅತ್ಯಂತ ಸ್ಪಷ್ಟವಾಗಿ ಈ ಶಿಕ್ಷಣವೆಂಬ ತಥಾಕಥಿತ ವಿದ್ಯಮಾನ ಸೃಷ್ಟಿಸಿರುವ ಮನೋಭಾವ-ದೃಷ್ಟಿಯಂತೂ ಅಪಾಯಕಾರಿಯಾಗಿದೆ. ಅದು ಮಾನವ ಸಮಾನತೆ, ಮಾನವ ಘನತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಸಾಮಾಜೀಕರಣಗೊಳಿಸುವುದೇ ಇಲ್ಲ, ಬದಲಿಗೆ ಬಂಡವಾಳ ವ್ಯವಸ್ಥೆಯ ಭಾಗವಾಗಿರುವ ಅಸಮಾನತೆ, ವರ್ಗ ತಾರತಮ್ಯವನ್ನು ಪ್ರಚೋದಿಸುತ್ತದೆ. ಒಟ್ಟಾರೆ ಪ್ರಜಾಪ್ರಭುತ್ವದ ಸೂಕ್ಷö್ಮಬೇರುಗಳನ್ನೂ ಕೂಡಾ ನಾಶಮಾಡಹೊರಟಿದೆ ಎಂಬುದೇ ನನ್ನ ಅಭಿಮತ. ವೃತ್ತಿಪರ ನೆಲೆಯಿಂದ ಕೂಡಾ ‘ಶಿಕ್ಷಣ’ ಎನ್ನುವ ಪರಿಸ್ಥಿತಿ ವಿಫಲವಾಗಿದೆಯೆಂದೇ ನನ್ನ ಅಭಿಮತ. ಅದು ತನ್ನ ಉದ್ಯಮ-ಬಂಡವಾಳ-ಮಾರುಕಟ್ಟೆಯ ಪ್ರಕ್ರಿಯೆಯಲ್ಲಿ ಮೊದಲು ಒಂದು ವರ್ಗಕ್ಕೆ ಭಾಗವಹಿಸಲು ಅವಕಾಶ ಕೊಡುವುದಿಲ್ಲ. ಅದೇ ರೀತಿ ಅವರನ್ನು ಮಾನವ ಸಂಪನ್ಮೂಲಗಳೆಂದು ಪರಿಗಣಿಸದೇನೇ ಅವರನ್ನು ವೃತ್ತಿಪರೀಯ ಅವಕಾಶಗಳಿಂದ ವಂಚಿಸುತ್ತದೆ. ಅಂತಹ ಜ್ಞಾನದರಿದ್ರರು ಅಕ್ಷರಶ: ಅಕ್ಷರ ಅಸ್ಪøಶ್ಯರಾಗಿ ಉಳಿದುಬಿಡುತ್ತಾರೆ. ಶಿಕ್ಷಣದ ಉದ್ಯಮದಲ್ಲಿ, ಹೊಸ ವರ್ಗ ಸಂಘರ್ಷದಲ್ಲಿ ಹೆಚ್ಚು ಜ್ಞಾನವನ್ನು ಬಳಸುವ ಜನವರ್ಗಕ್ಕೆ ಹೆಚ್ಚು ಮೌಲ್ಯ. ಸಮಾಜ ಅವರ ಮೇಲೆ ಸಾಕಷ್ಟು ಹಣ ಹೂಡಿ ಅವರನ್ನು ಮಾನವ ಸಂಪನ್ಮೂಲವಾಗಿ ರೂಪಿಸಿರುತ್ತದೆಯಾದ್ದರಿಂದ ಉತ್ಪಾದನಾ ಸಾಧನಗಳು ಬಹುವಾಗಿ ಅವರಿಗಾಗಿಯೇ ಮೀಸಲು. ಅಂಥ ಶಿಕ್ಷಿತರು ಮಾತ್ರವೇ ಈ ಸಮಾಜದಲ್ಲಿ ಎಲ್ಲ ಅನುಕೂಲಗಳಿಗೆ ಹಕ್ಕುದಾರರಾಗುತ್ತಾರೆ. ಉಳಿದ ಬಹುಸಂಖ್ಯಾತರ ಪಾಲಿಗೆ ಉಳಿಯುವುದು ದಾರಿದ್ರö್ಯ ಮತ್ತು ಅನರ್ಹತೆಗಳು ಮಾತ್ರ. ಮುಖ್ಯವಾಗಿ ನಾನು ಶಿಕ್ಷಣವೆಂಬ ಕಲಿಕೆಯ ವಿರುದ್ಧದ ಪ್ರಕ್ರಿಯೆ ನಿವಾರಣೆಯಾಗಬೇಕೆಂದೇ ಅಭಿಪ್ರಾಯಪಡುತ್ತೇನೆ. ಈ ಶಿಕ್ಷಣವೆಂಬುದರ ಬದಲಿಗೆ ಜಗತ್ತಿನ ಅದೆಷ್ಟೋ ನಾಗರೀಕತೆ ಮತ್ತು ಸಮುದಾಯಗಳಲ್ಲಿ ಕಾಲ-ದೇಶ-ಭೂೀಗೋಳ ಸಾಪೇಕ್ಷವಾದ ಅತ್ಯಂತ ಅನನ್ಯವಾದ, ವೈವಿಧ್ಯಮಯವಾದಂತಹ ‘ಕಲಿಕೆ’ (ಐeಚಿಡಿಟಿiಟಿg)ಯ ಕ್ರಮಗಳು ಇಂತಹ ‘ಶಿಕ್ಷಣ’ವೆನ್ನುವ ಸಂಗತಿಯನ್ನು ಪುನ: ಸ್ಥಾಪಿಸಿದರೆ ಮಾತ್ರ ಇದು ಕೈಗೂಡುತ್ತದೆ. ಅದೂ ಅಲ್ಲದೆ ಈ ‘ಶಿಕ್ಷಣ’ವೆನ್ನುವ ಮಹಾಮಂತ್ರ ಅಥವಾ ಅಜೆಂಡಾ ಅಥವಾ ಕಾರ್ಯಸೂಚಿ ಅಥವಾ ಉದ್ಯಮಸೂಚಿಯು ಜನರನ್ನು ಬದುಕುವುದಕ್ಕಾಗಲೀ ಅಥವಾ ಕೆಲಸ ಮಾಡುವುದಕ್ಕಾಗಲೀ ತಯಾರು ಮಾಡುತ್ತಿಲ್ಲ. ಅದು ಅಕ್ಷರಶ: ಯಾಂತ್ರಿಕವಾಗಿ ಕಾರ್ಖಾನೆಯಲ್ಲಿ ಹೆಂಚನ್ನು, ಪದಾರ್ಥವನ್ನು ಉತ್ಪಾದಿಸುವ ಹಾಗೆ, ಅದರ ಪ್ರಯೋಜನ, ನಿಷ್ಪ್ರಯೋಜನದ ವಿವಕ್ಷೆಯ ಹೊರತಾಗಿಯೂ ಕೂಡಾ ಉತ್ಪಾದಿಸುತ್ತದೆ. ಅರ್ಥಶಾಸ್ತ್ರ ಮತ್ತು ಸಾಮಾನ್ಯ ಗ್ರಹಿಕೆಯೂ ಹೇಳುವ ಹಾಗೆ ಬೇಡಿಕೆಗಿಂತ ಜಾಸ್ತಿ ಒಂದು ವಸ್ತು ಉತ್ಪಾದಿತವಾದರೆ ಅದು ಸಹಜವಾಗಿ ತನ್ನ ಬೇಡಿಕೆಯನ್ನು ಕಳೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಕೊನೆಗೆ ಅದು ಅಕ್ಷರಶ: ತ್ಯಾಜ್ಯವಾಗುತ್ತದೆ, ಜಂಕ್ ಆಗುತ್ತದೆ. ಒಬ್ಬ ವ್ಯಕ್ತಿ 3 ವರ್ಷ ಪದವಿ ಪಡೆದರೂ ಕೂಡಾ ಅದು ಆತ ಎಷ್ಟು ದಿನ ತರಗತಿಯ ಬೆಂಚ್‍ನಲ್ಲಿ ಕುಳಿತಿದ್ದ ಎನ್ನುವುದನ್ನು ಸೂಚಿಸುತ್ತದೆಯೇ ಹೊರತು, ಆತ ಕಸುಬು ಕಲಿತದ್ದಕ್ಕಾಗಲೀ ಅಥವಾ ತಜ್ಞತೆಯನ್ನು ಗಳಿಸಿದ್ದಕ್ಕಾಗಲೀ ಪ್ರಮಾಣಪತ್ರವಾಗಲಾರದು. ಉದ್ಯೋಗ ಭರವಸೆಗಿಂತ ಅದು ಖಾಯಂ ನೈರಾಶ್ಯವನ್ನು ಉಂಟುಮಾಡುತ್ತದೆ. ಟ್ಯಾಕ್ಷಿ ಚಾಲಕರಾಗಿ ಅಥವಾ ಹೋಟೆಲು ಕೆಲಸಗಾರರಾಗಿ ದುಡಿಯಬೇಕಾಗಿ ಬರುವ ಇಂಜಿನಿಯರ್‍ಗಳು ಮತ್ತು ಲಾಯರುಗಳು ಅನುಭವಿಸುವ ಅವಮಾನವೇ ಇದಕ್ಕೆ ಸಾಕ್ಷಿ. ಆದರೆ ಇನ್ನೊಂದು ದಿಕ್ಕಿನಿಂದ, ಶಿಕ್ಷಿತರ ಇಂಥ ಅವಮಾನವೇ ಅಂಥ ಪದವಿಗಳಿಲ್ಲದವರಿಗೆ ಒಂದು ಬಿಡುಗಡೆಯ ಅನುಕೂಲವಾಗಿ ಕಾಣಿಸುವುದೂ ಇದೆ. ಯಾಕೆಂದರೆ ಅಂಥ ಸ್ಥಿತಿಯಲ್ಲಿಯೇ ಅವರು ತಮ್ಮಲ್ಲಿರುವ ಬುದ್ಧಿ, ಕೌಶಲ ಮತ್ತು ಕಸುಬುಗಾರಿಕೆಯನ್ನು ಅರಿತು ತಮ್ಮನ್ನೇ ಪುನರ್ ಮೌಲ್ಯೀಕರಿಸಿಕೊಳ್ಳುತ್ತಾರೆ.
ಈ ಮೇಲಿನ ಶಿಕ್ಷಣ ಸೃಷ್ಟಿಸಿದ ಕೆಲವು ಚರ್ಚೆ, ಸಮಸ್ಯೆಗಳಿಗೆ ಪರಿಹಾರವೇನು? ಜಗತ್ತಿನ ಆಫ್ರಿಕಾ, ಐಚಿಣiಟಿ ಅಮೆರಿಕಾದ ಮೆಕ್ಸಿಕೋ-ಚಿಲಿ-ಪೆರು, ಭಾರತದಂತಹ ರಾಷ್ಟ್ರಗಳಲ್ಲಿ ಒಂದು ಹೊಸ ಅಲೆ ಎದ್ದಿದೆ. ಅದೆಂದರೆ ‘ಶಿಕ್ಷಣ’ ಸಾಕು, ಬದಲು ಹಳೆಯ ಸೃಜನಶೀಲ ಕಲಿಕೆಯ ಮಾರ್ಗಗಳು ಬೇಕು ಎಂಬ ಹೊಸ ಜಂಜಾವಾತವೇ ಈಗ ಬೀಸುತ್ತಿದೆ. ಅಂತಹ ಕಲಿಕೆಯನ್ನು ಅಗತ್ಯಕ್ಕೆ ತಕ್ಕಂತೆ ಆರ್ಥಿಕ ರೂಪಾಂತರ ಮಾಡಬೇಕು ಎಂಬುದು ಈ ರೀತಿಯ ಹೊಸ ಕಾಣ್ಕೆಯನ್ನು ಅರಸುತ್ತಿರುವ ತೃತೀಯ ಜಗತ್ತು ಮತ್ತು ಅಲ್ಲಿನ ಚಿಂತಕರ, ಶಿಕ್ಷಣ ತಜ್ಞರ ಅಂಬೋಣ. ಭಾರತವೂ ಸೇರಿದಂತೆ ‘ಎಜುಕೇಶನ್’ (ಶಿಕ್ಷಣ) ಎಂಬ ಪದವನ್ನು, ಹೊಸ ಪರ್ಯಾಯ ಪದವಾದ ‘ಟು ಲರ್ನ್’(ಕಲಿಯುವುದು) ಎಂಬ ಕ್ರಿಯಾಪದ ಸ್ಥಳಾಂತರಗೊಳಿಸುತ್ತಿದೆ. ಇದರೊಳಗೆ ಇರುವ ಪ್ರತಿಯೊಬ್ಬನೂ ಸರ್ಕಾರಿ ಅಥವಾ ಖಾಸಗಿ ಶಿಕ್ಷಣಸಂಸ್ಥೆಯನ್ನು ಅವಲಂಬಿಸುವುದು ಅನಿವಾರ್ಯ, ಆದರೆ ಕಲಿಯುವುದು ಎಂಬ ಕ್ರಿಯಾರೂಪವು ವ್ಯಕ್ತಿಯ ಒಳಗೆ ಇರುವ ಶಕ್ತಿ-ಸಾಮಥ್ರ್ಯವೊಂದರ ಆವಿಷ್ಕಾರ. ಅದು ಇತರರೊಂದಿಗೂ, ಪ್ರಕೃತಿಯೊಂದಿಗೂ ಇದ್ದುಕೊಂಡು ಮುನ್ನಡೆಯುವ ಒಂದು ಕ್ರಿಯಾಶೀಲ ಸಂಬಂಧ. ಅಂದರೆ ಕಲಿಯುವ ಪ್ರಕ್ರಿಯೆ ವೈಯಕ್ತಿಕವಾದ ಒಂದು ಕೆಲಸ. ಹಾಗೆ ಕಲಿಯುವುದಕ್ಕೂ ಮತ್ತು ಆ ಮೂಲಕ ಬದುಕುವ ಕ್ಷಮತೆಯನ್ನು ವರ್ಧಿಸಿಕೊಳ್ಳಲಿಕ್ಕೂ ಇರುವ ಮಾರ್ಗ ಒಂದೇ, ಅದು ನಿಸರ್ಗ ಮತ್ತು ಜಗತ್ತಿನಿಂದ ಕಲಿಯುವುದು. ಬದಲಿಗೆ ಅದು ಜಗತ್ತಿನ ಬಗ್ಗೆ ಕಲಿಯುವುದಲ್ಲ. ಇಂತಹ ಹೊಸ ದೃಷ್ಟಿ, ಬೆಳಕು ಜಗತ್ತಿನ ಪ್ರತಿ ಪ್ರದೇಶವನ್ನು ವ್ಯಾಪಿಸಬೇಕಾಗಿದೆ ಅತ್ಯಂತ ಶೀಘ್ರವಾಗಿ.
ಶಿಕ್ಷಣ ಮತ್ತು ಕಲಿಕೆಯ ಸಂದರ್ಭದಲ್ಲಿ ಪ್ರಸ್ತುತ ಸಂದರ್ಭ ನೈತಿಕತೆಯ ಮೇಲೂ ಕೂಡಾ ಹೊಸ ಚರ್ಚೆಯನ್ನು ಹುಟ್ಟು ಹಾಕುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ವಿವೇಕಾನಂದರು ಹೇಳುವ ಹಾಗೆ, ‘ಮಾನವನ ಪರಿಪೂರ್ಣ ವಿಕಾಸವೇ ಶಿಕ್ಷಣ’ ಮತ್ತು ‘ಶಿಕ್ಷಣ ಕೊನೆಗೊಳ್ಳುವುದು ಗುಣಗಳ ವಿಕಾಸದ ಮೂಲಕ’ ಎನ್ನುವ ಎರಡು ವಾಕ್ಯಗಳನ್ನು ನೆನೆದರೆ ಶಿಕ್ಷಣ ಒಂದು ಹಂತದಲ್ಲಿ ತಾನು ಸಾಧಿಸಬೇಕಾದುದನ್ನು ಸಾಧಿಸದೆ ವಿಫಲವಾಗಿದೆ, ಕೃತಕವಾಗಿ ಸೊರಗಿದೆ ಎಂದೇ ನನ್ನ ಅಭಿಪ್ರಾಯ. ಕಳೆದ ಕೆಲವು ದಿನಗಳ ಹಿಂದೆ ಇಡೀ ದೇಶವನ್ನು ತಲ್ಲಣಿಸಿದ ದೆಹಲಿ ಅತ್ಯಾಚಾರದಂತಹ ಪ್ರಕರಣಗಳು, ಶಿಕ್ಷಣ ಸೋತಿವೆಯೇನೋ? ಎಂಬ ಭಾವನೆಯನ್ನು ಮೂಡಿಸುತ್ತಿದೆ. ಶಿಕ್ಷಣದಿಂದ ಮಾನವ ಸಂಪನ್ಮೂಲವಾಗಿ ರೂಪುಗೊಳ್ಳುತ್ತಿದ್ದಾನೆಯೇ ಹೊರತು ಮಾನವ ಸಂಬಂಧ, ನಿಸರ್ಗ ಪ್ರೀತಿ, ತಾದಾತ್ಮö್ಯ, ಸಹಬಾಳ್ವೆ, ಸಂತುಲಿತ ಅಭಿವೃದ್ಧಿ ಮುಂತಾದ ಗುಣ ಪ್ರವೃತ್ತಿಗಳನ್ನು ಸಾಧಿಸಿಲ್ಲವೇನೋ ಎಂಬ ಭಾವನೆ ಮತ್ತು ಆತಂಕವನ್ನು ಮೂಡಿಸುತ್ತಿದೆ. ಒಟ್ಟಿನಲ್ಲಿ ಹೊಸ ಆತಂಕದ ಸ್ಥಿತಿ ಮತ್ತು ಒತ್ತಡದ ಮೌನಕ್ಕೂ ಇದು ಕಾರಣವಾಗಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ